ಅನಿಲ್ ಅಂಬಾನಿಗೆ ಸೆಬಿ ನಿಷೇಧ 
ವಾಣಿಜ್ಯ

Anil Ambani ಸೇರಿ 24 ಜನರು, ಸಂಸ್ಥೆಗಳ ಮೇಲೆ SEBI ಗದಾ ಪ್ರಹಾರ: 624 ಕೋಟಿ ರೂ ದಂಡ; 5 ವರ್ಷ ನಿಷೇಧ!

ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಖ್ಯಾತ ಉದ್ಯಮಿ ಅನಿಲ್‌ ಅಂಬಾನಿ, ಮೂವರು ವ್ಯಕ್ತಿಗಳು ಹಾಗೂ 22 ಕಂಪನಿಗಳ ಮೇಲೆ ಗದಾಪ್ರಹಾರ ನಡೆಸಿದೆ. ಇವರಿಗೆ ಭಾರೀ ಮೊತ್ತದ ದಂಡ ವಿಧಿಸಿದ್ದು, ಐದು ವರ್ಷಗಳ ಕಾಲ ಸೆಕ್ಯೂರಿಟೀಸ್‌ ಮಾರುಕಟ್ಟೆ (ಷೇರುಪೇಟೆ)ಯಿಂದ ನಿಷೇಧ ಹೇರಿದೆ.

ಮುಂಬೈ: ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ಸೇರಿದಂತೆ 24 ಜನರ ಮೇಲೆ SEBI ಗದಾ ಪ್ರಹಾರ ನಡೆಸಿದ್ದು, 624 ಕೋಟಿ ರೂ ದಂಡ ಹೇರಿ 5 ವರ್ಷ ನಿಷೇಧ ಹೇರಿದೆ.

ಹೌದು.. ಪ್ರಮುಖ ಬೆಳವಣಿಗೆಯೊಂದರಲ್ಲಿ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಖ್ಯಾತ ಉದ್ಯಮಿ ಅನಿಲ್‌ ಅಂಬಾನಿ, ಮೂವರು ವ್ಯಕ್ತಿಗಳು ಹಾಗೂ 22 ಕಂಪನಿಗಳ ಮೇಲೆ ಗದಾಪ್ರಹಾರ ನಡೆಸಿದೆ. ಇವರಿಗೆ ಭಾರೀ ಮೊತ್ತದ ದಂಡ ವಿಧಿಸಿದ್ದು, ಐದು ವರ್ಷಗಳ ಕಾಲ ಸೆಕ್ಯೂರಿಟೀಸ್‌ ಮಾರುಕಟ್ಟೆ (ಷೇರುಪೇಟೆ)ಯಿಂದ ನಿಷೇಧ ಹೇರಿದೆ.

ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಹೋಮ್‌ ಫೈನಾನ್ಸ್‌ ಕಂಪನಿಯಿಂದ ಹಣವನ್ನು ಬೇರೆಡೆಗೆ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣದಲ್ಲಿ ಸೆಬಿ ಈ ಮಹತ್ವದ ಆದೇಶ ಹೊರಡಿಸಿದೆ. ಅನಿಲ್‌ ಅಂಬಾನಿಗೆ 25 ಕೋಟಿ ರೂ. ದಂಡ ವಿಧಿಸಲಾಗಿದ್ದು, ಉಳಿದವರಿಗೂ ಭಾರೀ ಮೊತ್ತದ ದಂಡ ಹಾಕಲಾಗಿದೆ. ಕ್ರಮ ಎದುರಿಸಿದವರಲ್ಲಿ ರಿಲಯನ್ಸ್‌ ಹೋಮ್‌ನ ಮಾಜಿ ಅಧಿಕಾರಿಗಳೂ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

