ಗೂಗಲ್ ಸಂಸ್ಥೆಯ ಕಚೇರಿ
ಗೂಗಲ್ ಸಂಸ್ಥೆಯ ಕಚೇರಿ 
ವಾಣಿಜ್ಯ

ಆ್ಯಪ್ ಗಳಲ್ಲಿ ಸಂಗಾತಿ ಇನ್ನು ಸಿಗಲ್ಲ; ಗೂಗಲ್ ಪ್ಲೇ ಸ್ಟೋರ್ ನಿಂದ ಮ್ಯಾಟ್ರಿಮೋನಿ ಆ್ಯಪ್ ಗಳಿಗೆ ಗೇಟ್ ಪಾಸ್.. ಕಾರಣ ಗೊತ್ತಾ?

Srinivasamurthy VN

ನವದೆಹಲಿ: ಗೂಗಲ್ ಪ್ಲೇ ಸ್ಟೋರ್ ನಿಂದ ಮ್ಯಾಟ್ರಿಮೋನಿ ಆ್ಯಪ್ ಗಳಿಗೆ ಗೇಟ್ ಪಾಸ್ ನೀಡಲಾಗಿದ್ದು, ಇನ್ನು ಮುಂದೆ ಆ್ಯಪ್ ಗಳಲ್ಲಿ ಸಂಗಾತಿ ಹುಡುಕಾಟ ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಹೌದು... ಸಂಗಾತಿಯನ್ನು ಸುಲಭವಾಗಿ ಪತ್ತೆಹಚ್ಚಲು ಮ್ಯಾಟ್ರಿಮೋನಿ ಆ್ಯಪ್‌ಗಳು (Matrimony App) ಪ್ರಮುಖ ಸಾಧನವಾಗಿದ್ದು, ಆದರೆ ಇದೀಗ ಕಾರಣಾಂತರಗಳಿಂದ ಇಂತಹ ಮ್ಯಾಟ್ರಿಮೋನಿ ಆ್ಯಪ್ ಗಳನ್ನು ಗೂಗಲ್ ತನ್ನ ಪ್ಲೇಸ್ಟೋರ್ ನಿಂದ ತೆಗೆದು ಹಾಕಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಗೂಗಲ್‌ ಸಂಸ್ಥೆಯು (Google) ಪ್ಲೇಸ್ಟೋರ್‌ನಿಂದ (Play Store) ಭಾರತ್‌ ಮ್ಯಾಟ್ರಿಮೋನಿ ಆ್ಯಪ್ ಅನ್ನು (Bharat Matrimony) ತೆಗೆದುಹಾಕಿದ್ದು, ಇದರಿಂದಾಗಿ ಆನ್‌ಲೈನ್‌ ಮೂಲಕ ಸಂಗಾತಿಯನ್ನು ಹುಡುಕುವವರಿಗೆ ಭಾರಿ ಹಿನ್ನಡೆಯಾಗಿದೆ.

ಗೂಗಲ್ ನ ಈ ಕಠಿಣ ನಡೆಗೆ ಕಾರಣ ಏನು?

ಗೂಗಲ್ ಆರ್ಥಿಕ ನಿಯಮಗಳ ಪ್ರಕಾರ ಪ್ಲೇ ಸ್ಟೋರ್ ನ ಆ್ಯಪ್ ಗಳ ಮೂಲಕ ಆಗುವ ಪೇಮೆಂಟ್ ಗಳಲ್ಲಿ ಇಂತಿಷ್ಟು ಪ್ರಮಾಣದ ಹಣವನ್ನು ಗೂಗಲ್ ಗೆ ಕಟ್ಟಬೇಕಾಗುತ್ತದೆ. ಈ ಹಣದ ವಿಚಾರವಾಗಿಯೇ ಉಂಟಾಗಿರುವ ಗೊಂದಲದಿಂದಾಗಿ ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಕೆಲ ಆ್ಯಪ್ ಗಳನ್ನು ತೆಗೆದುಹಾಕಿದೆ ಎಂದು ಹೇಳಲಾಗಿದೆ. ಈಗಾಗಲೇ ಭಾರತದ 10 ಕಂಪನಿಗಳ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕುವ ಪ್ರಕ್ರಿಯೆಗೆ ಗೂಗಲ್‌ ಚಾಲನೆ ನೀಡಿದೆ.

ಆ್ಯಪ್‌ಗಳ ಮೂಲಕ ಆಗುವ ಪೇಮೆಂಟ್‌ನಲ್ಲಿ ಶೇ.11ರಿಂದ ಶೇ.26ರಷ್ಟು ಹಣವನ್ನು ಗೂಗಲ್‌ಗೆ ಶುಲ್ಕವಾಗಿ ನೀಡಬೇಕು ಎಂಬ ನಿಯಮವಿದೆ. ಆದರೆ, ಇದನ್ನು ತಡೆಯಬೇಕು ಎಂಬ ದಿಸೆಯಲ್ಲಿ ಭಾರತದ ಸ್ಟಾರ್ಟಪ್‌ ಕಂಪನಿಗಳು ಪ್ರಯತ್ನಿಸುತ್ತಿವೆ. ಇನ್ನು ಸ್ಟಾರ್ಟಪ್‌ಗಳಿಗೆ ಯಾವುದೇ ವಿನಾಯಿತಿ ನೀಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಆದೇಶ ನೀಡಿದೆ.

ಮ್ಯಾಟ್ರಿಮೋನಿ ಸಂಸ್ಥೆ ಅಸಮಾಧಾನ

ಇನ್ನು ಗೂಗಲ್ ನಡೆಯನ್ನು ಮ್ಯಾಟ್ರಿಮೋನಿ ಸಂಸ್ಥೆ ವಿರೋಧಿಸಿದ್ದು, “ನಿಯಮಗಳ ಉಲ್ಲಂಘನೆಯಾಗಿದೆ ಎಂದು ಗೂಗಲ್‌ ಕಂಪನಿಯು ನೋಟಿಸ್‌ ನೀಡುತ್ತಿದೆ. ಮ್ಯಾಟ್ರಿಮೋನಿ ಸರಣಿಯ ಒಂದೊಂದೇ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ಡಿಲೀಟ್ ಮಾಡಲಾಗುತ್ತಿದೆ. ಭಾರತದ ಇಂಟರ್‌ನೆಟ್‌ ಕ್ಷೇತ್ರದಲ್ಲಿ ಇದೊಂದು ಕರಾಳ ದಿನ” ಎಂದು ಮ್ಯಾಟ್ರಿಮೋನಿ ಸಂಸ್ಥಾಪಕ ಮುರುಗವೇಲ್‌ ಜಾನಕಿರಾಮ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮ್ಯಾಟ್ರಿಮೋನಿ ಆ್ಯಪ್‌ಗಳಾದ ಭಾರತ್‌ ಮ್ಯಾಟ್ರಿಮೋನಿ, ಕ್ರಿಶ್ಚಿಯನ್‌ ಮ್ಯಾಟ್ರಿಮೋನಿ, ಮುಸ್ಲಿಂ ಮ್ಯಾಟ್ರಿಮೋನಿ ಹಾಗೂ ಜೋಡಿ ಆ್ಯಪ್‌ಗಳನ್ನು ಈಗಾಗಲೇ ಡಿಲೀಟ್‌ ಮಾಡಲಾಗಿದೆ. ಕನಿಷ್ಟ ಪಕ್ಷ ಗೂಗಲ್ ನಮಗೆ ಕಾನೂನು ಪರಿಹಾರಗಳನ್ನು ಪಡೆಯಲು ಅವಕಾಶವನ್ನು ನೀಡಿಲ್ಲ. ಈ ಬಗ್ಗೆ ಕಂಪನಿಯು ಗೂಗಲ್‌ನೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಜಾನಕಿರಾಮನ್ ಹೇಳಿದರು.

ಮ್ಯಾಟ್ರಿಮೋನಿ ಮಾತ್ರವಲ್ಲದೇ ಆನ್‌ಲೈನ್‌ ಮೂಲಕವೇ ಸಂಗಾತಿಗಳನ್ನು ಹುಡುಕುವ ಮತ್ತೊಂದು ಆ್ಯಪ್‌ ಆಗಿರುವ ಜೀವನ್‌ಸಾಥಿ ಆ್ಯಪ್‌ಅನ್ನು ಕೂಡ ಗೂಗಲ್ ಪ್ಲೇ ಸ್ಟೋರ್ ನಿಂದ ತೆರವುಗೊಳಿಸಲಾಗುತ್ತಿದ್ದು, ಇದಕ್ಕಾಗಿ ಇನ್ಫೋ ಎಡ್ಜ್‌ ಕಂಪನಿಗೂ ನೋಟಿಸ್‌ ನೀಡಿದೆ ಎಂದು ತಿಳಿದುಬಂದಿದೆ. ಆ್ಯಪ್‌ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದು ಹಾಕುತ್ತಲೇ ಮ್ಯಾಟ್ರಿಮೋನಿ ಹಾಗೂ ಇನ್ಫೋ ಎಡ್ಜ್‌ ಷೇರುಗಳ ಮೌಲ್ಯವೂ ಕುಸಿತ ಕಂಡಿದೆ. ಇದು ಎರಡೂ ಕಂಪನಿಗಳಿಗೆ ಹೆಚ್ಚಿನ ಆತಂಕ ತಂದೊಡ್ಡಿದೆ.

ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ Shaadi, Matrimony.com ಮತ್ತು Bharat Matrimony ಅನ್ನು ಶುಕ್ರವಾರ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಆಡಿಯೋ ಕಥೆ ಹೇಳುವ ಅಪ್ಲಿಕೇಶನ್ ಕುಕು ಎಫ್‌ಎಂ, ಆಲ್ಟ್ ಬಾಲಾಜಿಯ ಆಲ್ಟ್ ಮತ್ತು ಡೇಟಿಂಗ್ ಸೇವೆ ಕ್ವಾಕ್ ಕ್ವಾಕ್ ಆ್ಯಪ್ ಕೂಡ ಪ್ಲೇ ಸ್ಟೋರ್‌ನಿಂದ ಕಣ್ಮರೆಯಾಗಿದೆ ಎಂದು ಹೇಳಲಾಗಿದೆ.

SCROLL FOR NEXT