ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಮೊದಲ ತ್ರೈಮಾಸಿಕದಲ್ಲಿ ಭಾರ್ತಿ ಏರ್ ಟೆಲ್ 1,612 ಕೋಟಿ ರೂಪಾಯಿ ಲಾಭ, ARPU 200 ರೂ.ಗಳಿಗೆ ಏರಿಕೆ

ಟೆಲಿಕಾಂ ಆಪರೇಟರ್ ಭಾರ್ತಿ ಏರ್ ಟೆಲ್, ಜೂನ್ 2023ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ 1,612 ಕೋಟಿ ರೂಪಾಯಿಗಳಷ್ಟು ಲಾಭ ಗಳಿಸಿದೆ.

ಸಾಂದರ್ಭಿಕ ಚಿತ್ರ
Srinivas Rao BV
Updated On : 4 Aug 2023, 2:30 pm

ಮುಂಬೈ: ಟೆಲಿಕಾಂ ಆಪರೇಟರ್ ಭಾರ್ತಿ ಏರ್ ಟೆಲ್, ಜೂನ್ 2023ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ 1,612 ಕೋಟಿ ರೂಪಾಯಿಗಳಷ್ಟು ಲಾಭ ಗಳಿಸಿದೆ.

ವರ್ಷದ ಹಿಂದೆ ಇದೇ ಅವಧಿಯಲ್ಲಿದ್ದ ಲಾಭಕ್ಕಿಂತಲೂ ಇದು ಶೇ.14 ರಷ್ಟು ಏರಿಕೆ ಇದಾಗಿದೆ ಎಂದು ಸಂಸ್ಥೆ ತಿಳಿಸಿದೆ.  ಗುಣಮಟ್ಟದೆಡೆಗೆ ನಮ್ಮ ಗಮನ, 5.6 ಮಿಲಿಯನ್ ಹೊಸ 4 ಜಿ ಗ್ರಾಹಕರನ್ನು ಹೊಸದಾಗಿ ಗಳಿಸಿದ್ದೇವೆ, ಇದು ಒಂದು ತ್ರೈಮಾಸಿಕದಲ್ಲಿ ಗರಿಷ್ಠ ಪೋಸ್ಟ್ ಪೇಯ್ಡ್ ಗ್ರಾಹಕರ ಸೇರ್ಪಡೆಯಾಗಿದೆ ಎಂದು  ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ವಿಟ್ಟಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊಬೈಲ್ ಎಆರ್ ಪಿ ಯು (ಟೆಲಿಕಾಂ ಕಂಪನಿಗಳ ಮೆಟ್ರಿಕ್ಸ್) ಮೊದಲ ತ್ರೈಮಾಸಿಕದಲ್ಲಿ 200 ರೂಪಾಯಿಗಳಿಗೆ ಏರಿಕೆ ಕಂಡಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement