ರಾಜೇಶ್ ಗೋಪಿನಾಥನ್ 
ವಾಣಿಜ್ಯ

ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ರಾಜೀನಾಮೆ; ನೂತನ ಸಿಇಒ ಆಗಿ ಕೆ ಕೃತಿವಾಸನ್ ನೇಮಕ

ಪ್ರಮುಖ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌(ಟಿಸಿಎಸ್)ನ ಸಿಇಒ ರಾಜೇಶ್ ಗೋಪಿನಾಥನ್ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಂಪನಿಯ ಬಿಎಫ್‌ಎಸ್‌ಐ ವಿಭಾಗದ ಜಾಗತಿಕ ಮುಖ್ಯಸ್ಥ ಕೆ ಕೃತಿವಾಸನ್..

ನವದೆಹಲಿ: ಪ್ರಮುಖ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌(ಟಿಸಿಎಸ್)ನ ಸಿಇಒ ರಾಜೇಶ್ ಗೋಪಿನಾಥನ್ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಂಪನಿಯ ಬಿಎಫ್‌ಎಸ್‌ಐ ವಿಭಾಗದ ಜಾಗತಿಕ ಮುಖ್ಯಸ್ಥ ಕೆ ಕೃತಿವಾಸನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ.

ಗೋಪಿನಾಥನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯು ಸೆಪ್ಟೆಂಬರ್ 15, 2023 ರಂದು ಜಾರಿಗೊಳ್ಳಲಿದೆ. ಅಲ್ಲಿಯವರೆಗೆ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂದು ಟಿಸಿಎಸ್ ತಿಳಿಸಿದೆ.

"ರಾಜೇಶ್ ಗೋಪಿನಾಥನ್ ಅವರು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ನೊಂದಿಗೆ 22 ವರ್ಷಗಳ ವೃತ್ತಿಜೀವನದ ನಂತರ ಮತ್ತು ಕಳೆದ 6 ವರ್ಷಗಳಿಂದ ಟಿಸಿಎಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ತಮ್ಮ ಇತರ ಆಸಕ್ತಿಗಳನ್ನು ಮುಂದುವರಿಸಲು ಕಂಪನಿಯಿಂದ ನಿರ್ಗಮಿಸಲು ನಿರ್ಧರಿಸಿದ್ದಾರೆ" ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BiggBoss Kannada: ಜಾಲಿವುಡ್​ ಸ್ಟುಡಿಯೋಸ್​ಗೆ ಬೀಗ; ಮನೆಯಿಂದ ಹೊರಬಂದ ಬಿಗ್‌ಬಾಸ್‌ ಸ್ಪರ್ಧಿಗಳು ಹೋಗಿದ್ದೇಲ್ಲಿಗೆ?

ಥಿಯೇಟರ್ ಹಾಗೂ ರಸ್ತೆಗಳಲ್ಲಿ ದೈವದ ಅನುಕರಣೆ ಮಾಡಬೇಡಿ: ಪ್ರೇಕ್ಷಕರಲ್ಲಿ ಕಾಂತಾರ: ಅಧ್ಯಾಯ 1 ಚಿತ್ರತಂಡ ಮನವಿ!

ತುಮಕೂರು: ಮಾರ್ಕೋನಹಳ್ಳಿ ಡ್ಯಾಂನಲ್ಲಿ ದುರಂತ; ಒಂದೇ ಕುಟುಂಬದ 6 ಮಂದಿ ನೀರುಪಾಲು!

"ಋತುಮತಿಯರನ್ನೂ ಬಿಡದ ಕಾಮುಕ": ದೆಹಲಿ ಬಾಬಾ ಚೈತನ್ಯಾನಂದ ಸರಸ್ವತಿ ಕೃತ್ಯಕ್ಕೆ ಮಹಿಳಾ ಸಹಚರರಿಂದ ಸಾಥ್; "ಕಾರಣ ಹೇಳಬೇಡಿ" ಎಂದು ಬೈಗುಳ!

CM ಬದಲಾವಣೆ ಹೇಳಿಕೆಗಳಿಗೆ 'ಬ್ರೇಕ್ ಹಾಕಿ': ಕಾಂಗ್ರೆಸ್ ಹೈಕಮಾಂಡ್​​ಗೆ ಹಿರಿಯ ಸಚಿವರ ಆಗ್ರಹ

SCROLL FOR NEXT