ವಾಣಿಜ್ಯ

ಎಫ್ ಪಿಐ ಹೂಡಿಕೆ 9 ತಿಂಗಳಲ್ಲೇ ಗರಿಷ್ಠ: ಮೇ ತಿಂಗಳಲ್ಲಿ 43 ಸಾವಿರ ಕೋಟಿ ರೂ. ದಾಟಿದ ಒಳಹರಿವು

Srinivas Rao BV

ನವದೆಹಲಿ: ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆ (ಎಫ್ ಪಿಐ) 9 ತಿಂಗಳಲ್ಲೇ ಮೊದಲ ಬಾರಿಗೆ ಗರಿಷ್ಠ ಮಟ್ಟವನ್ನು ತಲುಪಿದ್ದು, ಮೇ ತಿಂಗಳಲ್ಲಿ 43,838 ಕೋಟಿ ರೂಪಾಯಿ ಬಂದಿದೆ. 

ಬಲಿಷ್ಠ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಮತ್ತು ಸಮಂಜಸವಾದ ಮೌಲ್ಯಮಾಪನಗಳ ಪರಿಣಾಮವಾಗಿ ಎಫ್ ಪಿಐ ಒಳಹರಿವು ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜೂನ್ ನಲ್ಲಿಯೂ ಎಫ್ ಪಿಐ ಗಳು ಉತ್ತಮವಾಗಿದ್ದು, ತಿಂಗಳ ಎರಡು ಟ್ರೇಡಿಂಗ್ ಸೆಷನ್ ಗಳಲ್ಲಿ 6,490 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯಾಗಿದೆ.

ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿಕೆ ವಿಜಯಕುಮಾರ್ ಈ ಬಗ್ಗೆ ಮಾತನಾಡಿ, ಇತ್ತೀಚಿನ ಜಿಡಿಪಿ ಡೇಟಾ ದೃಢವಾದ ಆರ್ಥಿಕತೆಯನ್ನು ಸೂಚಿಸುತ್ತಿದ್ದು, ಎಫ್‌ಪಿಐಗಳ ಒಳಹರಿವು ಪ್ರಸಕ್ತ ತಿಂಗಳಲ್ಲಿಯೂ ಉತ್ತಮವಾಗಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ 2022 ರ ಆಗಸ್ಟ್ ನಲ್ಲಿ 51,204 ಕೋಟಿ ರೂಪಾಯಿಗಳು ಹೂಡಿಕೆಯಾಗಿದ್ದವು. 

SCROLL FOR NEXT