ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್  
ವಾಣಿಜ್ಯ

ಉಷ್ಣ ಅಲೆ ಸೂಚನೆ: ಗೋಧಿ ಬೆಲೆ ಮೇಲೆ ಪರಿಣಾಮ ಬೀರದು, ತರಕಾರಿ ಬೆಲೆ ಬಗ್ಗೆ ಈಗಲೇ ಹೇಳಲಾಗದು- RBI ಗವರ್ನರ್

Sumana Upadhyaya

ಮುಂಬೈ: ದೇಶಾದ್ಯಂತ ಬಿಸಿಲ ಧಗೆ ಹೆಚ್ಚಾಗಿದೆ. ಹಾಗೆಂದು ಬೇಸಿಗೆ ತಾಪಮಾನದಿಂದ ಗೋಧಿ ಬೆಲೆ ಮೇಲೆ ಪರಿಣಾಮ ಬೀರುವುದಿಲ್ಲ, ತರಕಾರಿ ಬೆಲೆಯನ್ನು ಗಮನಿಸುತ್ತಿರಬೇಕಾಗುತ್ತದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಏಪ್ರಿಲ್ ನಿಂದ ಜೂನ್ ತಿಂಗಳವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಉಷ್ಣ ಬಿಸಿ ಅಲೆ ವಾತಾವರಣದಲ್ಲಿ ಏರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಆರ್ ಬಿಐ ಗವರ್ನರ್ ಈ ಹೇಳಿಕೆ ನೀಡಿದ್ದಾರೆ.

ತ್ರೈಮಾಸಿಕ ವಿತ್ತೀಯ ವರದಿಯನ್ನು ಪ್ರಕಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರಿಂದ ಎದುರಾದ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ ಉಂಟಾಗಬಹುದು ಎಂದು ಹವಾಮಾನ ಇಲಾಖೆಯ ವರದಿ ಹೇಳುತ್ತಿದೆ. ಏಪ್ರಿಲ್ ನಿಂದ ಜೂನ್ ವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಉಂಟಾಗಬಹುದು. ಆಹಾರ ಬೆಳೆಗಳ ಮೇಲೆ ಇದು ಯಾವ ರೀತಿ ಪರಿಣಾಮ ಬೀರಬಹುದು ಎಂದು ನೋಡಬೇಕಿದೆ ಎಂದರು.

ಗೋಧೆ ಬೆಳೆ ದೇಶಾದ್ಯಂತ ಇರುವುದರಿಂದ ಉಷ್ಣ ಹವೆ ಇದರ ಬೆಲೆ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ತರಕಾರಿ ಬೆಲೆಗಳ ಬಗ್ಗೆ ಹೇಳಲು ಸಾಧ್ಯವಿಲ್ಲ. ಗೋಧೆ ಬೆಳೆಗೆ ಸಂಬಂಧಪಟ್ಟಂತೆ ಬೆಳೆ ಕಟಾವು ಈಗ ಮುಗಿದಿದೆ. ಭಾರತದ ಕೇಂದ್ರ ಭಾಗದಲ್ಲಿ, ಕೆಲವು ಭಾಗಗಳನ್ನು ಹೊರತುಪಡಿಸಿ ಬೇರೆ ಕಡೆಗಳಲ್ಲಿ ಮುಕ್ತಾಯವಾಗಿದೆ. ಎರಡು ವರ್ಷಗಳ ಹಿಂದೆ ತಾಪಮಾನ ಹೆಚ್ಚಾಗಿದ್ದಾಗ ಆದಂತೆ ಈ ವರ್ಷ ಗೋಧಿ ಬೆಳೆ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದರು.

SCROLL FOR NEXT