ಏರ್ ಇಂಡಿಯಾ 
ವಾಣಿಜ್ಯ

ಗಾಲಿಕುರ್ಚಿ ಸಿಗದೆ ಸಾವಿಗೀಡಾದ ವೃದ್ಧ ಪ್ರಯಾಣಿಕ; ಏರ್ ಇಂಡಿಯಾಗೆ 30 ಲಕ್ಷ ರೂ. ದಂಡ

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಾಲಿಕುರ್ಚಿ ನೀಡದ ಕಾರಣ 80 ವರ್ಷದ ಪ್ರಯಾಣಿಕರೊಬ್ಬರು ವಿಮಾನದಿಂದ ಟರ್ಮಿನಲ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ಸಾವಿಗೀಡಾದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ₹ 30 ಲಕ್ಷ ದಂಡ ವಿಧಿಸಿದೆ.

ನವದೆಹಲಿ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಾಲಿಕುರ್ಚಿ ನೀಡದ ಕಾರಣ 80 ವರ್ಷದ ಪ್ರಯಾಣಿಕರೊಬ್ಬರು ವಿಮಾನದಿಂದ ಟರ್ಮಿನಲ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ಸಾವಿಗೀಡಾದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ₹ 30 ಲಕ್ಷ ದಂಡ ವಿಧಿಸಿದೆ. ಫೆಬ್ರುವರಿ 16 ರಂದು ಈ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತ್ವರಿತ ಕ್ರಮ ಕೈಗೊಂಡಿದೆ. ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಳಿತ್ತು. ಪ್ರತಿಕ್ರಿಯೆಯನ್ನು ಪರಿಶೀಲಿಸಿದ ನಂತರ, ಏರ್ ಇಂಡಿಯಾ ತಪ್ಪಿತಸ್ಥರೆಂದು ಕಂಡುಬಂದಿದ್ದು, 30 ಲಕ್ಷ ರೂ. ದಂಡ ವಿಧಿಸಿದೆ.

ಪ್ರಯಾಣಿಕನ ಹೆಂಡತಿಗೆ ಗಾಲಿಕುರ್ಚಿಯನ್ನು ಒದಗಿಸಲಾಗಿದೆ. ಇನ್ನೊಂದು ಕುರ್ಚಿಯನ್ನು ವ್ಯವಸ್ಥೆ ಮಾಡುವವರೆಗೆ ಕಾಯುವಂತೆ ಸಿಬ್ಬಂದಿ ಅವರಿಗೆ ಸೂಚಿಸಿದ್ದರು. ಆದರೆ, ಅವರು ತನ್ನ ಹೆಂಡತಿಯೊಂದಿಗೆ ಟರ್ಮಿನಲ್‌ಗೆ ತೆರಳಲು ನಿರ್ಧರಿಸಿದರು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

'ಫೆಬ್ರುವರಿ 12 ರಂದು ನ್ಯೂಯಾರ್ಕ್‌ನಿಂದ ಮುಂಬೈಗೆ ತೆರಳುತ್ತಿದ್ದ ನಮ್ಮ ಪ್ರಯಾಣಿಕರಲ್ಲಿ ಒಬ್ಬರು ಗಾಲಿಕುರ್ಚಿಯಲ್ಲಿದ್ದ ಅವರ ಪತ್ನಿಯೊಂದಿಗೆ ಇಮಿಗ್ರೇಷನ್ ಅನ್ನು ತೆರವುಗೊಳಿಸಲು ಮುಂದಾದಾಗ ಅನಾರೋಗ್ಯಕ್ಕೆ ತುತ್ತಾದರು. ಗಾಲಿಕುರ್ಚಿಗಳಿಗೆ ಭಾರಿ ಬೇಡಿಕೆಯಿರುವ ಕಾರಣ, ಮತ್ತೊಂದನ್ನು ಒದಗಿಸುವವರೆಗೆ ಕಾಯುವಂತೆ ನಾವು ಪ್ರಯಾಣಿಕರಿಗೆ ವಿನಂತಿಸಿದ್ದೇವೆ. ಆದರೆ, ಅವರು ತಮ್ಮ ಸಂಗಾತಿಯೊಂದಿಗೆ ನಡೆಯಲು ನಿರ್ಧರಿಸಿದರು' ಎಂದು ಏರ್ ಇಂಡಿಯಾ ಹೇಳಿದೆ.

ಘಟನೆಯನ್ನು ಡಿಜಿಸಿಎ ಪರಿಶೀಲಿಸಿದ ನಂತರ, ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಅಥವಾ ನಡೆಯಲು ಸಾಧ್ಯವಾಗದಂತ ವ್ಯಕ್ತಿಗಳಿಗೆ ಅನುಸರಿಸುವ ನಿರ್ದಿಷ್ಟ ಮಾನದಂಡಗಳನ್ನು ಏರ್ ಇಂಡಿಯಾ ಅನುಸರಿಸಿಲ್ಲ ಎಂಬುದು ತಿಳಿದುಬಂದಿದೆ. ಹೀಗಾಗಿ, ನಿಯಮದ ಪ್ರಕಾರ, ಏರ್ ಇಂಡಿಯಾ ಸಂಸ್ಥೆಗೆ ದಂಡ ವಿಧಿಸಲಾಗಿದೆ.

ಡಿಜಿಸಿಎ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸಲಹೆಯನ್ನು ನೀಡಿದೆ. ವಿಮಾನದಿಂದ ಇಳಿಯುವಾಗ ಅಥವಾ ಹತ್ತುವಾಗ ಸಹಾಯದ ಅಗತ್ಯವಿರುವ ಪ್ರಯಾಣಿಕರಿಗೆ ಸಾಕಷ್ಟು ಸಂಖ್ಯೆಯ ಗಾಲಿಕುರ್ಚಿಗಳನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?