ಪೇಟಿಎಂ ಆಪ್ 
ವಾಣಿಜ್ಯ

ಪೇಟಿಎಂ ಷೇರು ಶೇ.11 ರಷ್ಟು ಕುಸಿತ!

ಪೇಟಿಎಂ ನ ಷೇರುಗಳು ಮಂಗಳವಾರದಂದು ಶೇ.11 ಕ್ಕಿಂತಲೂ ಹೆಚ್ಚಿನ ಕುಸಿತ ಕಂಡಿದೆ.

ಮುಂಬೈ: ಪೇಟಿಎಂ ನ ಷೇರುಗಳು ಮಂಗಳವಾರದಂದು ಶೇ.11 ಕ್ಕಿಂತಲೂ ಹೆಚ್ಚಿನ ಕುಸಿತ ಕಂಡಿದೆ.

475.55 ರೂಪಾಯಿಗಳಿಗೆ ಷೇರುಗಳು ಕುಸಿತ ಕಂಡಿದ್ದು, ಬೆಳಿಗ್ಗೆ ಎನ್ಎಸ್ಇಯಲ್ಲಿ ಷೇರುಗಳ ಮೌಲ್ಯ 474.30 ರೂಪಾಯಿಗಳಿಗೆ ಕುಸಿತ ಕಂಡಿತ್ತು ಎಂದು ಜಾಗತಿಕ ಬ್ರೋಕರೇಜ್ ಸಂಸ್ಥೆ ಮ್ಯಾಕ್ವಾರಿ ವರದಿ ಪ್ರಕಟಿಸಿದೆ.
 
ಮುಖೇಶ್ ಅಂಬಾನಿ ಅವರ ಜಿಯೋ ಫೈನಾನ್ಷಿಯಲ್ ಸೇವೆಗಳ ಪ್ರವೇಶದಿಂದ ಪೇಟಿಎಂ ಗೆ ಪ್ರಬಲ ಪೈಪೋಟಿ ಎದುರಾಗಲಿದೆ ಎಂದು ಮ್ಯಾಕ್ವಾರಿ ವಿಶ್ಲೇಷಿಸಿದೆ.

2021 ರ ನವೆಂಬರ್ ನಲ್ಲಿ ಐಪಿಒ ಪ್ರವೇಶಿಸಿದ್ದಾಗ ಮ್ಯಾಕ್ವಾರಿ, ಪೇಟಿಎಂ ನ ಪ್ರಾರಂಭಿಕ ಷೇರುಗಳ ಕುಸಿತವನ್ನು ಅಂದಾಜಿಸಿತ್ತು. ಅಷ್ಟೇ ಅಲ್ಲದೇ ನಿಖರವಾದ ಗ್ರಾಹಕ ವಿಭಾಗಗಳು ಮತ್ತು ಮಾರುಕಟ್ಟೆಗಳನ್ನು ಪೂರೈಸಲು JFC ಯಾವೆಲ್ಲಾ ಯೋಜನೆಗಳನ್ನು ಹೊಂದಿದೆ ಎಂಬುದನ್ನು ಅಂದಾಜಿಸುವುದು ಕಷ್ಟವಾಗಿದ್ದರೂ ಬಜಾಜ್ ಫೈನಾನ್ಸ್ ಹಾಗೂ ಪೇಟಿಎಂ ನಂತಹ ಫಿನ್ ಟೆಕ್ ಗಳ ಮಾದರಿಯಲ್ಲಿ ಗ್ರಾಹಕ ಮತ್ತು ವ್ಯಾಪಾರಿ ಸಾಲದ ಬಗ್ಗೆ ಹೆಚ್ಚು ಗಮನ ಹರಿಸಬಹುದು ಎಂದು ಹೇಳಿತ್ತು. 

ನಿವ್ವಳ ಮೌಲ್ಯದ ದೃಷ್ಟಿಯಿಂದ ಜಿಎಫ್ಎಸ್ ದೇಶದ 5 ನೇ ದೊಡ್ಡ ಆರ್ಥಿಕ ಸೇವೆಗಳನ್ನು ಒದಗಿಸುವ ಸಂಸ್ಥೆಯಾಗಲಿದೆ. ಇತ್ತ ಪೇಟಿಎಂ ನ ಷೇರು ಬೆಲೆ ಐಪಿಒ ನ ಬೆಲೆ 2,150ಕ್ಕಿಂತ ಶೇ.79 ರಷ್ಟು ಕುಸಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಕುರಿತು ಚುನಾವಣಾ ಆಯೋಗ ಏಕಪಕ್ಷೀಯ ನಿರ್ಧಾರ ಆರೋಪ: CEC ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ PIL

ಮಹಿಳೆ ಫೋಟೋ ಮಾರ್ಫ್ ಮಾಡಿ ಪ್ರಧಾನಿ ಮೋದಿ ಫೋಟೋದೊಂದಿಗೆ ಪ್ರದರ್ಶನ: CJP ವಿರುದ್ಧ FIR ದಾಖಲು

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!

'ಯಾರು ಚಿತ್ರೀಕರಿಸುತ್ತಿದ್ದರು?': ಜಮುಯಿ ದುರಂತಕ್ಕೆ ವಿಪಕ್ಷಗಳೇ ಕಾರಣ-ಬಿಜೆಪಿ ಸಚಿವ

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