ಮುಕೇಶ್ ಅಂಬಾನಿ 
ವಾಣಿಜ್ಯ

ಅನಂತ್, ಧನರಾಜ್‌ಗೆ ಆರ್‌ಐಎಲ್ ಅಧಿಕಾರ ಹಸ್ತಾಂತರಿಸಲು ಮುಖೇಶ್ ಅಂಬಾನಿ ಮುಂದು!

ಅಕ್ಟೋಬರ್ ಮಧ್ಯಭಾಗದ ಸಮಯ, ದೆಹಲಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧಿಕೃತ ನಿವಾಸ ಲೋಕ ಕಲ್ಯಾಣ ಮಾರ್ಗ ನಂಬರ್ 7ಗೆ ಒಬ್ಬ ಯುವಕ ಅವರನ್ನು ಕಾಣಲು ಬಂದಿದ್ದ. ದೇಶದ ಅತಿದೊಡ್ಡ ಖಾಸಗಿ ಕಾರ್ಪೊರೇಟ್ ವಲಯ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಉನ್ನತ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಮಾತುಕತೆ ನಡೆಸಲು ಭೇಟಿಯದು.

ನವದೆಹಲಿ: ಅಕ್ಟೋಬರ್ ಮಧ್ಯಭಾಗದ ಸಮಯ, ದೆಹಲಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧಿಕೃತ ನಿವಾಸ ಲೋಕ ಕಲ್ಯಾಣ ಮಾರ್ಗ ನಂಬರ್ 7ಗೆ ಒಬ್ಬ ಯುವಕ ಅವರನ್ನು ಕಾಣಲು ಬಂದಿದ್ದ. ದೇಶದ ಅತಿದೊಡ್ಡ ಖಾಸಗಿ ಕಾರ್ಪೊರೇಟ್ ವಲಯ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಉನ್ನತ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಮಾತುಕತೆ ನಡೆಸಲು ಭೇಟಿಯದು.

ಕಪ್ಪು ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಪ್ರಧಾನಿ ಮೋದಿಯವರ ನಿವಾಸಕ್ಕೆ ಬಂದ ಯುವಕ ಮತ್ತಿನ್ಯಾರು ಅಲ್ಲ ದೇಶದ ಎರಡನೇ ಅತಿದೊಡ್ಡ ಆಗರ್ಭ ಶ್ರೀಮಂತ ಮುಕೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ. ಸರ್ಕಾರ, ರಾಜಕೀಯ ಮತ್ತು ಕಾನೂನು ವ್ಯವಹಾರಗಳಿಗೆ ಸಂಬಂಧಿಸಿದ ವಿಷಯಗಳನ್ನು ಪುತ್ರನಿಗೆ ಹಸ್ತಾಂತರಿಸಿದ್ದು ಅದರ ಕುರಿತು ಪ್ರಧಾನಿಯವರ ಜೊತೆ ಚರ್ಚಿಸಲು ಅನಂತ್ ಅಂಬಾನಿ ಬಂದಿದ್ದರು ಎಂದು ಮೂಲಗಳು ಹೇಳುತ್ತವೆ.

ಅಂಬಾನಿ ಪುತ್ರ ಕಳೆದೊಂದು ತಿಂಗಳಿನಿಂದ ಹಲವು ರಾಜ್ಯಗಳಿಗೆ ಭೇಟಿ ನೀಡುತ್ತಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದಾರೆ. ಹಲವು ಮುಖ್ಯಮಂತ್ರಿಗಳ ಜೊತೆ ಉತ್ತಮ ಬಾಂಧವ್ಯವನ್ನು ಅನಂತ್ ಬೆಳೆಸಿಕೊಂಡಿದ್ದಾರೆ, ಅದರಲ್ಲೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗಿನ ಸಂಬಂಧ ತುಸು ಹೆಚ್ಚಾಗಿಯೇ ಇದೆ. ಅಂದು ಪ್ರಧಾನಿಯನ್ನು ಭೇಟಿ ಮಾಡಿದ್ದ ಅನಂತ್ ಒಂದೂವರೆ ಗಂಟೆ ಕಾಲ ಮಾತುಕತೆ ನಡೆಸಿದ್ದರು. ಮುಂಬೈಯ ಆರ್ ಐಎಲ್ ಕೇಂದ್ರ ಕಚೇರಿಯಲ್ಲಿ ನಡೆಯುತ್ತಿರುವ ಪ್ರಮುಖ ಬದಲಾವಣೆ ಕುರಿತು ಅಂದು ಸುದೀರ್ಘ ಮಾತುಕತೆಯಾಗಿತ್ತು.

