ಏರ್ ಟೆಲ್ 
ವಾಣಿಜ್ಯ

ಜಿಯೋ ಬೆನ್ನಲ್ಲೇ ಭಾರ್ತಿ ಏರ್ ಟೆಲ್ ರಿಚಾರ್ಜ್ ದರ ಹೆಚ್ಚಳ!

ಮೊಬೈಲ್ ಬಳಕೆದಾರರಿಗೆ ಜಿಯೋ ಬೆನ್ನಲ್ಲೇ ಇದೀಗ ಏರ್ ಟೆಲ್ ಕೂಡಾ ಶಾಕ್ ನೀಡಿದೆ. ಶೇ. 10-21 ರಷ್ಟು ಮೊಬೈಲ್ ರಿಜಾರ್ಜ್ ದರವನ್ನು ಏರಿಕೆ ಮಾಡುವುದಾಗಿ ಭಾರ್ತಿ ಏರ್ ಟೆಲ್ ಹೇಳಿದೆ.

ನವದೆಹಲಿ: ಮೊಬೈಲ್ ಬಳಕೆದಾರರಿಗೆ ಜಿಯೋ ಬೆನ್ನಲ್ಲೇ ಇದೀಗ ಏರ್ ಟೆಲ್ ಕೂಡಾ ಶಾಕ್ ನೀಡಿದೆ. ಶೇ. 10-21 ರಷ್ಟು ಮೊಬೈಲ್ ರಿಜಾರ್ಜ್ ದರವನ್ನು ಏರಿಕೆ ಮಾಡುವುದಾಗಿ ಭಾರ್ತಿ ಏರ್ ಟೆಲ್ ಹೇಳಿದೆ. ಮೊಬೈಲ್ ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ನಿನ್ನೆ ರಿಚಾರ್ಜ್ ದರ ಹೆಚ್ಚಿಸಿತ್ತು. ಇದರ ಬಾರ್ತಿ ಏರ್ ಟೆಲ್ ಕೂಡಾ ರಿಚಾರ್ಜ್ ದರವನ್ನು ಶುಕ್ರವಾರ ಹೆಚ್ಚಿಸಿದೆ. ಜುಲೈ 3ರಿಂದ ಹೊಸ ದರ ಅನ್ವಯವಾಗಲಿದೆ ಎಂದು ಸುನಿಲ್ ಭಾರ್ತಿ ಮಿತ್ತಲ್ ಅವರ ದೂರ ಸಂಪರ್ಕ ಸಂಸ್ಥೆ ಹೇಳಿದೆ.

10ನೇ ತರಂಗಾಂತರ ಹರಾಜು ಪ್ರಕ್ರಿಯೆ ಕೇವಲ ಎರಡು ದಿನಗಳಲ್ಲಿ ಮುಗಿದ ಕೂಡಲೇ ಮೊಬೈಲ್ ಟಾರಿಫ್ ದರ ಏರಿಕೆ ಘೋಷಣೆಯಾಗಿದೆ. 5ಜಿ ಸೇವೆಗಳಿಗೆ ಭಾರಿ ಹೂಡಿಕೆ ಕಾರಣದಿಂದ ಪ್ರತಿ ಬಳಕೆದಾರರ ಸರಾಸರಿ ಆದಾಯವನ್ನು (ಎಆರ್‌ಪಿಯು) ಹೆಚ್ಚಿಸುವ ಗುರಿಯೊಂದಿಗೆ ಇದು ಜಾರಿಗೆ ಬಂದಿದೆ.

ಏರ್ ಟೆಲ್ ನ ಪರಿಷ್ಕೃತ ಪ್ರೀಪೇಯ್ಡ್ ಪ್ಲಾನ್ ಗಳು ಹೀಗಿವೆ..

ಅನ್ಲಿಮಿಟೆಡ್ ವಾಯ್ಸ್ ಪ್ಲಾನ್:

• ರೂ. 179ರಿಂದ ರೂ. 199ಕ್ಕೆ ಹೆಚ್ಚಳ (28 ದಿನ ವ್ಯಾಲಿಡಿಟಿ)

• ರೂ. 455ರಿಂದ ರೂ. 509ಕ್ಕೆ ಹೆಚ್ಚಳ (84 ದಿನ ವ್ಯಾಲಿಡಿಟಿ)

• ರೂ.1,799ರಿಂದ ರೂ.1,999ಕ್ಕೆ ಹೆಚ್ಚಳ (365 ದಿನ ವ್ಯಾಲಿಡಿಟಿ)

ಡಾಟಾ ಪ್ಲಾನ್ ಗಳು

• 1 ಜಿಬಿ–ರೂ. 265 ರಿಂದ ರೂ. 299ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)

• 1.5 ಜಿಬಿ–ರೂ. 299 ರಿಂದ ರೂ. 349ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)

• 2.5 ಜಿಬಿ–ರೂ. 359 ರಿಂದ ರೂ. 409ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)

• 3 ಜಿಬಿ–ರೂ. 399 ರಿಂದ ರೂ. 449ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)

• 1.5ಜಿಬಿ–ರೂ. 479 ನಿಂದ ರೂ. 579ಗೆ ಹೆಚ್ಚಳ (56 ದಿನ ವ್ಯಾಲಿಡಿಟಿ)

• 2 ಜಿಬಿ–ರೂ. 549 ನಿಂದ ರೂ. 649ಗೆ ಹೆಚ್ಚಳ (56 ದಿನ ವ್ಯಾಲಿಡಿಟಿ)

• 1.5ಜಿಬಿ–ರೂ. 719 ನಿಂದ ರೂ. 859ಗೆ ಹೆಚ್ಚಳ (84 ದಿನ ವ್ಯಾಲಿಡಿಟಿ)

• 2 ಜಿಬಿ–ರೂ. 839 ನಿಂದ ರೂ. 979ಗೆ ಬೆಲೆ ಹೆಚ್ಚಳ (84 ದಿನ ವ್ಯಾಲಿಡಿಟಿ)

• 2 ಜಿಬಿ–ರೂ. 2,999 ನಿಂದ ರೂ. 3,599ಗೆ ಹೆಚ್ಚಳ (365 ದಿನ ವ್ಯಾಲಿಡಿಟಿ)

ಹೆಚ್ಚುವರಿ ಡಾಟಾ ದರ

• 1 ಜಿಬಿ ಹೆಚ್ಚುವರಿ ಡಾಟಾ ದರ ರೂ. 19 ರಿಂದ 22 ರೂಪಾಯಿಗೆ ಹೆಚ್ಚಳ (1 ದಿನದ ವ್ಯಾಲಿಡಿಟಿ)

• 2 ಜಿಬಿ ಹೆಚ್ಚುವರಿ ಡಾಟಾ ದರ ರೂ. 29 ರಿಂದ ರೂ.33 ಕ್ಕೆ ಹೆಚ್ಚಳ (1 ದಿನದ ವ್ಯಾಲಿಡಿಟಿ)

• 4 ಜಿಬಿ ಹೆಚ್ಚುವರಿ ಡಾಟಾಗೆ ರೂ. 65 ರಿಂದ 77 ರೂಪಾಯಿಗೆ ಹೆಚ್ಚಳ (ಪ್ಲಾನ್ ಕಾಲಮಿತಿಯವರೆಗೂ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶ ರದ್ದು: KPSC ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಮರುನೇಮಕಕ್ಕೆ ಹೈಕೋರ್ಟ್ ಸೂಚನೆ

India vs Sri Lanka: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್!

ನೀಟ್ ಪ್ರತಿಭಟನೆ: ಪೊಲೀಸರ ದೌರ್ಜನ್ಯ ಆರೋಪಗಳ ತನಿಖೆಗೆ ಸುಪ್ರೀಂ ಉನ್ನತಾಧಿಕಾರ ಸಮಿತಿ

'ಮಹಾತ್ಮ ಗಾಂಧಿ, ನೆಹರು ಅಷ್ಟೇ ಅಲ್ಲ ವಾಜಪೇಯಿ ವಿರುದ್ಧವೂ ಕೇಸ್ ದಾಖಲಿಸಿ': ವಂದೇ ಮಾತರಂ ವಿವಾದ ಕುರಿತು ಖರ್ಗೆ ತಿರುಗೇಟು

ಪಬ್‌ನಲ್ಲಿ ಶಾಕಿಂಗ್ ಘಟನೆ: ಬಾರ್‌ಟೆಂಡರ್ ಯುವತಿಗೆ ಚಾಕುವಿನಿಂದ ಇರಿದು ಕೊಂದ ಸಹೋದ್ಯೋಗಿ; ಭಯಾನಕ ಕೃತ್ಯ CCTVಯಲ್ಲಿ ಸೆರೆ! Video