ವಾಣಿಜ್ಯ

ಐಪಿಒಗೂ ಮುನ್ನ 400 ಉದ್ಯೋಗಿಗಳನ್ನು ನೌಕರಿಯಿಂದ ವಜಾಗೊಳಿಸಲು ಸ್ವಿಗ್ಗಿ ಮುಂದು!

Srinivas Rao BV

ನವದೆಹಲಿ: ಐಪಿಒಗೂ ಮುನ್ನ 400 ಉದ್ಯೋಗಿಗಳನ್ನು ನೌಕರಿಯಿಂದ ವಜಾಗೊಳಿಸಲು ಸ್ವಿಗ್ಗಿ ಮುಂದಾಗಿದೆ. 

ಸಂಸ್ಥೆಯ ಪುನಾರಚನೆಯ ಯೋಜನೆಯ ಭಾಗವಾಗಿ ಸಂಸ್ಥೆ 380 ಕೌಶಲ್ಯ ಸ್ವಿಗ್ಗಿ ನೌಕರರನ್ನು ತೆಗೆದುಹಾಕುತ್ತಿರುವುದಾಗಿ ಕಳೆದ ವರ್ಷ ಹೇಳಿತ್ತು.  ಈಗ ಮತ್ತೆ 400 ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಸ್ವಿಗ್ಗಿ ಹೇಳಿದೆ.
 
ವರದಿಗಳ ಪ್ರಕಾರ ಹಣಕಾಸು ವೆಚ್ಚವನ್ನು ಕಡಿಮೆ ಮಾಡಲು ಎರಡನೇ ಹಂತದಲ್ಲಿ ಉದ್ಯೋಗ ಕಡಿತಕ್ಕೆ ಸಂಸ್ಥೆ ಮುಂದಾಗಿದ್ದು, 6000 ನೌಕರರ ಪೈಕಿ ಶೇ.7ರಷ್ಟು ಮಂದಿ ನೌಕರರ ಮೇಲೆ ಈ ನಿರ್ಧಾರ ಪರಿಣಾಮ ಉಂಟುಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಟೆಕ್, ಗ್ರಾಹಕ ಸೇವೆ ಮತ್ತು ಕಾರ್ಪೊರೇಟ್ ಪಾತ್ರಗಳಲ್ಲಿ ಕೆಲಸ ಮಾಡುವವರು ಉದ್ಯೋಗ ಕಡಿತದಿಂದ ಹೆಚ್ಚು ಹಾನಿಗೊಳಗಾಗುವ ಸಾಧ್ಯತೆಯಿದೆ.

ಕಳೆದ ಬಾರಿ ಉದ್ಯೋಗ ಕಡಿತದ ಸಮಯದಲ್ಲಿ, ಉದ್ಯೋಗಿಗಳಿಗೆ  ಸಮಗ್ರ ಉದ್ಯೋಗಿ ಸಹಾಯ ಯೋಜನೆಯನ್ನು ನೀಡುವುದಾಗಿ ಕಂಪನಿ ಭರವಸೆ ನೀಡಿತ್ತು. 

SCROLL FOR NEXT