ವಾಣಿಜ್ಯ

ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನುಚ್ಚಕ್ಕಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ!

Srinivasamurthy VN

ನವದೆಹಲಿ: ಮಹತ್ವದ ಬೆಳಣಿಗೆಯಲ್ಲಿ ಕೇಂದ್ರ ಸರ್ಕಾರ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನುಚ್ಚಕ್ಕಿ ರಫ್ತನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಈ ಹಿಂದೆ ನುಚ್ಚಕ್ಕಿ ರಫ್ತು ದೇಶದಲ್ಲಿ ಮುಕ್ತವಾಗಿತ್ತು. ಆದರೆ ಇದೀಗ  ರಫ್ತು ನೀತಿಯನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದ್ದು, ನುಚ್ಚಕ್ಕಿಯನ್ನು 'ಮುಕ್ತ' ಪಟ್ಟಿಯಿಂದ ತೆಗೆದು "ನಿಷೇಧಿತ" ವಸ್ತುಗಳ ಪಟ್ಟಿಗೆ ಸೇರಿಸಿದೆ.

ಆದಾಗ್ಯೂ, ಕೆಲವು ರಫ್ತುಗಳಿಗೆ ಸೆಪ್ಟೆಂಬರ್ 15 ರವರೆಗೆ ಅವಕಾಶವಿರುತ್ತದೆ, ಈ ನಿಷೇಧದ ಆದೇಶದ ಮೊದಲು ಹಡಗಿನಲ್ಲಿ ನುಚ್ಚಕ್ಕಿಯನ್ನು ಲೋಡ್ ಮಾಡುವ ಸ್ಥಳ, ಶಿಪ್ಪಿಂಗ್ ಬಿಲ್ ಸಲ್ಲಿಸಿದ ಸ್ಥಳ ಮತ್ತು ಹಡಗುಗಳು ಈಗಾಗಲೇ ಭಾರತೀಯ ಬಂದರುಗಳಲ್ಲಿ ಆಗಮಿಸಿ ಲಂಗರು ಹಾಕಿದೆ. ಅವುಗಳ ಓಡಾಟದ ಸಂಖ್ಯೆಯನ್ನು ನಿಗದಿಪಡಿಸಿ ನುಚ್ಚಕ್ಕಿ ರವಾನೆಯನ್ನು ಸುಂಕದವರಿಗೆ ಹಸ್ತಾಂತರಿಸಲಾಗಿದೆ ಮತ್ತು ಅವರ ವ್ಯವಸ್ಥೆಯಲ್ಲಿ ನೋಂದಾಯಿಸಲಾಗಿದೆ ಎಂದು ಹೇಳಲಾಗಿದೆ.

ಈ ಖಾರಿಫ್ ಋತುವಿನಲ್ಲಿ ಒಟ್ಟಾರೆ ಭತ್ತದ ಬಿತ್ತನೆ ಪ್ರದೇಶವು ಕಳೆದ ವರ್ಷಕ್ಕಿಂತ ಕಡಿಮೆಯಿರಬಹುದು ಎಂದು ತೋರುತ್ತಿರುವುದರಿಂದ ರಫ್ತು ನಿಷೇಧವು ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಇದು ಬೆಳೆ ನಿರೀಕ್ಷೆಗಳು ಹಾಗೂ ಮುಂದೆ ಹೋಗುವ ಬೆಲೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ನುಚ್ಚಕ್ಕಿಗೆ ಸೌದಿ, ಯುಎಇ ಸೇರಿದಂತೆ  ಹಲವು ಅರಬ್ ರಾಷ್ಟ್ರಗಳು, ಯೂರೋಪಿನ ಹಲವು ರಾಷ್ಟ್ರಗಳಲ್ಲಿ ಬೇಡಿಕೆ ಇದೆ ಎನ್ನಲಾಗಿದೆ.
 

SCROLL FOR NEXT