ವಾಣಿಜ್ಯ

ಡಿಸೆಂಬರ್‌ನಲ್ಲಿ ಜಿಎಸ್‌ಟಿ ಕಲೆಕ್ಷನ್ ಶೇ. 10 ರಷ್ಟು ಹೆಚ್ಚಳ; 1.64 ಲಕ್ಷ ಕೋಟಿ ರೂ. ಸಂಗ್ರಹ

Lingaraj Badiger

ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಶೇಕಡಾ 10 ರಷ್ಟು ಏರಿಕೆಯಾಗಿದ್ದು, ಸುಮಾರು 1.64 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ. ಇದು 2022ರ ಡಿಸೆಂಬರ್ ಗೆ ಹೋಲಿಸಿದರೆ ಶೇ. 10 ರಷ್ಟು ಹೆಚ್ಚವಾಗಿದೆ. 2022ರ ಡಿಸೆಂಬರ್ ನಲ್ಲಿ ಒಟ್ಟು 1.49 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಕಲೆಕ್ಷನ್ ಆಗಿತ್ತು ಎಂದು ಸೋಮವಾರ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಏಪ್ರಿಲ್-ಡಿಸೆಂಬರ್ 2023 ರ ಅವಧಿಯಲ್ಲಿ, ಒಟ್ಟು ಜಿಎಸ್‌ಟಿ ಸಂಗ್ರಹವು ಶೇ. 12 ರಷ್ಟು ಬೆಳವಣಿಗೆಯನ್ನು ಕಂಡಿದೆ. ದೇಶೀಯ ವಹಿವಾಟುಗಳು ಮತ್ತು ಸೇವೆಗಳ ಆಮದು ಏರಿಕೆಯು ಜೆಎಸ್ ಟಿ ಆದಾಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

"ಡಿಸೆಂಬರ್, 2023 ರಲ್ಲಿ ಒಟ್ಟು ಜಿಎಸ್‌ಟಿ ಆದಾಯ 1,64,882 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಸಿಜಿಎಸ್‌ಟಿ 30,443 ಕೋಟಿ ರೂಪಾಯಿ, ಎಸ್‌ಜಿಎಸ್‌ಟಿ 37,935 ಕೋಟಿ ರೂಪಾಯಿ, ಐಜಿಎಸ್‌ಟಿ 84,255 ಕೋಟಿ ರೂಪಾಯಿ (ರೂ. 41,534 ಕೋಟಿ ಆಮದು ಮಾಡಿದ ಸರಕುಗಳನ್ನು ಒಳಗೊಂಡಂತೆ) ಮತ್ತು ಸೆಸ್ 12,249 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1,079 ಕೋಟಿ ಸೇರಿದಂತೆ)" ರೂಪಾಯಿ ಸಂಗ್ರಹವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

SCROLL FOR NEXT