ನವದೆಹಲಿ: ಪ್ರಸಿದ್ಧ ಕಾಫಿ ಕಂಪನಿಯಾಗಿರುವ ಸ್ಟಾರ್‌ಬಕ್ಸ್ ಸಿಇಒ ಲಕ್ಷ್ಮಣ್ ನರಸಿಂಹನ್ ಅವರು ಕೇವಲ ಒಂದು ವರ್ಷದಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಲಕ್ಷ್ಮಣ್ ನರಸಿಂಹನ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಟಾರ್‌ಬಕ್ಸ್ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿ ಮಂಗಳವಾರ ಪ್ರಕಟಿಸಿದೆ.
ಸೆಪ್ಟಂಬರ್ 9 ರಿಂದ ಚಿಪಾಟ್ಲ್ ಸಿಇಒ ಬ್ರಿಯಾನ್ ನಿಕೋಲ್ ಅವರು ಅಧ್ಯಕ್ಷ ಮತ್ತು ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಾಫಿ ದೈತ್ಯ ಘೋಷಿಸಿದೆ.