ವಾಣಿಜ್ಯ

ಜೂನ್ ನಲ್ಲಿ ಜಿಎಸ್ ಟಿ ಸಂಗ್ರಹ ಶೇ.12 ರಷ್ಟು ಏರಿಕೆ!

Srinivas Rao BV

ನವದೆಹಲಿ: ಜಿಎಸ್ ಟಿ ಸಂಗ್ರಹ ಶೇ.12 ರಷ್ಟು ಏರಿಕೆ ಕಂಡಿದ್ದು ಜೂನ್ ತಿಂಗಳಲ್ಲಿ 1.61 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. 2017 ರ ಜುಲೈ 1 ರ ನಂತರ ನಾಲ್ಕನೇ ಬಾರಿಗೆ ಜಿಎಸ್ ಟಿ ಸಂಗ್ರಹ 1.61 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ.
 
2021-22, 2022-23 ಹಾಗೂ 2023-24 ರ ಅವಧಿಯ ಮೊದಲ ತ್ರೈಮಾಸಿಕ (ಏಪ್ರಿಲ್-ಜೂನ್) ದ ಸರಾಸರಿ ಮಾಸಿಕ ಒಟ್ಟು GST ಸಂಗ್ರಹ ಅನುಕ್ರಮವಾಗಿ 1.10 ಲಕ್ಷ ಕೋಟಿ, 1.51 ಲಕ್ಷ ಕೋಟಿ, 1.69 ಲಕ್ಷಕೋಟಿ ಆಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

2023 ರ ಜೂನ್ ನಲ್ಲಿ ಸಂಗ್ರಹವಾದ ಜಿಎಸ್ ಟಿ ಮೊತ್ತ ರೂ.1,61,497 ಕೋಟಿ ಪೈಕಿ 31,013 ಕೋಟಿ ಕೇಂದ್ರ ಜಿಎಸ್ ಟಿ ಆಗಿದ್ದು, 38,292 ಕೋಟಿ ರೂಪಾಯಿ ಸ್ಟೇಟ್ ಜಿಎಸ್ ಟಿ, 80,292 ಕೋಟಿ ರೂಪಾಯಿ ಇಂಟಿಗ್ರೇಟೆಡ್ ಜಿಎಸ್ ಟಿ, ಸೆಸ್ 11,900 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಹಣಕಾಸು ಇಲಾಖೆ ಹೇಳಿಕೆ ನೀಡಿದೆ.

ಜೂನ್ 2023 ರಲ್ಲಿ ಸಂಗ್ರಹವಾದ ಜಿಎಸ್ ಟಿ ಆದಾಯ ಕಳೆದ ವರ್ಷ ಜೂನ್ ನಲ್ಲಿ ಸಂಗ್ರಹವಾದ ಮೊತ್ತಕ್ಕಿಂತಲೂ ಶೇ.12 ರಷ್ಟು ಏರಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ದಾಖಲೆಯ 1.87 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿತ್ತು.

SCROLL FOR NEXT