ವಾಣಿಜ್ಯ

ವಾಟ್ಸ್ ಆಪ್, ಜೂಮ್ ಸೇರಿ ಇಂಟರ್ ನೆಟ್ ಕಾಲಿಂಗ್ ಆಪ್ ಟೆಲಿಕಾಮ್ ಪರವಾನಗಿ ಅಡಿ ತರಲು ಸರ್ಕಾರದ ಪ್ರಸ್ತಾವನೆ

Srinivas Rao BV

ನವದೆಹಲಿ: ವಾಟ್ಸ್ ಆಪ್, ಜೂಮ್ ಹಾಗೂ ಗೂಗಲ್ ಡ್ಯುವೋ ಸೇರಿದಂತೆ ಇಂಟರ್ ನೆಟ್ ಕರೆಗಳು ಮತ್ತು ಮೆಸೇಜಿಂಗ್ ಸೇವೆಗಳನ್ನು ಒದಗಿಸುವ ಆಪ್ ಗಳು ಇನ್ನು ಮುಂದೆ ಭಾರತದಲ್ಲಿ ಕಾರ್ಯನಿರ್ವಹಿಸಬೇಕಾದರೆ ಪರವಾನಗಿ ಪಡೆಯುವುದು ಅಗತ್ಯವಾಗಿರಲಿದೆ. 

ಟೆಲಿಕಮ್ಯುನಿಕೇಷನ್ ಬಿಲ್-2022 ರ ಕರಡು ಮಸೂದೆ ಸಿದ್ಧವಾಗಿದ್ದು, ಒಟಿಟಿಯನ್ನು ಟೆಲಿಕಮ್ಯುನಿಕೇಷನ್ ಸೇವೆಗಳ ಭಾಗವೆಂದು ಗುರುತಿಸಲಾಗಿದೆ. 

ದೂರಸಂಪರ್ಕ ಸೇವೆಗಳು ಮತ್ತು ದೂರಸಂಪರ್ಕ ಜಾಲಗಳ ನಿಬಂಧನೆಗಳಿಗೆ ಯಾವುದೇ ಸಂಸ್ಥೆಯೂ ಪರವಾಗಿ ಪಡೆಯಬೇಕಾಗುತ್ತದೆ ಎಂದು ಕರಡು ಮಸೂದೆ ತಿಳಿಸಿದ್ದು,  ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರ ಶುಲ್ಕ ಮತ್ತು ದಂಡವನ್ನು ಮನ್ನಾ ಮಾಡಲು ಅವಕಾಶಕ್ಕೆ ಪ್ರಸ್ತಾವನೆಯನ್ನೂ ಮುಂದಿಟ್ಟಿದೆ. 

ಇಂಡಿಯನ್ ಟೆಲಿಕಾಮ್ ಬಿಲ್-2022, ಕ್ಕೆ ನಿಮ್ಮ ಅಭಿಪ್ರಾಯಗಳನ್ನು ಕೇಳುತ್ತಿದ್ದೇವೆ ಎಂದು ಟೆಲಿಕಾಮ್ ಸಚಿವ ಅಶ್ವಿನಿ ವೈಷ್ಣವ್ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು ಅ.20 ರ ವೇಳೆಗೆ ಕರಡು ಮಸೂದೆ ಬಗ್ಗೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ.
  
ಟೆಲಿಕಾಮ್ ನಿಯಮಗಳ ಅಡಿಯಲ್ಲಿ ನೋಂದಣಿ ಮಾಡಿಕೊಂಡ ಯಾವಿದೇ ಪರವಾನಗಿದಾರರಿಗೆ ಕೇಂದ್ರ ಸರ್ಕಾರ "ಪ್ರವೇಶ ಶುಲ್ಕಗಳು, ಪರವಾನಗಿ ಶುಲ್ಕಗಳು, ನೋಂದಣಿ ಶುಲ್ಕಗಳು ಅಥವಾ ಯಾವುದೇ ಇತರ ಶುಲ್ಕಗಳು ಅಥವಾ ಶುಲ್ಕಗಳು, ಬಡ್ಡಿ, ಹೆಚ್ಚುವರಿ ಶುಲ್ಕಗಳು ಅಥವಾ ದಂಡ ಸೇರಿದಂತೆ ಯಾವುದೇ ಶುಲ್ಕವನ್ನು ಭಾಗಶಃ ಅಥವಾ ಪೂರ್ಣವಾಗಿ ಮನ್ನಾ ಮಾಡುವ ಪ್ರಸ್ತಾವನೆಯನ್ನು ಹೊಂದಿದೆ.

SCROLL FOR NEXT