ವಾಣಿಜ್ಯ

ಹೈ-ಸ್ಪೀಡ್ ಸಂಪರ್ಕ ಒದಗಿಸಲು ಜಿಯೋದಿಂದ ಉಪಗ್ರಹ ಆಧಾರಿತ ಗಿಗಾಬಿಟ್ ಬ್ರಾಡ್‌ಬ್ಯಾಂಡ್ ಬಿಡುಗಡೆ

Lingaraj Badiger

ನವದೆಹಲಿ: ಭಾರತದಲ್ಲಿ ಇದುವರೆಗೂ ಇಂಟರ್ ನೆಟ್ ಸೌಲಭ್ಯ ತಲುಪಿಸಲಾಗದ ದೂರದ ಪ್ರದೇಶಗಳಿಗೆ ಹೈ-ಸ್ಪೀಡ್ ಇಂಟರ್ ನೆಟ್ ಸಂಪರ್ಕ ಒದಗಿಸಲು ದೇಶದ ಮೊದಲ ಉಪಗ್ರಹ ಆಧಾರಿತ ಗಿಗಾಬಿಟ್ ಬ್ರಾಡ್ ಬ್ಯಾಂಡ್ ಸೇವೆ ಜಿಯೋಸ್ಪೇಸ್ ಫೈಬರ್ ಅನ್ನು ರಿಲಯನ್ಸ್ ಜಿಯೋ ಶುಕ್ರವಾರ ಬಿಡುಗಡೆ ಮಾಡಿದೆ.

ಇಂದು ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಜಿಯೋ ತನ್ನ ಹೊಸ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ JioSpaceFiber ಅನ್ನು ಪ್ರದರ್ಶಿಸಿತು.

ಕಾರ್ಯಕ್ರಮದಲ್ಲಿ ಜಿಯೋ ಪೆವಿಲಿಯನ್‌ನಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷ ಆಕಾಶ್ ಅಂಬಾನಿ ಅವರು ಜಿಯೋಸ್ಪೇಸ್‌ಫೈಬರ್ ಸೇರಿದಂತೆ ಜಿಯೋದ ಸ್ಥಳೀಯ ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರದರ್ಶಿಸಿದರು.

ಈ ಸೇವೆಯು ಶೀಘ್ರದಲ್ಲೇ ದೇಶದ ಉದ್ದಗಲಕ್ಕೂ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಜಿಯೋ ಪ್ರಸ್ತುತ 450 ಮಿಲಿಯನ್ ಭಾರತೀಯ ಗ್ರಾಹಕರಿಗೆ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಸ್ಥಿರ ಲೈನ್ ಮತ್ತು ವೈರ್‌ಲೆಸ್ ಸೇವೆಗಳನ್ನು ಒದಗಿಸುತ್ತಿದೆ.

Jio ಈಗಾಗಲೇ ಬ್ರಾಡ್‌ಬ್ಯಾಂಡ್ ಸೇವೆಗಳಾದ JioFiber ಮತ್ತು JioAirFiber ಸೇವೆ ಒದಗಿಸುತ್ತಿದ್ದು, ಈಗ JioSpaceFiber ನೊಂದಿಗೆ ದೇಶದ ಪ್ರತಿ ಮನೆಗೂ ಡಿಜಿಟಲ್ ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ" ಎಂದು ಪ್ರಕಟಣೆ ತಿಳಿಸಿದೆ.

SCROLL FOR NEXT