ಸಾಂದರ್ಭಿಕ ಚಿತ್ರ 
ವಾಣಿಜ್ಯ

ಇಂಧನ ದಕ್ಷತೆ ಸೂಚ್ಯಂಕದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ; ಯುಪಿ, ಮಹಾರಾಷ್ಟ್ರದಲ್ಲಿ ಗಮನಾರ್ಹ ಸುಧಾರಣೆ

ರಾಜ್ಯಗಳ ಇಂಧನ ದಕ್ಷತೆ ಸೂಚ್ಯಂಕ 2023 ರಲ್ಲಿ ಕರ್ನಾಟಕ ದೇಶದಲ್ಲಿಯೇ ಅಗ್ರ ಸ್ಥಾನದಲ್ಲಿದ್ದು, ಉನ್ನತ ಕಾರ್ಯಕ್ಷಮತೆಯ ರಾಜ್ಯವೆಂದು ಪಟ್ಟಿಮಾಡಲ್ಪಟ್ಟಿದೆ.

ನವದೆಹಲಿ: ರಾಜ್ಯಗಳ ಇಂಧನ ದಕ್ಷತೆ ಸೂಚ್ಯಂಕ 2023 ರಲ್ಲಿ ಕರ್ನಾಟಕ ದೇಶದಲ್ಲಿಯೇ ಅಗ್ರ ಸ್ಥಾನದಲ್ಲಿದ್ದು, ಉನ್ನತ ಕಾರ್ಯಕ್ಷಮತೆಯ ರಾಜ್ಯವೆಂದು ಪಟ್ಟಿಮಾಡಲ್ಪಟ್ಟಿದೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಸಹ ತಮ್ಮ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆ ಕಂಡಿವೆ ಎಂದು ಸೂಚ್ಯಂಕ ಹೇಳಿದೆ.

ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ(ಬಿಇಇ) ಆರಂಭಿಸಿದ ಸ್ಟೇಟ್ ಎನರ್ಜಿ ಎಫಿಷಿಯನ್ಸಿ ಇಂಡೆಕ್ಸ್(ಎಸ್‌ಇಇಐ), ಅಲೈಯನ್ಸ್ ಫಾರ್ ಎ ಎನರ್ಜಿ ಎಫಿಷಿಯಂಟ್ ಎಕಾನಮಿ(ಎಇಇಇ) ಸಹಯೋಗದೊಂದಿಗೆ ರಾಜ್ಯಗಳಲ್ಲಿ ಇಂಧನ ದಕ್ಷತೆ ಅನುಷ್ಠಾನದ ವಾರ್ಷಿಕ ಪ್ರಗತಿಯನ್ನು ಮೌಲ್ಯಮಾಪನ ಮಾಡುತ್ತದೆ. ಇತ್ತೀಚಿನ ಸೂಚ್ಯಂಕ ಶುಕ್ರವಾರ ಬಿಡುಗಡೆಯಾಗಿದೆ.

ಒಟ್ಟು 100 ಅಂಕಗಳಲ್ಲಿ 86.5 ಅಂಕಗಳೊಂದಿಗೆ ಕರ್ನಾಟಕ SEEI 2023 ರಲ್ಲಿ ಮೊದಲ ಸ್ಥಾನ ಪಡೆದಿದೆ. ಏಕೈಕ ಸಕ್ರಿಯ 'ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆ ನೀತಿ'ಯೊಂದಿಗೆ ರಾಜ್ಯವು ಕಟ್ಟಡಗಳು, ಕೈಗಾರಿಕೆಗಳು, ಕೃಷಿ ಕ್ಷೇತ್ರ, ಸಾರಿಗೆ, ಪುರಸಭೆ ಸೇವೆಗಳಲ್ಲಿ ಗಮನಾರ್ಹ ಕ್ರಮಗಳನ್ನು ಜಾರಿಗೆ ತಂದಿದೆ.

100 ರಲ್ಲಿ 83.25 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಆಂಧ್ರಪ್ರದೇಶ, ನೀತಿ ನಿರೂಪಣೆ, ಹಣಕಾಸು ಪ್ರೋತ್ಸಾಹ, ಸಾಮರ್ಥ್ಯ-ವರ್ಧನೆ ಮತ್ತು ವಿವಿಧ ವಲಯಗಳಲ್ಲಿ ಸಹಯೋಗದ ಉಪಕ್ರಮಗಳನ್ನು ಒಳಗೊಂಡಂತೆ ಇಂಧನ ದಕ್ಷತೆಗೆ ಬಹುಮುಖಿ ವಿಧಾನವನ್ನು ಅಳವಡಿಸಿಕೊಂಡಿದೆ.

SEEI 2021-22 ಕ್ಕೆ ಹೋಲಿಸಿದರೆ ಈ ಬಾರಿ 15 ರಾಜ್ಯಗಳು ತಮ್ಮ ಸ್ಕೋರ್‌ಗಳನ್ನು ಸುಧಾರಿಸಿಕೊಂಡಿವೆ. ಗಮನಾರ್ಹವಾಗಿ, ನಾಲ್ಕು ರಾಜ್ಯಗಳು -- ಉತ್ತರ ಪ್ರದೇಶ, ಗೋವಾ, ಮಹಾರಾಷ್ಟ್ರ ಮತ್ತು ಹರಿಯಾಣ ಹೆಚ್ಚು ಪ್ರಗತಿಯನ್ನು ತೋರಿಸಿವೆ. SEEI 2021-22 ಕ್ಕೆ ಹೋಲಿಸಿದರೆ 10 ಅಂಕಗಳಿಗಿಂತ ಹೆಚ್ಚು ಸುಧಾರಿಸಿವೆ. ಈ ಮೌಲ್ಯಮಾಪನದಲ್ಲಿ ಹೆಚ್ಚು ಸುಧಾರಿತ ರಾಜ್ಯಗಳೆಂದರೆ ಮಹಾರಾಷ್ಟ್ರ ಮತ್ತು ಹರಿಯಾಣ, ಕ್ರಮವಾಗಿ 18.5 ಮತ್ತು 17 ಅಂಕಗಳ ಗಮನಾರ್ಹ ಸ್ಕೋರ್ ಹೆಚ್ಚಳಕ್ಕೆ ಸಾಕ್ಷಿಯಾಗಿವೆ. ಪರಿಣಾಮವಾಗಿ ಒಟ್ಟಾರೆ 72 ಅಂಕಗಳನ್ನು ಪಡೆದಿವೆ.

SEEI ರಾಜ್ಯ ಮಟ್ಟದ ಇಂಧನ ದಕ್ಷತೆಯ ನೀತಿಗಳು, ಕಾರ್ಯಕ್ರಮಗಳು ಮತ್ತು ಹೂಡಿಕೆಗಳಿಗೆ ಸಂಬಂಧಿಸಿದ ಅಂತರವನ್ನು ಗುರುತಿಸುತ್ತದೆ ಮತ್ತು ಪರಿಹರಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT