ಕೈಗಾರಿಕಾ ಉತ್ಪಾದನೆ (ಸಾಂಕೇತಿಕ ಚಿತ್ರ) 
ವಾಣಿಜ್ಯ

ಫೆಬ್ರವರಿ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಶೇ.5.6 ಕ್ಕೆ ಅಲ್ಪ ಏರಿಕೆ

ಫೆಬ್ರವರಿ ತಿಂಗಳಲ್ಲಿ ದೇಶದ ಕೈಗಾರಿಕಾ ಉತ್ಪಾದನೆ ಶೇ.5.6 ಕ್ಕೆ ಅಲ್ಪ ಏರಿಕೆ ಕಂಡಿದೆ. 

ನವದೆಹಲಿ: ಫೆಬ್ರವರಿ ತಿಂಗಳಲ್ಲಿ ದೇಶದ ಕೈಗಾರಿಕಾ ಉತ್ಪಾದನೆ ಶೇ.5.6 ಕ್ಕೆ ಅಲ್ಪ ಏರಿಕೆ ಕಂಡಿದೆ. ಜನವರಿಯಲ್ಲಿ 2023 ರಲ್ಲಿ ಶೇ.5.5 ರಷ್ಟಿದ್ದ ಕೈಗಾರಿಕ ಉತ್ಪಾದನೆ ಫೆಬ್ರವರಿಯಲ್ಲಿ ಶೇ.5.6ಕ್ಕೆ ಏರಿಕೆ ಕಂಡಿದೆ. 

ಬುಧವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ ಮುಖ್ಯವಾಗಿ ವಿದ್ಯುತ್, ಗಣಿಗಾರಿಕೆ ಮತ್ತು ಉತ್ಪಾದನಾ ವಲಯಗಳ ಉತ್ತಮ ಕಾರ್ಯಕ್ಷಮತೆಯಿಂದಾಗಿ ಕೈಗಾರಿಕಾ ಉತ್ಪಾದನೆ ಏರಿಕೆ ಕಂಡಿದೆ. 

ವಾರ್ಷಿಕ ಹಾಗೂ ಅನುಕ್ರಮದ ಆಧಾರದ ಮೇಲೆ ಸುಧಾರಣೆ ಕಂಡುಬಂದಿದೆ. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ಆಧಾರದ ಮೇಲೆ  ಫ್ಯಾಕ್ಟರಿ ಔಟ್ ಪುಟ್ ನ್ನು ಅಳೆಯಲಾಗುತ್ತದೆ ಇದು ಫೆಬ್ರವರಿಯಲ್ಲಿ ಶೇ.1.2 ರಷ್ಟಿತ್ತು.
 
ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್ಎಸ್ಒ) ಪ್ರಕಾರ, ಉತ್ಪಾದನಾ ವಲಯದಲ್ಲಿ ಉತ್ಪತ್ತಿ ಶೇ.5.3 ರಷ್ಟು ಬೆಳವಣಿಗೆಯಾಗಿದ್ದು, ಕಳೆದ ವರ್ಷದ ಫೆಬ್ರವರಿಯಲ್ಲಿ ಶೇ. 0.2 ರಷ್ಟು ಬೆಳವಣಿಗೆ ಇತ್ತು. 

ಗಣಿಗಾರಿಕೆಯ ಉತ್ಪಾದನೆಯ ಬೆಳವಣಿಗೆಯು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಪರಿಶೀಲನೆಯ ತಿಂಗಳಿನಲ್ಲಿ ಶೇ.4.6 ರಲ್ಲಿ ಸ್ಥಿರವಾಗಿದೆ. ವಿದ್ಯುತ್ ಉತ್ಪಾದನೆಯು ಫೆಬ್ರವರಿ 2023 ರಲ್ಲಿ ಶೇ. 4.5 ರಿಂದ ಶೇ. 8.2 ರಷ್ಟು ಏರಿಕೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT