ಮುಂಬೈ: ದೇಶದಲ್ಲಿ ಹಾಲಿ ವರ್ಷದಲ್ಲಿ ಸುಮಾರು 7 ಕೋಟಿಗೂ ಅಧಿಕ ITR ಸಲ್ಲಿಕೆಯಾಗಿದೆ ಎಂದು ಕೇಂದ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜುಲೈ 31 ಆದಾಯ ತೆರಿಗೆ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ಇಂದು ಒಂದೇ ದಿನ ಅಂದರೆ ಸಂಜೆ 7 ಗಂಟೆಯವರೆಗೂ 50 ಲಕ್ಷಕ್ಕೂ ಹೆಚ್ಚು ಐಟಿಆರ್‌ಗಳು ಸಲ್ಲಿಕೆಯಾಗಿವೆ.
ಅಲ್ಲದೆ ಈ ವರೆಗಿನ ಆದಾಯ ತೆರಿಗೆ ಸಲ್ಲಿಕೆ ಸಂಖ್ಯೆ 7 ಕೋಟಿ ದಾಟಿದೆ ಎಂದು ಆದಾಯ ತೆರಿಗೆ ಇಲಾಖೆ ಎಕ್ಸ್ (ಟ್ವಿಟರ್)ನಲ್ಲಿ ಮಾಹಿತಿ ನೀಡಿದೆ.
ITR ಫೈಲಿಂಗ್, ತೆರಿಗೆ ಪಾವತಿ ಮತ್ತು ಇತರ ಸಂಬಂಧಿತ ಸೇವೆಗಳಿಗೆ ತೆರಿಗೆದಾರರಿಗೆ ಸಹಾಯ ಮಾಡಲು, ನಮ್ಮ ಹೆಲ್ಪ್‌ಡೆಸ್ಕ್ 24x7 ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ ಮತ್ತು ನಾವು ಕರೆಗಳು, ಲೈವ್ ಚಾಟ್‌ಗಳು, WebEx ಸೆಷನ್‌ಗಳು ಮತ್ತು Twitter/X ಮೂಲಕ ಬೆಂಬಲವನ್ನು ಒದಗಿಸುತ್ತಿದ್ದೇವೆ ಎಂದು ಟ್ವೀಟ್ ನಲ್ಲಿ ತಿಳಿಸಿದೆ.
ದಾಖಲೆ
ಇನ್ನು ವಿತ್ತೀಯ ವರ್ಷದಲ್ಲಿ ಇದೇ ಮೊದಲ ಬಾರಿಗೆ 7 ಕೋಟಿಗೂ ಅಧಿಕ ತೆರಿಗೆ ಸಲ್ಲಿಕೆಯಾಗಿದ್ದು ಇದು ಹೊಸ ಮೈಲಿಗಲ್ಲು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಅಲ್ಲದೆ ಈ ಮೈಲಿಗಲ್ಲನ್ನು ತಲುಪಲು ನಮಗೆ ಸಹಾಯ ಮಾಡಿದ್ದಕ್ಕಾಗಿ ತೆರಿಗೆದಾರರು ಮತ್ತು ತೆರಿಗೆ ವೃತ್ತಿಪರರಿಗೆ ನಾವು ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಮತ್ತು AY 2024-25 ಗಾಗಿ ITR ಅನ್ನು ಸಲ್ಲಿಸದ ಎಲ್ಲರೂ ತಮ್ಮ ITR ಅನ್ನು ಸಲ್ಲಿಸುವಂತೆ ಒತ್ತಾಯಿಸುತ್ತೇವೆ ಎಂದು ಟ್ವೀಟ್ ಮಾಡಿದೆ.