ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಏಪ್ರಿಲ್-ಜುಲೈ ವರೆಗೆ ಸಿಐಎಲ್ ಬಂಡವಾಳ ವೆಚ್ಚ ಶೇ.8.5 ಕ್ಕೆ ಏರಿಕೆ!

ಕೋಲ್ ಇಂಡಿಯಾ ಲಿಮಿಟೆಡ್ ನ ಬಂಡವಾಳ ವೆಚ್ಚ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.8.5 ರಷ್ಟು ಏರಿಕೆಯಾಗಿದೆ ಎಂದು ಸಂಸ್ಥೆ ಹೇಳಿದೆ.

ಕೋಲ್ ಇಂಡಿಯಾ
Srinivas Rao BV
Updated On : 17 Aug 2023, 6:47 pm

ನವದೆಹಲಿ: ಕೋಲ್ ಇಂಡಿಯಾ ಲಿಮಿಟೆಡ್ ನ ಬಂಡವಾಳ ವೆಚ್ಚ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.8.5 ರಷ್ಟು ಏರಿಕೆಯಾಗಿದೆ ಎಂದು ಸಂಸ್ಥೆ ಹೇಳಿದೆ. 

2024 ರ ಏಪ್ರಿಲ್-ಜುಲೈ ಅವಧಿಯಲ್ಲಿ ಬಂಡವಾಳ ವೆಚ್ಚ 4,700 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಸ್ಥಳಾಂತರಿಸುವ ಮೂಲಸೌಕರ್ಯ, ಭೂಮಿ ಮತ್ತು ಗಣಿಗಾರಿಕೆ ಯಂತ್ರೋಪಕರಣಗಳಲ್ಲಿ ನಿರಂತರ ಹೂಡಿಕೆಯ ಪರಿಣಾಮವಾಗಿ ಬಂಡವಾಳ ವೆಚ್ಚ ಏರಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ. 

ಈ ಅವಧಿಯಲ್ಲಿ ಕ್ಯಾಪೆಕ್ಸ್ (ಬಂಡವಾಳ ವೆಚ್ಚ)ದ ಬಳಕೆ  4,754 ಕೋಟಿ ರೂ.ಗಳ ಪ್ರಗತಿಪರ ಗುರಿಯ ಸುಮಾರು 100% ಮತ್ತು ಆರ್ಥಿಕ ವರ್ಷ 24 ರ ವಾರ್ಷಿಕ ಗುರಿಯ 28.3% ರೂ. 16,600 ಕೋಟಿ ರೂಪಾಯಿಗಳಷ್ಟಾಗಿದೆ. 

Advertisement

Advertisement

ಕೇಂದ್ರ ಸಿಪಿಎಸ್ ಇಗಳಿಗೆ ಆರ್ಥಿಕ ಪುನರುಜ್ಜೀವನಕ್ಕಾಗಿ ಬಂಡವಾಳ ವೆಚ್ಚವನ್ನು ಹೆಚ್ಚಿಸುವಂತೆ ಸೂಚಿಸಿದ್ದು, ಮೂರು ವರ್ಷಗಳ ಅವಧಿಯಲ್ಲಿ ಸಿಐಎಲ್ ತನ್ನ ಕ್ಯಾಪೆಕ್ಸ್ ಅನ್ನು ಮೂರು ಪಟ್ಟು ಅಥವಾ 197% ರಷ್ಟು ಹೆಚ್ಚಿಸಿದೆ” ಎಂದು ಸಿಐಎಲ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement