ಬೈಜು ರವೀಂದ್ರನ್
ಬೈಜು ರವೀಂದ್ರನ್ 
ವಾಣಿಜ್ಯ

ಬೈಜುಸ್ ಷೇರುದಾರರ ಸಭೆ; ರವೀಂದ್ರನ್, ಕುಟುಂಬಸ್ಥರ ಪದಚ್ಯುತಿಗೆ ಮತ!

Nagaraja AB

ನವದೆಹಲಿ: ದೇಶದ ಪ್ರಮುಖ ಟೆಕ್ ಸ್ಟಾರ್ಟ್ ಅಪ್ ಗಳಲ್ಲಿ ಒಂದಾದ ಬೈಜುಸ್ ಕಂಪನಿಯ ಆಡಳಿತ ಮಂಡಳಿಯಿಂದ ಸಿಇಒ ಬೈಜು ರವೀಂದ್ರನ್ ಹಾಗೂ ಅವರ ಕುಟುಂಬಸ್ಥರನ್ನು ಪದಚ್ಯುತಿಗೊಳಿಸಲು ಇಂದು ನಡೆದ ಷೇರುದಾರರ ವಿಶೇಷ ಸಾಮಾನ್ಯ ಸಭೆಯಲ್ಲಿ ಶೇ. 60 ಕ್ಕೂ ಹೆಚ್ಚು ಷೇರುದಾರರು ಮತ ಚಲಾಯಿಸಿದ್ದಾರೆ.

ರವೀಂದ್ರನ್ ಹಾಗೂ ಅವರ ಕುಟುಂಬಸ್ಥರು ಕಂಪನಿಯ ನಿರ್ವಹಣೆಯಲ್ಲಿ ವೈಫಲ್ಯ ಕಂಡಿದ್ದಾರೆ ಎಂದು ಆರೋಪಿಸಿ, ಮತ ಚಲಾಯಿಸಿದ್ದಾರೆ. ಆದರೆ, ಕಂಪನಿಯ ಸಂಸ್ಥಾಪಕರ ಅನುಪಸ್ಥಿತಿಯಲ್ಲಿ ನಡೆದ ಮತದಾನವನ್ನು ಅಮಾನ್ಯ ಎಂದು ಮಾಡಲಾಗುತ್ತದೆ. ಕಂಪನಿಯಲ್ಲಿ ರವೀಂದ್ರನ್ ಮತ್ತು ಕುಟುಂಬದವರು ಶೇ.26.3ರಷ್ಟು ಷೇರು ಹೊಂದಿದ್ದು, ವಿಶೇಷ ಸಾಮಾನ್ಯ ಸಭೆಯಿಂದ ದೂರ ಉಳಿದರು.

ಕಂಪನಿಯಲ್ಲಿ ಶೇ. 30 ರಷ್ಟು ಷೇರುಗಳನ್ನು ಹೊಂದಿರುವ ಪ್ರಮುಖ ಆರು ಮಂದಿ ಹೂಡಿಕೆದಾರರು ಕರೆದಿದ್ದ ಸಭೆಯಲ್ಲಿ ಷೇರುದಾರರು ಮತಕ್ಕಾಗಿ ಮಂಡಿಸಲಾದ ಎಲ್ಲಾ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ" ಎಂದು ಷೇರುದಾರರಲ್ಲಿ ಒಬ್ಬರಾದ ಪ್ರೊಸಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಥಿಂಕ್ ಆ್ಯಂಡ್ ಲರ್ನ್ ಮಂಡಳಿಯಲ್ಲಿ ಶೇ. 32 ರಷ್ಟು ಷೇರು ಹೊಂದಿರುವ ಹೂಡಿಕೆದಾರರು ಕರೆದಿದ್ದ ಸಭೆಯ ಸಿಂಧುತ್ವ ಪ್ರಶ್ನಿಸಿ ರವೀಂದ್ರನ್ ಅವರು ಕರ್ನಾಟಕ ಮೆಟ್ಟಿಲೇರಿದ್ದರು. ಆದರೆ, ಈ ಸಭೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದ್ದು, ಮಾರ್ಚ್ 13ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಹಾಗಾಗಿ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಂಡರೂ ವಿಚಾರಣಾ ಅವಧಿವರೆಗೂ ಅದು ಅನ್ವಯಿಸುವುದಿಲ್ಲ ಎನ್ನಲಾಗಿದೆ.

SCROLL FOR NEXT