ವಾಣಿಜ್ಯ

ಟ್ವಿಟರ್ ಬ್ಲೂ ಟಿಕ್ ಪಡೆಯಲು ಭಾರತದಲ್ಲಿ ತಿಂಗಳಿಗೆ 900 ರೂ.ವರೆಗೆ ಶುಲ್ಕ

Lingaraj Badiger

ನವದೆಹಲಿ: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಟ್ವಿಟರ್ ಮಾಲೀಕತ್ವ ವಹಿಸಿಕೊಂಡ ಬಳಿಕ ಹಲವು ಬದಲಾವಣೆಗಳನ್ನು ಮಾಡುತ್ತಿದ್ದು, ಇದೀಗ ಭಾರತದಲ್ಲಿ ಟ್ವಿಟರ್ ಬ್ಲೂ ಟಿಕ್ ಪಡೆಯಲು ತಿಂಗಳಿಗೆ 900 ರೂಪಾಯಿವರೆಗೆ ಶುಲ್ಕ ವಿಧಿಸಲು ನಿರ್ಧರಿಸಿದೆ.

ಭಾರತದಲ್ಲಿನ ಟ್ವಿಟರ್ ಬಳಕೆದಾರರು ತಮ್ಮ ಖಾತೆಗಳಿಗೆ ಬ್ಲೂ ಟಿಕ್ ಮಾರ್ಕ್ ಅನ್ನು ಪಡೆಯಲು ಬಯಸುವವರು  ಆಂಡ್ರಾಯ್ಡ್ ಮತ್ತು ಐಓಎಸ್ ಮೊಬೈಲ್ ಫೋನ್‌ಗಳ ಮಾಸಿಕ ಯೋಜನೆಯಡಿಯಲ್ಲಿ 900 ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನ ಗುರುವಾರ ತಿಳಿಸಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್, ಡೆಸ್ಕ್‌ಟಾಪ್ ಮೂಲಕ ಟ್ವಿಟರ್ ಬಳಸುವ ಗ್ರಾಹಕರಿಗೆ 650 ರೂಪಾಯಿ ಮತ್ತು ಮೊಬೈಲ್ ಅಪ್ಲಿಕೇಶನ್ ಬಳಕೆದಾರರಿಗೆ ತಿಂಗಳಿಗೆ 900 ರೂ. ಶುಲ್ಕ ವಿಧಿಸುವುದಾಗಿ ಹೇಳಿದೆ. ಇದಲ್ಲದೇ, ಟ್ವಿಟರ್ ವೆಬ್‌ನಲ್ಲಿ ವಾರ್ಷಿಕ ಚಂದಾದಾರಿಕೆ ಪಡೆಯುವ ಗ್ರಾಹಕರಿಗಾಗಿ ವಾರ್ಷಿಕ 6,800 ರೂ. ಬೆಲೆಯಲ್ಲಿ ಚಂದಾದಾರಿಕೆ ಪಡೆಯಬಹುದಾದ ಕೊಡುಗೆಯನ್ನು ನೀಡಲಾಗಿದೆ.

ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜಪಾನ್, ಬ್ರಿಟನ್ ಮತ್ತು ನ್ಯೂಜಿಲೆಂಡ್ ಸೇರಿದಂತೆ ಕೇವಲ ಆರು ದೇಶಗಳಲ್ಲಿ 'ಟ್ವಿಟ್ಟರ್ ಬ್ಲೂ ಟಿಕ್' ಚಂದಾದಾರಿಕೆಯನ್ನು ಆರಂಭಿಸಿದ್ದ ಮಸ್ಕ್, ಇದೀಗ ಭಾರತದಲ್ಲೂ ಬ್ಲೂ ಟಿಕ್ ಚಂದಾದಾರಿಕೆ ಆರಂಭಿಸಿದ್ದಾರೆ.

SCROLL FOR NEXT