5 ವರ್ಷ ನಿರ್ಬಂಧ

ಅನಿಲ್‌ ಅಂಬಾನಿ 5 ವರ್ಷಗಳ ಕಾಲ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಬಾರದು ಎಂದು ಸೆಬಿ ಆದೇಶ ಹೊರಡಿಸಿದ್ದು, ಯಾವುದೇ ಪಟ್ಟಿ ಮಾಡಲಾದ ಕಂಪನಿಯ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ (ಕೆಎಂಪಿ) ಹುದ್ದೆ ಹೊಂದುವುದಾಗಲಿ ಅಥವಾ ಸೆಬಿಯಲ್ಲಿ ನೋಂದಾಯಿಸಲಾದ ಯಾವುದೇ ಮಧ್ಯವರ್ತಿ ಜೊತೆ ಸಂಪರ್ಕ ಸಾಧಿಸುವುದಾಗಲಿ ಮಾಡಬಾರದು ಎಂದು ಹೇಳಿದೆ. ಅಂತೆಯೇ ರಿಲಯನ್ಸ್‌ ಹೋಮ್‌ ಫೈನಾನ್ಸ್‌ನ್ನೂ ಸೆಕ್ಯೂರಿಟೀಸ್‌ ಮಾರುಕಟ್ಟೆಯಿಂದ 6 ತಿಂಗಳ ಕಾಲ ನಿರ್ಬಂಧಿಸಲಾಗಿದ್ದು, ಕಂಪನಿ ಮೇಲೂ 6 ಲಕ್ಷ ರೂ. ದಂಡ ವಿಧಿಸಲಾಗಿದೆ.

ಆರೋಪಗಳೇನು?

222 ಪುಟಗಳ ಅಂತಿಮ ಆದೇಶದಲ್ಲಿ ಸೆಬಿಯು, ಆರ್‌ಎಚ್‌ಎಫ್‌ನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗಳ ಸಹಾಯದಿಂದ ಅನಿಲ್ ಅಂಬಾನಿಯು ಆರ್‌ಎಚ್‌ಎಫ್‌ಎಲ್‌ನಿಂದ ಹಣವನ್ನು ಬೇರೆಡೆಗೆ ವರ್ಗಾಯಿಸುವ ವಂಚನೆಯ ಯೋಜನೆ ರೂಪಿಸಿದ್ದರು. ಸಾಲ ಎಂದು ಹೇಳಿ ಅವರು ತಮಗೆ ಸಂಬಂಧಿಸಿದ ಕಂಪನಿಗಳಿಗೆ ಹಣ ವರ್ಗಾಯಿಸಿಕೊಂಡಿದ್ದರು. ಆರ್‌ಎಚ್‌ಎಫ್‌ಎಲ್‌ನ ನಿರ್ದೇಶಕರ ಮಂಡಳಿ ಇಂತಹ ಸಾಲ ನೀಡುವ ಅಭ್ಯಾಸಗಳನ್ನು ತಕ್ಷಣವೇ ನಿಲ್ಲಿಸುವಂತೆ ಹೇಳಿದ್ದಲ್ಲದೆ, ಕಾರ್ಪೊರೇಟ್ ಸಾಲಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುವಂತೆ ನಿರ್ದೇಶನಗಳನ್ನೂ ನೀಡಿತ್ತು.

ಆದರೆ ಕಂಪನಿಯ ಆಡಳಿತ ಮಂಡಳಿ ಈ ಎಲ್ಲ ಆದೇಶಗಳನ್ನು ನಿರ್ಲಕ್ಷಿಸಿತ್ತು. ಇದು ಆಡಳಿತ ವೈಫಲ್ಯವಾಗಿದ್ದು, ಅನಿಲ್‌ ಅಂಬಾನಿ ಪ್ರಭಾವದ ಮೇರೆಗೆ ಕೆಲವು ವ್ಯವಸ್ಥಾಪಕ ಸಿಬ್ಬಂದಿ ಇದನ್ನು ನಡೆಸಿದ್ದರು. ಈ ವಂಚನೆಯಲ್ಲಿ ವ್ಯಕ್ತಿಗಳು ತೊಡಗಿಸಿಕೊಂಡಿದ್ದರಿಂದ, ಆರ್‌ಎಚ್‌ಎಫ್‌ಎಲ್‌ ಇಷ್ಟೇ ಪ್ರಮಾಣದಲ್ಲಿ ಇದಕ್ಕೆ ಜವಾಬ್ದಾರಿಯಾಗುವುದಿಲ್ಲ ಎಂದೂ ತಿಳಿಸಿದೆ. ಇದಲ್ಲದೆ ಉಳಿದ ಘಟಕಗಳು ಅಕ್ರಮವಾಗಿ ಪಡೆದ ಸಾಲಗಳನ್ನು ಸ್ವೀಕರಿಸುವ ಪಾತ್ರವನ್ನು ನಿರ್ವಹಿಸಿವೆ ಅಥವಾ ಆರ್‌ಎಚ್‌ಎಫ್‌ಎಲ್‌ನಿಂದ ಹಣವನ್ನು ಅಕ್ರಮವಾಗಿ ಬೇರೆಗೆ ರವಾನಿಸಲು ಅನುವು ಮಾಡಿಕೊಟ್ಟಿವೆ ಎಂದು ಸೆಬಿ ಆದೇಶದಲ್ಲಿ ಉಲ್ಲೇಖಿಸಿದೆ.

ಉಳಿದ ಘಟಕಗಳು ಅಕ್ರಮವಾಗಿ ಪಡೆದ ಸಾಲಗಳ ಸ್ವೀಕರಿಸುವವರ ಪಾತ್ರವನ್ನು ವಹಿಸಿವೆ ಅಥವಾ ಆರ್‌ಎಚ್‌ಎಫ್‌ಎಲ್‌ ನಿಂದ ಹಣವನ್ನು ಅಕ್ರಮವಾಗಿ ತಿರುಗಿಸಲು ಅನುವು ಮಾಡಿಕೊಡುತ್ತದೆ ಎಂದು ಸೆಬಿ ಗಮನಿಸಿದ್ದು, ಸಾರ್ವಜನಿಕ ಪಟ್ಟಿಯಲ್ಲಿರುವ ಕಂಪನಿಯಿಂದ (ಆರ್‌ಎಚ್‌ಎಫ್‌ಎಲ್‌) ಹಣವನ್ನು ‘ಸಾಲ’ ಎಂದು ರೂಪಿಸುವ ಮೂಲಕ, ಬಂಡವಾಳ ಕಸಿದುಕೊಳ್ಳಲು ಆರ್‌ಎಚ್‌ಎಫ್‌ಎಲ್‌ನ ‘ಕೆಎಂಪಿ’ಗಳು ಮತ್ತು ಆರ್‌ಎಚ್‌ಎಫ್‌ಎಲ್‌ ನ ಕೆಎಂಪಿಗಳು ನಿರ್ವಹಿಸುವ “ನೋಟೀಸ್ ನಂ. 2 (ಅನಿಲ್ ಅಂಬಾನಿ) ಅವರಿಂದ ಸಂಯೋಜಿತವಾಗಿರುವ ಮೋಸದ ಯೋಜನೆಯ ಅಸ್ತಿತ್ವವನ್ನು ತನ್ನ ಸಂಶೋಧನೆಗಳು ಸ್ಥಾಪಿಸಿವೆ ಎಂದು ಸೆಬಿ ಹೇಳಿದೆ.

24 ನಿರ್ಬಂಧಿತ ಘಟಕಗಳಲ್ಲಿ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್‌ಎಚ್‌ಎಫ್‌ಎಲ್‌) ನ ಮಾಜಿ ಪ್ರಮುಖ ಅಧಿಕಾರಿಗಳು ಸೇರಿದ್ದಾರೆ. ಅಮಿತ್ ಬಾಪ್ನಾ, ರವೀಂದ್ರ ಸುಧಾಲ್ಕರ್ ಮತ್ತು ಪಿಂಕೇಶ್ ಆರ್ ಷಾ ಮತ್ತು ಪ್ರಕರಣದಲ್ಲಿ ಅವರ ಪಾತ್ರಕ್ಕಾಗಿ ಸೆಬಿ ಅವರಿಗೆ ದಂಡ ವಿಧಿಸಿದೆ. ಅಲ್ಲದೆ, ನಿಯಂತ್ರಕರು ಅಂಬಾನಿಗೆ 25 ಕೋಟಿ ರೂ, ಬಾಪ್ನಾಗೆ 27 ಕೋಟಿ ರೂ, ಸುಧಾಲ್ಕರ್‌ಗೆ 26 ಕೋಟಿ ರೂ ಮತ್ತು ಶಾಗೆ 21 ಕೋಟಿ ರೂ ದಂಡ ವಿಧಿಸಲಾಗಿದೆ.

ಹೆಚ್ಚುವರಿಯಾಗಿ, ರಿಲಯನ್ಸ್ ಯುನಿಕಾರ್ನ್ ಎಂಟರ್‌ಪ್ರೈಸಸ್, ರಿಲಯನ್ಸ್ ಎಕ್ಸ್‌ಚೇಂಜ್ ನೆಕ್ಸ್ಟ್ ಲಿಮಿಟೆಡ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ರಿಲಯನ್ಸ್ ಕ್ಲೀನನ್ ಲಿಮಿಟೆಡ್, ರಿಲಯನ್ಸ್ ಬಿಸಿನೆಸ್ ಬ್ರಾಡ್‌ಕಾಸ್ಟ್ ನ್ಯೂಸ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಬಿಗ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಉಳಿದ ಘಟಕಗಳಿಗೆ ತಲಾ 25 ಕೋಟಿ ರೂ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT