ಸಾಂದರ್ಭಿಕ ಚಿತ್ರ 
ವಾಣಿಜ್ಯ

ನಿಸ್ಸಾನ್, ಹೋಂಡಾ ವಿಲೀನದ ನಿರ್ಧಾರ ಘೋಷಣೆ: ಪರಸ್ಪರ ತಿಳುವಳಿಕೆ ಪತ್ರಕ್ಕೆ ಸಹಿ!

ಈ ಸಂಬಂಧ ಎರಡು ಕಂಪನಿಗಳು ಸೋಮವಾರ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿವೆ ಮತ್ತು Mitsubishi Motors ಕೂಡ ತಮ್ಮ ವ್ಯವಹಾರಗಳನ್ನು ಸಂಯೋಜಿಸುವ ಮಾತುಕತೆಗೆ ಸೇರಲು ಒಪ್ಪಿಕೊಂಡಿದೆ ಎಂದು ಹೇಳಿದರು.

ಟೋಕಿಯೋ: ಜಪಾನಿನ ವಾಹನ ತಯಾರಕ ಕಂಪನಿಗಳಾದ ಹೋಂಡಾ ಮತ್ತು ನಿಸ್ಸಾನ್ ವಿಲೀನದ ಯೋಜನೆ ಪ್ರಕಟಿಸಿದ್ದು, ಕಾರು ಮಾರಾಟದ ಮೂಲಕ ವಿಶ್ವದ ಮೂರನೇ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಬೆಳೆಯಲು ಸಜ್ಜಾಗಿವೆ.ಇಂಧನಯಿಂದ EV ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಈ ಗಮನಾರ್ಹ ಬದಲಾವಣೆಯಾಗಿದೆ.

ಈ ಸಂಬಂಧ ಎರಡು ಕಂಪನಿಗಳು ಸೋಮವಾರ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿವೆ ಮತ್ತು Mitsubishi Motors ಕೂಡ ತಮ್ಮ ವ್ಯವಹಾರಗಳನ್ನು ಸಂಯೋಜಿಸುವ ಮಾತುಕತೆಗೆ ಸೇರಲು ಒಪ್ಪಿಕೊಂಡಿದೆ ಎನ್ನಲಾಗಿದೆ.

ಹೋಂಡಾ ಮತ್ತು ನಿಸ್ಸಾನ್ ಜಂಟಿಯಾಗಿ ತಮ್ಮ ಕಾರ್ಯಾಚರಣೆ ಮುಂದುವರಿಸುತ್ತವೆ ಎಂದು ಹೋಂಡಾದ ಅಧ್ಯಕ್ಷ ತೋಶಿಹಿರೊ ಮಿಬೆ ಹೇಳಿದ್ದಾರೆ. ಹೋಂಡಾ ಆರಂಭದಲ್ಲಿ ಹೊಸ ನಿರ್ವಹಣೆಯನ್ನು ಮುನ್ನಡೆಸುತ್ತದೆ. ಪ್ರತಿ ಕಂಪನಿಯ ತತ್ವಗಳು ಮತ್ತು ಬ್ರ್ಯಾಂಡ್‌ಗಳನ್ನು ಉಳಿಸಿಕೊಳ್ಳಲಾಗುತ್ತದೆ. ಜೂನ್ ವೇಳೆಗೆ ಔಪಚಾರಿಕ ವಿಲೀನ ಒಪ್ಪಂದ ಮಾಡಿಕೊಳ್ಳಲು ಮತ್ತು ಆಗಸ್ಟ್ 2026 ರೊಳಗೆ ಒಪ್ಪಂದವನ್ನು ಪೂರ್ಣಗೊಳಿಸುವ ಗುರಿ ಇದೆ ಎಂದರು.

ಯಾವುದೇ ಒಪ್ಪಂದದ ಮೊತ್ತ ನೀಡಲಾಗಿಲ್ಲ. ಕೇವಲ ಔಪಚಾರಿಕ ಮಾತುಕತೆಗಳು ಮಾತ್ರ ಪ್ರಾರಂಭವಾಗುತ್ತಿವೆ. ಅಧ್ಯಯನ ಮತ್ತು ಚರ್ಚೆ ಮಾಡಬೇಕಾದ ಅಂಶಗಳಿವೆ. ಈ ಎರಡು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಹಿಂದುಳಿದಿದ್ದಾರೆ ಮತ್ತು ವೆಚ್ಚವನ್ನು ಕಡಿತಗೊಳಿಸಲು ಮತ್ತು ಕಳೆದುಹೋದ ಸಮಯವನ್ನು ಸರಿದೂಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಈ ತಿಂಗಳ ಆರಂಭದಲ್ಲಿ ತೈವಾನ್ ಐಫೋನ್ ತಯಾರಕ ಫಾಕ್ಸ್‌ಕಾನ್‌ ನಿಶಾನ್ ಜೊತೆಗೆ ವಿಲೀನ ಮಾಡಿಕೊಂಡಾಗ ನಿಸ್ಸಾನ್ ಮತ್ತು ಹೋಂಡಾ ವಿಲೀನದ ಸಂಭವನೀಯ ಸುದ್ದಿ ಹೊರಬಿದ್ದಿತ್ತು.ನಿಶಾನ್ ಫ್ರಾನ್ಸ್ ನ ರೆನಾಲ್ಟ್ ಮತ್ತು Mitsubishi Motors ಕಂಪನಿಯೊಂದಿಗೆ ವಿಲೀನ ಮಾಡಿಕೊಂಡಿತ್ತು. ಟೊಯೋಟಾ ಮೋಟಾರ್ ಮತ್ತು ಜರ್ಮನಿಯ Volkswagen AG ಯೊಂದಿಗೆ ಪ್ರತಿಸ್ಪರ್ಧೆಗಾಗಿ ಈ ವಿಲೀನದ ನಿರ್ಧಾರ ಮಾಡಲಾಗಿದೆ. 2023ರಲ್ಲಿ ವಿಲೀನದ ನಂತರವೂ 11.5 ಮಿಲಿಯನ್ ಕಾರುಗಳನ್ನು ಟೊಯೋಟಾ ತಯಾರು ಮಾಡಿದ್ದರೆ, ಹೋಂಡಾ 4 ಮಿಲಿಯನ್, ನಿಶಾನ್ 3.4 ಮಿಲಿಯನ್ ಕಾರುಗಳನ್ನು ಉತ್ಪಾದಿಸಿದೆ. Mitsubishi Motors ಕೇವಲ 1 ಮಿಲಿಯನ್ ಕಾರು ತಯಾರು ಮಾಡಿದೆ.

ಮಾರ್ಚ್‌ನಲ್ಲಿ ನಿಸ್ಸಾನ್ ಮತ್ತು ಹೋಂಡಾ ನಡುವಿನ ಪ್ರಾಥಮಿಕ ಒಪ್ಪಂದದ ನಂತರ ಎಲೆಕ್ಟ್ರಾನಿಕ್ ವೆಹಿಕಲ್ ಗಳಿಗೆ ಬ್ಯಾಟರಿ, ವಿದ್ಯುದೀಕರಣಕ್ಕೆ ಸಂಬಂಧಿಸಿದ ಅಂಶಗಳನ್ನು ಹಂಚಿಕೊಳ್ಳವುದಾಗಿ ನಿಶಾನ್, ಹೋಂಡಾ ಮತ್ತು Mitsubishi ಕಂಪನಿಗಳು ಆಗಸ್ಟ್ ನಲ್ಲಿ ಘೋಷಿಸಿದ್ದವು. ಹೋಂಡಾ ಜಪಾನಿ ಎರಡನೇ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾಗಿದ್ದು, ನಿಶಾನ್ ಕೂಡಾ ಬ್ಯಾಟರಿ, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಹಲವು ವರ್ಷಗಳ ಅನುಭವ ಹೊಂದಿದೆ. ಅದರ ಮಾಜಿ ಮುಖ್ಯಸ್ಥ ಕಾರ್ಲೋಸ್ ಘೋಸ್ನ್ ಕಂಪನಿ ಆಸ್ತಿ ದುರುಪಯೋಗ ವಂಚನೆ ಪ್ರಕರಣದಲ್ಲಿ ಬಂಧನವಾದ ನಂತರ ನಷ್ಟದಲ್ಲಿದ್ದು, ಆ ಕಂಪನಿಯನ್ನು ರಕ್ಷಿಸುವ ಪ್ರಯತ್ನವನ್ನು ಹೋಂಡಾ ಪ್ರಯತ್ನಿಸುತ್ತಿದೆ. ಘೋಸ್ನ್ ಜಾಮೀನಿನ ಮೇಲೆ ಬಿಡುಗಡೆ ನಂತರ ಲೆಬನಾನ್ ಗೆ ಪಲಾಯನ ಮಾಡಿದ್ದಾರೆ.

ಈ ಮಧ್ಯೆ ಹೋಂಡಾ- ನಿಸ್ಸಾನ್ ವಿಲೀನ್ ಕುರಿತು ಸೋಮವಾರ ಮಾತನಾಡಿದ ಜಪಾನಿ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಮಾಸಾ ಹಯಾಶಿ, ಕಾರು ತಯಾರಿಕ ಕಂಪನಿಗಳ ಬಗ್ಗೆ ಮಾತನಾಡುವುದಿಲ್ಲ, ಆದರೆ ಜಪಾನಿನ ಕಂಪನಿಗಳು ವೇಗವಾಗಿ ಬದಲಾಗುತ್ತಿರುವ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT