ವಾಣಿಜ್ಯ

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಸೆ.15ರಿಂದ ಮೂರು ದಿನ 'ಭಾರತೀಯ ಉತ್ಪಾದನಾ ವಲಯ ಪ್ರದರ್ಶನ ಮೇಳ'

Sumana Upadhyaya

ಬೆಂಗಳೂರು: ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಇದೇ 15 ರಿಂದ ಮೂರು ದಿನಗಳ ಭಾರತೀಯ ಉತ್ಪಾದನಾ ವಲಯ ಕುರಿತ ಪ್ರದರ್ಶನ ಮೇಳ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. 

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರರು ಉಪಸ್ಥಿತರಿರುತ್ತಾರೆ. ಎಂಎಸ್‌ಎಂಇ, ಏರೋಸ್ಪೇಸ್ ಮತ್ತು ರಕ್ಷಣಾ ವಿಭಾಗಕ್ಕೆ ಸಂಬಂಧಪಟ್ಟ ವಸ್ತುಗಳ ಪ್ರದರ್ಶನ ಇದಾಗಿದೆ. 

ಭಾರತ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆ ಮಾಡುವ ಗುರಿಯತ್ತ ಕೆಲಸ ಮಾಡುವ ಮೂಲಕ ಕರ್ನಾಟಕದ ಲಘು ಉದ್ಯೋಗ ಭಾರತಿ ಮತ್ತು ಐಎಂಎಸ್ ಫೌಂಡೇಶನ್ ಜಂಟಿಯಾಗಿ ಬೃಹತ್ ಸಮಾವೇಶವನ್ನು ಆಯೋಜಿಸಿದೆ.

ಇದು ಅಂತರಿಕ್ಷ, ರಕ್ಷಣಾ ವಲಯ, ಆಟೋಮೇಷನ್, ರೊಬೊಟಿಕ್ಸ್ ಮತ್ತು ಡ್ರೋನ್ಸ್; ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್; ಸಾಮಾನ್ಯ ಎಂಜಿನಿಯರಿಂಗ್, ಶಕ್ತಿ ಪರಿಸರ ಮತ್ತು ವಿದ್ಯುನ್ಮಾನ ಸಾರಿಗೆ ವಲಯಗಳಲ್ಲಿ ದೊಡ್ಡ ಮತ್ತು ಸಣ್ಣ ವಲಯಗಳಿಗೆ ವೇದಿಕೆ ಒದಗಿಸುತ್ತದೆ. ರಕ್ಷಣಾ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರವು ಈ ಸಮಾವೇಶಕ್ಕೆ ತಮ್ಮ ಬೆಂಬಲವನ್ನು ನೀಡಿವೆ.

SCROLL FOR NEXT