ಭಾರತೀಯ ಷೇರುಮಾರುಕಟ್ಟೆ 
ವಾಣಿಜ್ಯ

Indian Stock Market: ಸತತ 5 ದಿನಗಳ ಕುಸಿತ ಕೊನೆಗೂ ಅಂತ್ಯ; ಸೆನ್ಸೆಕ್ಸ್ 602.75 ಅಂಕ ಏರಿಕೆ

ಕಳೆದ ವಾರವಿಡೀ ಕುಸಿತದಲ್ಲೇ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಸೆನ್ಸೆಕ್ಸ್ 602.75 ಅಂಕಗಳ ಏರಿಕೆಯೊಂದಿಗೆ 80,005.04 ಅಂಕಗಳಿಗೆ ಏರಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಮುಂಬೈ: ಸತತ ಕುಸಿತದ ಹಾದಿಯಲ್ಲಿದ್ದ ಭಾರತೀಯ ಷೇರುಮಾರುಕಟ್ಟೆ ಸತತ 5 ದಿನಗಳ ಕುಸಿತ ಬಳಿಕ ಇಂದು ಅಂದರೆ ವಾರದ ಮೊದಲ ದಿನವೇ ಭರ್ಜರಿ ಚೇತರಿಕೆ ಕಂಡಿದೆ.

ಹೌದು.. ಕಳೆದ ವಾರವಿಡೀ ಕುಸಿತದಲ್ಲೇ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಸೆನ್ಸೆಕ್ಸ್ 602.75 ಅಂಕಗಳ ಏರಿಕೆಯೊಂದಿಗೆ 80,005.04 ಅಂಕಗಳಿಗೆ ಏರಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಅಂತೆಯೇ ನಿಫ್ಟಿ ಕೂಡ 158.35 ಅಂಕಗಳ ಏರಿಕೆಯೊಂದಿಗೆ 24,339.15 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇಂದು ಭಾರತೀಯ ಷೇರುಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಶೇ.0.76ರಷ್ಟು ಏರಿಕೆಯಾಗಿದ್ದು, ನಿಫ್ಟಿ ಸೂಚ್ಯಂಕ ಕೂಡ ಶೇ.0.65ರಷ್ಟು ಏರಿಕೆ ಕಂಡಿದೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿಮಾಡಲಾದ ಸಂಸ್ಥೆಗಳ ಪೈಕಿ ICICI ಬ್ಯಾಂಕ್, ಅದಾನಿ ಪೋರ್ಟ್ಸ್, JSW ಸ್ಟೀಲ್, ಟಾಟಾ ಸ್ಟೀಲ್, M&M, ಸನ್ ಫಾರ್ಮಾ ಸಂಸ್ಥೆಗಳು ಲಾಭಾಂಶ ಕಂಡಿದ್ದು, ಅಂತೆಯೇ ಆಕ್ಸಿಸ್ ಬ್ಯಾಂಕ್, ಕೊಟಕ್ ಬ್ಯಾಂಕ್, ಟೆಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ ಮತ್ತು ಏರ್‌ಟೆಲ್ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T-20 WORLD CUP 2026: ಇಶಾನ್ ಕಿಶಾನ್ ಅಬ್ಬರ, 'ಸ್ಪಿನ್ ಮೋಡಿಗೆ ಪಾಕ್ ತತ್ತರ, 61 ರನ್ ಅಂತರದಿಂದ ಗೆದ್ದು ಬೀಗಿದ ಭಾರತ!

RSS ದೆವ್ವವಿದ್ದಂತೆ, ಬಿಜೆಪಿ ದೆವ್ವದ ನೆರಳು: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರೆಹಮಾನ್ ಪದಗ್ರಹಣ ಕಾರ್ಯಕ್ರಮ ಆಹ್ವಾನಕ್ಕೆ ಭಾರತದ ಒಪ್ಪಿಗೆ; ಬಾಂಗ್ಲಾಗೆ ತೆರಳಲಿರುವ ಭಾರತದ ಪ್ರತಿನಿಧಿ ಯಾರು?

T20 World Cup: ಇಶಾನ್ ಕಿಶನ್ ವೇಗದ ಅರ್ಧ ಶತಕ; ಪಾಕ್‌ಗೆ 176 ರನ್ ಟಾರ್ಗೆಟ್ ಫಿಕ್ಸ್ ಮಾಡಿದ ಭಾರತ!

T20 World Cup 2026: 27 ಬಾಲ್ ಗಳಲ್ಲಿ ಅರ್ಧಶತಕ ಹೊಡೆದು, ಭಾರತದ ಸ್ಕೋರ್ ಹೆಚ್ಚಿಸಿದ ಇಶಾನ್ ಕಿಶಾನ್!

SCROLL FOR NEXT