ವಾಣಿಜ್ಯ

ಆಗಸ್ಟ್ ನಲ್ಲಿ ಜಿಎಸ್ ಟಿ ಕಲೆಕ್ಷನ್ ಶೇ.28 ರಷ್ಟು ಹೆಚ್ಚಳ; 1.43 ಲಕ್ಷ ಕೋಟಿ ರೂ. ಸಂಗ್ರಹ

Lingaraj Badiger

ನವದೆಹಲಿ: ಕಳೆದ ಆಗಸ್ಟ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 28 ರಷ್ಟು ಏರಿಕೆಯಾಗಿದ್ದು, ಜಿಎಸ್ ಟಿ ಕಲೆಕ್ಷನ್ 1.49 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.

ಆಗಸ್ಟ್‌ನಲ್ಲಿ ಸತತ ಆರನೇ ತಿಂಗಳು ಜಿಎಸ್‌ಟಿ ಸಂಗ್ರಹವು 1.4-ಲಕ್ಷ-ಕೋಟಿ ರೂಪಾಯಿ ಮಾರ್ಕ್‌ಗಿಂತ ಹೆಚ್ಚಿದ್ದು, ಹಬ್ಬದ ದಿನಗಳು ತೆರಿಗೆ ಸಂಗ್ರಹ ಹೆಚ್ಚಳ ಪ್ರವೃತ್ತಿ ಮುಂದುವರಿಯಲು ಸಹಾಯ ಮಾಡಿದೆ.

ಆಗಸ್ಟ್ 2022 ರಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್​​ಟಿ ಆದಾಯ ಕಳೆದ ವರ್ಷದ ಆಗಸ್ಟ್ ಗಿಂತ ಶೇ. 28 ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.

ಈ ಹಿಂದೆ ಜಿಎಸ್ ಟಿ ಕೌನ್ಸಿಲ್ ತೆಗೆದುಕೊಂಡ ವಿವಿಧ ಕ್ರಮಗಳ ಸ್ಪಷ್ಟ ಪರಿಣಾಮ ಇದಾಗಿದೆ. ಆರ್ಥಿಕ ಚೇತರಿಕೆಯೊಂದಿಗೆ ಉತ್ತಮವಾದ ವರದಿಯು ಸ್ಥಿರವಾದ ಆಧಾರದ ಮೇಲೆ ಜಿಎಸ್ ಟಿ ಆದಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಆಗಸ್ಟ್ ಒಟ್ಟು 1,43,612 ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದ್ದು, ಅದರಲ್ಲಿ ಸಿಜಿಎಸ್‌ಟಿ 24,710 ಕೋಟಿ ರೂಪಾಯಿ, ಎಸ್‌ಜಿಎಸ್‌ಟಿ 30,951 ಕೋಟಿ, ಐಜಿಎಸ್‌ಟಿ 77,782 ಕೋಟಿ(ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 42,067 ಕೋಟಿ ಸೇರಿದಂತೆ) ಮತ್ತು ಸೆಸ್ 10,168 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1,018 ಕೋಟಿ ಸೇರಿದಂತೆ) ಸಂಗ್ರಹ ಆಗಿದೆ. 

SCROLL FOR NEXT