ರಿಲಯನ್ಸ್ ಇಂಡಸ್ಟ್ರೀಸ್ ನ ತೈಲೋದ್ಯಮಕ್ಕೆ ಸಂಬಂಧಿಸಿದ ಕಾನೂನು ವ್ಯವಹಾರಗಳನ್ನು 27 ವರ್ಷದ ಅನಂತ್ ನೋಡಿಕೊಳ್ಳಲಿದ್ದಾರೆ. ಇನ್ನು ಅವರ ಸೋದರ ಮತ್ತು ಸೋದರಿ ಆಕಾಶ್ ಮತ್ತು ಇಶಾ ಸಂಸ್ಥೆಯ ಹೊಸ ಉದ್ಯಮವಾದ ಡಿಜಿಟಲ್, ಟೆಲಿಕಾಂ, ರಿಟೈಲ್ ನ್ನು ನೋಡಿಕೊಳ್ಳುತ್ತಾರೆ. ಆಕಾಶ್ ತನ್ನ ಸೋದರಿ ಇಶಾ ಜೊತೆ ಮಾರ್ಕೆಟಿಂಗ್ ಮತ್ತು ಬ್ರಾಂಡ್ ಉದ್ಯಮ ಅಭಿವೃದ್ಧಿಯ ಕುರಿತು ಗಮನ ಹರಿಸಲಿದ್ದಾರೆ. ಅನಂತ್ ಕಳೆದ ವರ್ಷ ಕಂಪೆನಿಯ ಆರ್ ಐಎಲ್ ನ ಶುದ್ಧ ಇಂಧನ ಮಂಡಳಿಗೆ ಸೇರ್ಪಡೆಯಾಗಿದ್ದರು.

ರಿಲಯನ್ಸ್ ಗ್ರೂಪ್‌ನ ಪ್ರಮುಖ ಟ್ರಬಲ್‌ಶೂಟರ್ ಎಂದೇ ಹೆಸರಾಗಿರುವ ರಾಜ್ಯಸಭಾ ಸದಸ್ಯ ಪರಿಮಳ್ ನಾಥವಾನಿ ಅವರು ತಮ್ಮ ಮಗ ಧನರಾಜ್ ನಾಥವಾನಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ ಎಂದು ಮೂಲಗಳು ಹೇಳುತ್ತವೆ. ಅವರು ಇನ್ನು ಮುಂದೆ ರಾಷ್ಟ್ರ ರಾಜಧಾನಿಯಲ್ಲಿ ಕಾರ್ಪೊರೇಟ್ ವ್ಯವಹಾರಗಳನ್ನು ನಿರ್ವಹಿಸಲಿದ್ದಾರೆ. ಧನರಾಜ್ ಇದುವರೆಗೆ ಗುಜರಾತ್‌ನಲ್ಲಿ ಆರ್‌ಐಎಲ್ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ಈಗ ಅವರಿಗೆ ದೆಹಲಿಯಲ್ಲಿ ಹೊಸ ಕಚೇರಿಯನ್ನು ನೀಡಲಾಗುತ್ತಿದೆ.

ಧನರಾಜ್ ಅಹಮದಾಬಾದ್ ಮೂಲದ ಉದ್ಯಮಿ ರಾಜೇಶ್ ಖಂಡ್ವಾಲಾ ಅವರ ಮಗಳನ್ನು ವಿವಾಹವಾಗಿದ್ದಾರೆ. ಖಂಡ್ವಾಲಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರೊಂದಿಗೆ ಹಣಕಾಸಿನ ಸಂಪರ್ಕವನ್ನು ಹೊಂದಿದ್ದರು. ಧನರಾಜ್ ಕಳೆದ ವಾರ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು, ಈ ಹಿಂದೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಈ ಹುದ್ದೆಯನ್ನು ಹೊಂದಿದ್ದರು. ಅಹಮದಾಬಾದ್‌ನಲ್ಲಿ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದಲ್ಲಿ ಧನರಾಜ್ ಪ್ರಮುಖ ಪಾತ್ರ ವಹಿಸಿದ್ದರು.

ಅನಂತ್ ಮತ್ತು ಧನರಾಜ್ ಇನ್ಮುಂದೆ ದೆಹಲಿಯಲ್ಲಿ ಸರ್ಕಾರಿ ವ್ಯವಹಾರಗಳನ್ನು ನಿಭಾಯಿಸಲಿದ್ದಾರೆ. ರಿಲಯನ್ಸ್ ನ ಹಳೆ ಉಸ್ತುವಾರಿಗಳಾದ ವಿ ಬಾಲಸುಬ್ರಮಣಿಯನ್, ಎ.ಕೆ.ಎ ಬಾಲು ಮತ್ತು ಪರಿಮಳಾ ನಾಥ್ವಾನಿ ಅವರು ಕೆಲವು ಸಮಯದವರೆಗೆ ಸರ್ಕಾರಿ ವ್ಯವಹಾರಗಳಲ್ಲಿ ಇಬ್ಬರು ಯುವ ನಾಯಕರಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತಾರೆ ಎಂದು ಮೂಲಗಳು ಹೇಳುತ್ತವೆ.

ಕಂಪೆನಿಯ ಯುವಪಡೆ ಮತ್ತು ಹಳೆ ಅನುಭವಿಗಳ ಗುಂಪು ಜೊತೆ ಸೇರಿ ಜಿಯೋ ಬ್ರ್ಯಾಂಡ್ ನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಯೋಜಿಸಿದೆ. ರಿಲಯನ್ಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅವರು ತಮ್ಮ ಹೂಡಿಕೆದಾರರು ಮತ್ತು ಬೆಂಬಲಿಗರಿಗೆ ತಮ್ಮ ಮೇಲೆ ಮತ್ತು ಕಂಪೆನಿ ಮೇಲೆ ವಿಶ್ವಾಸ ಮೂಡಲು  ರಿಲಯನ್ಸ್ ನ್ನು ಬ್ರಾಂಡ್ ಹೆಸರಾಗಿ ಆಯ್ಕೆ ಮಾಡಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT