ವಾಣಿಜ್ಯ

KYC ಅಪ್ಡೇಟ್ ಮಾಡಲು ನೀವು ಬ್ಯಾಂಕ್ ಗೆ ಹೋಗಬೇಕಾದ್ದು ಕಡ್ಡಾಯವಲ್ಲ.. ಮನೆಯಿಂದಲೂ ಮಾಡಬಹುದು: ಆರ್ ಬಿಐ ಮಾಹಿತಿ

Srinivasamurthy VN

ಮುಂಬೈ: 'ನಿಮ್ಮ ಗ್ರಾಹಕರ ತಿಳಿಯಿರಿ' ಅಥವಾ ಕೆವೈಸಿ (Know Your Customer info) ಸೇವೆಗಾಗಿ ಗ್ರಾಹಕರು ಬ್ಯಾಂಕ್ ಗೆ ಅಲೆಯುವ ಅವಶ್ಯತೆ ಇಲ್ಲ.. ಬದಲಿಗೆ ಮನೆಯಿಂದಲೇ ಕೆವೈಸಿ ಮಾಡುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಮಾಹಿತಿ ನೀಡಿದೆ.

ಹೌದು.. ಬ್ಯಾಂಕ್ ಗ್ರಾಹಕರು ತಮ್ಮ ನೋ ಯುವರ್ ಕಸ್ಟಮರ್ (ಕೆವೈಸಿ) ಮಾಹಿತಿಯನ್ನು ನವೀಕರಿಸಲು ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ. ಗ್ರಾಹಕರು ಆನ್‌ಲೈನ್ ಚಾನೆಲ್‌ಗಳ ಮೂಲಕ ಸ್ವಯಂ ಘೋಷಣೆಯನ್ನು ಒದಗಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗುರುವಾರ ತಿಳಿಸಿದೆ.

"ಕೆವೈಸಿ ಮಾಹಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ, ಮರು-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವೈಯಕ್ತಿಕ ಗ್ರಾಹಕರಿಂದ ಸ್ವಯಂ-ಘೋಷಣೆ ಸಾಕು" ಎಂದು ಆರ್‌ಬಿಐ ಹೇಳಿದೆ. "ನೋಂದಾಯಿತ ಇಮೇಲ್-ಐಡಿ, ನೋಂದಾಯಿತ ಮೊಬೈಲ್ ಸಂಖ್ಯೆ, ಎಟಿಎಂಗಳು, ಡಿಜಿಟಲ್ ಚಾನೆಲ್‌ಗಳು (ಆನ್‌ಲೈನ್ ಬ್ಯಾಂಕಿಂಗ್ / ಇಂಟರ್ನೆಟ್‌ನಂತಹ ವಿವಿಧ ಮುಖಾಮುಖಿಯಲ್ಲದ ಚಾನಲ್‌ಗಳ ಮೂಲಕ ವೈಯಕ್ತಿಕ ಗ್ರಾಹಕರಿಗೆ ಅಂತಹ ಸ್ವಯಂ ಘೋಷಣೆಯ ಸೌಲಭ್ಯವನ್ನು ಒದಗಿಸಲು ಬ್ಯಾಂಕ್‌ಗಳಿಗೆ ಸಲಹೆ ನೀಡಲಾಗಿದೆ. 

ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲದೆ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಶನ್), ಪತ್ರ, ಇತ್ಯಾದಿ ವ್ಯವಸ್ಥೆಯ ಮೂಲಕ ಕೆವೈಸಿ ಮಾಡಿಸಬಹುದು ಎಂದು ಹೇಳಿದೆ.

SCROLL FOR NEXT