ಸತ್ಯ ನಡೆಲ್ಲಾ 
ವಾಣಿಜ್ಯ

'ನೀವು ಬಿರಿಯಾನಿಯನ್ನು ದಕ್ಷಿಣ ಭಾರತದ ಉಪಾಹಾರ ಎಂದು ಕರೆದು ಒಬ್ಬ ಹೈದರಾಬಾದಿಯನ್ನು ಅವಮಾನಿಸಲು ಸಾಧ್ಯವಿಲ್ಲ': ಸತ್ಯ ನಡೆಲ್ಲಾ

ಹೈದರಾಬಾದ್ ಬಿರಿಯಾನಿ ವರ್ಲ್ಡ್ ಫೇಮಸ್. ಇದರ ರುಚಿಗೆ ಬಹುಶಃ ಮನಸೋಲದವರಿರಲಿಕ್ಕಿಲ್ಲ. ಆದರೆ ಅದು ಜನಪ್ರಿಯ ದಕ್ಷಿಣ ಭಾರತದ ಬೆಳಗಿನ ಉಪಾಹಾರ ತಿಂಡಿಯೇ?

ಬೆಂಗಳೂರು: ಹೈದರಾಬಾದ್ ಬಿರಿಯಾನಿ ವರ್ಲ್ಡ್ ಫೇಮಸ್. ಇದರ ರುಚಿಗೆ ಬಹುಶಃ ಮನಸೋಲದವರಿರಲಿಕ್ಕಿಲ್ಲ. ಆದರೆ ಅದು ಜನಪ್ರಿಯ ದಕ್ಷಿಣ ಭಾರತದ ಬೆಳಗಿನ ಉಪಾಹಾರ ತಿಂಡಿಯೇ?

ಹೈದರಾಬಾದ್ ಮೂಲದವರಾದ ಮೈಕ್ರೊಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಡೆಲ್ಲಾ ಚಾಟ್ ಜಿಪಿಟಿ(ChatGPT) ಸಾಫ್ಟ್ ವೇರ್ ಜೊತೆ ಇತ್ತೀಚೆಗೆ ಮಾತನಾಡುವಾಗ ತಮ್ಮ ಆಕ್ಷೇಪ ವ್ಯಕ್ತಪಡಿಸಿ ಸಾಫ್ಟ್ ವೇರ್ ಕಂಪೆನಿ ಸತ್ಯ ನಡೆಲ್ಲಾ ಅವರ ಕ್ಷಮೆಯಾಚಿಸಿದ ಘಟನೆ ನಡೆದಿದು. ಇದೆಲ್ಲ ಆಗಿದ್ದು ಕೇವಲ ಒಂದು ಬಿರಿಯಾನಿ ವಿಷಯಕ್ಕೆ.

ಚಾಟ್ ಜಿಪಿಟಿ ಬಹಳ ಪ್ರಖ್ಯಾತ ಎಐ(Artificial intelligence) ಆಧಾರಿತ ಸಾಫ್ಟ್ ವೇರ್ ಮತ್ತು ಚಾಟ್ ರೊಬೋಟ್ ಆಗಿದೆ. ಭವಿಷ್ಯದಲ್ಲಿ ಬಹಳ ಜನಪ್ರಿಯವಾಗುವ ದಕ್ಷಿಣ ಭಾರತದ ಬೆಳಗಿನ ಉಪಾಹಾರ ಯಾವುದು ಎಂದು ಚಾಟ್ ಜಿಪಿಟಿಯನ್ನು ಕೇಳಿದರು. ರೊಬೋಟ್ ದಕ್ಷಿಣ ಭಾರತದ ಜನಪ್ರಿಯ ತಿನಿಸುಗಳಾದ ಇಡ್ಲಿ, ದೋಸೆ, ವಡೆಯ ಹೆಸರನ್ನು ಹೇಳಿತು.

ಆದರೆ ಅದು ಕೊಟ್ಟಿದ್ದ ಆಯ್ಕೆಯಲ್ಲಿ ಬಿರಿಯಾನಿ ಕೂಡ ಇತ್ತು. ಅದು ನಡೆಲ್ಲಾ ಅವರಿಗೆ ಸರಿ ಕಾಣಿಸಲಿಲ್ಲ. ಅವರು ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳಿಯೇ ಬಿಟ್ಟರು. ಹೈದರಾಬಾದ್ ಮೂಲದವನಾಗಿ ಬಿರಿಯಾನಿಯನ್ನು ದಕ್ಷಿಣ ಭಾರತದ ಉಪಾಹಾರ ಎಂದು ಹೇಳಿ ನನ್ನ ಬುದ್ಧಿವಂತಿಕೆಗೆ ಅವಮಾನ ಮಾಡಬೇಡಿ ಎಂದುಬಿಟ್ಟರು.

ಕೂಡಲೇ ಸಾಫ್ಟ್ ವೇರ್ ಸಾರಿ ತಪ್ಪಾಯ್ತು ಎಂದು ಹೇಳಿತು. ನಂತರ ಚಾಟ್ ಜಿಪಿಟಿಯಲ್ಲಿ ಇಡ್ಲಿ ಮತ್ತು ದೋಸೆಯಲ್ಲಿ ಯಾವುದು ಉತ್ತಮ ಎಂದು ಕೇಳಿ ಆಟವಾಡಿ ನೋಡೋಣ ಎಂದು ನಡೆಲ್ಲಾ ಹೇಳಿದರು. ಇದಕ್ಕೆ ಇಂಗ್ಲಿಷಿನ ಖ್ಯಾತ ನಾಟಕಗಾರ ಶೇಕ್ಸ್ ಪಿಯರ್ ನ ಸಂಭಾಷಣೆಯನ್ನು ಸೇರಿಸಲು ಹೇಳಿದರು. 

ನಡೆಲ್ಲಾ ಅವರು ನಿನ್ನೆ ಬೆಂಗಳೂರಿನಲ್ಲಿ Future Ready Technology Summit ನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇಷ್ಟೆಲ್ಲಾ ಪೀಠಿಕೆ ಹಾಕಿದ್ದು ಜಸ್ಟ್ ಜೋಕ್ಸ್ ಸೀರಿಯಸ್ ಚರ್ಚೆ, ಮಾತುಕತೆಗೆ ಮುನ್ನ ನಿಮ್ಮನ್ನೆಲ್ಲ ಮೂಡಿಗೆ ತರೋಣವೆಂದು ಈ ಆಟ ಆಡಿಸಿದ್ದೇನೆ ಎಂದು ಸತ್ಯ ನಡೆಲ್ಲಾ ನೆರೆದಿದ್ದ ಪ್ರೇಕ್ಷಕರಿಗೆ ಹೇಳಿದರು. ನಂತರ ಅತ್ಯಾಧುನಿಕ AI ಮತ್ತು ಭಾರತದಲ್ಲಿ ಎಐಯ ನಾವೀನ್ಯತೆ ಕುರಿತು ಮಾತನಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT