ವಾಣಿಜ್ಯ

2022 ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ.23 ರಷ್ಟು ಏರಿಕೆ; ದಾಖಲೆಯ 37.93 ಲಕ್ಷ ಯುನಿಟ್ ಗೆ ಏರಿಕೆ 

Srinivas Rao BV

2022 ನೇ ಸಾಲಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ.23 ರಷ್ಟು ಏರಿಕೆ ಕಂಡಿದೆ. ಈ ವರ್ಷದಲ್ಲಿ ಒಟ್ಟು 37.93 ಲಕ್ಷ ಯುನಿಟ್ ವಾಹನಗಳು ಮಾರಾಟವಾಗಿದ್ದು, ಮಾರುತಿ ಸುಜೂಕಿ ಸಂಸ್ಥೆ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ನಂತರದ ಸ್ಥಾನದಲ್ಲಿ ಹ್ಯುಂಡೈ, ಟಾ ಟಾ ಮೋಟಾರ್ಸ್ ಕಂಪನಿಗಳಿವೆ.

ಉಳಿದ ಕಾರು ಉತ್ಪಾದಕ ಸಂಸ್ಥೆಗಳಾದ ಟೊಯಾಟಾ ಕಿರ್ಲೋಸ್ಕರ್ ಮೋಟಾರ್ ಹಾಗೂ ಸ್ಕೋಡಾ ಸಹ ವಾಹನ ಮಾರಾಟದಲ್ಲಿ ದಾಖಲೆಯ ಏರಿಕೆ ಕಂಡಿದೆ.

2021 ರಲ್ಲಿ 30.82 ಲಕ್ಷ ಯುನಿಟ್ ಕಾರುಗಳು ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 2022 ರಲ್ಲಿ ಶೇ.23 ರಷ್ಟು ಏರಿಕೆ ಕಂಡಿದೆ ಎಂದು ಮಾರುತಿ ಸುಜೂಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.

ಪ್ರಯಾಣಿಕ ವಾಹನದ ವಿಭಾಗಗಳಲ್ಲಿ ಎಸ್ ಯುವಿಗಳಿಗೆ ಹೆಚ್ಚಿನ ಬೇದಿಕೆ ಇದ್ದು, ಒಟ್ಟಾರೆ ಮಾರಾಟದಲ್ಲಿ ಶೇ.42.3 ರಷ್ಟು ಇದರದ್ದೇ ಪಾಲು ಇದೆ. ಮಾರಾಟವಾಗುವ ಕಾರುಗಳ ಪೈಕಿ ಶೇ.40 ರಷ್ಟು 10 ಲಕ್ಷಕ್ಕಿಂತ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಕಾರುಗಳು ಮಾರಾಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಾರುತಿ ಸುಜೂಕಿಯಲ್ಲಿ ಒಂದರಲ್ಲೇ ಕಳೆದ ವರ್ಷ 13.64 ಲಕ್ಷ ಯುನಿಟ್ ಗಳು ಮಾರಾಟವಾಗಿದ್ದರೆ, ಈ ವರ್ಷ 15.76 ಲಕ್ಷ ಯುನಿಟ್ ವಾಹನಗಳು ಮಾರಾಟವಾಗಿದ್ದು ಶೇ.16 ರಷ್ಟು ಏರಿಕೆ ಕಂಡಿದೆ.
 

SCROLL FOR NEXT