ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್‌ಟಿ ಕೌನ್ಸಿಲ್‌ನ 54 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು.  
ವಾಣಿಜ್ಯ

ಕ್ಯಾನ್ಸರ್ ಔಷಧಿಗಳ ಮೇಲಿನ ತೆರಿಗೆ ಶೇ.5ಕ್ಕೆ ಇಳಿಕೆ: ಆರೋಗ್ಯ ಮತ್ತು ಜೀವ ವಿಮಾ ಕಂತುಗಳ ಕಡಿತಕ್ಕೆ GST Council ಸಭೆಯಲ್ಲಿ ನಿರ್ಧಾರ

ಈ ವಿಷಯದ ಕುರಿತು ಚರ್ಚಿಸಲು ಸಚಿವರ ಗುಂಪನ್ನು (GOM) ರಚಿಸಲು ನಿನ್ನೆ ಸಭೆಯಲ್ಲಿ ನಿರ್ಧರಿಸಲಾಯಿತು. ಸಮಿತಿಯು ಈ ವರ್ಷದ ಅಕ್ಟೋಬರ್ ಅಂತ್ಯದೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ. ನವೆಂಬರ್‌ನಲ್ಲಿ ನಡೆಯಲಿರುವ ತನ್ನ ಮುಂಬರುವ ಸಭೆಯಲ್ಲಿ ಕೌನ್ಸಿಲ್ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಮುಂಬೈ: ಆರೋಗ್ಯ ಮತ್ತು ಜೀವ ವಿಮೆ ಪ್ರೀಮಿಯಂಗಳ ಮೇಲೆ ಶೇಕಡಾ 18ರಷ್ಟು ಜಿಎಸ್ ಟಿ ಮೇಲೆ ಹೆಚ್ಚಿನ ಬೇಡಿಕೆ ಹಾಗೂ ಚರ್ಚೆ ನಂತರ, ಜಿಎಸ್‌ಟಿ ಕೌನ್ಸಿಲ್ ನ ನಿನ್ನೆಯ 54 ನೇ ಸಭೆಯಲ್ಲಿ ತೆರಿಗೆಗಳನ್ನು ಕಡಿಮೆ ಮಾಡುವ ಕುರಿತು ಒಮ್ಮತಕ್ಕೆ ಬಂದಿದೆ.

ಈ ವಿಷಯದ ಕುರಿತು ಚರ್ಚಿಸಲು ಸಚಿವರ ಗುಂಪನ್ನು (GoM) ರಚಿಸಲು ನಿನ್ನೆ ಸಭೆಯಲ್ಲಿ ನಿರ್ಧರಿಸಲಾಯಿತು. ಸಮಿತಿಯು ಈ ವರ್ಷದ ಅಕ್ಟೋಬರ್ ಅಂತ್ಯದೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ. ನವೆಂಬರ್‌ನಲ್ಲಿ ನಡೆಯಲಿರುವ ತನ್ನ ಮುಂಬರುವ ಸಭೆಯಲ್ಲಿ ಕೌನ್ಸಿಲ್ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಜಿಎಸ್‌ಟಿ ಕೌನ್ಸಿಲ್ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತು. ದರ ತರ್ಕಬದ್ಧಗೊಳಿಸುವಿಕೆ, ರಿಯಲ್ ಎಸ್ಟೇಟ್ ಮತ್ತು ಆನ್‌ಲೈನ್ ಗೇಮಿಂಗ್ ಕುರಿತು ಸಚಿವರ ಗುಂಪು ಸಲ್ಲಿಸಿದ ಮೂರು ಸ್ಥಿತಿ ವರದಿಗಳನ್ನು ಪರಿಶೀಲಿಸಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಮತ್ತು ಜೀವ ವಿಮೆ ಕಂತುಗಳ ಮೇಲಿನ ದರ ಕಡಿತವನ್ನು ಅಧ್ಯಯನ ಮಾಡಲು ದರ ತರ್ಕಬದ್ಧಗೊಳಿಸುವಿಕೆಯ ಕುರಿತು ಅಸ್ತಿತ್ವದಲ್ಲಿರುವ ಸದಸ್ಯರೊಂದಿಗೆ ಹೊಸ ಸಚಿವರ ಗುಂಪಿನ ರಚನೆಯನ್ನು ಘೋಷಿಸಿದರು. ಪರಿಹಾರ ಸೆಸ್‌ನ ಭವಿಷ್ಯವನ್ನು ಅಧ್ಯಯನ ಮಾಡಲು ಜಿಒಎಂ ರಚನೆಗೆ ಕೌನ್ಸಿಲ್ ಶಿಫಾರಸು ಮಾಡಿದೆ.

ಜನವರಿ 2026 ರ ವೇಳೆಗೆ, ಜಿಎಸ್‌ಟಿ ಪರಿಹಾರಕ್ಕೆ ಸಂಬಂಧಿಸಿದ ರಾಜ್ಯಗಳಿಗೆ ಸಾಲದ ಬಾಕಿ ಪಾವತಿಗಳನ್ನು ಕೇಂದ್ರವು ತೆರವುಗೊಳಿಸುವ ನಿರೀಕ್ಷೆಯಿದೆ, ಒಟ್ಟು ಸೆಸ್ ಸಂಗ್ರಹವು 8.66 ಲಕ್ಷ ಕೋಟಿಗೆ ತಲುಪುತ್ತದೆ. ಮರುಪಾವತಿಯ ನಂತರ 40,000 ಕೋಟಿ ರೂಪಾಯಿ ಅಂದಾಜು ಹೆಚ್ಚುವರಿಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಈ ಹೆಚ್ಚುವರಿ ಹಣವನ್ನು ಬಳಸಿಕೊಳ್ಳುವ ಕುರಿತು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಸೆಸ್ ಸಂಗ್ರಹವನ್ನು ಮಾರ್ಚ್ 2026 ರವರೆಗೆ ವಿಸ್ತರಿಸಲಾಗಿದೆ, ಅದರ ಮುಂದುವರಿಕೆಯನ್ನು ಪರಿಶೀಲಿಸಬೇಕು ಮತ್ತು ಸಾಲಗಳನ್ನು ಮೊದಲೇ ಮರುಪಾವತಿಸಿದರೆ, ಸೆಸ್ ಸಂಗ್ರಹವು ಕಾನೂನು ಮಿತಿಗಳನ್ನು ಮೀರುವಂತಿಲ್ಲ ಎಂದರು.

ದೆಹಲಿಯ ಐಐಟಿಯಂತಹ ಸಂಸ್ಥೆಯು ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದಿಂದ (DGGI) 120 ಕೋಟಿ ರಾಪಾಯಿಗೆ ಶೋಕಾಸ್ ನೋಟಿಸ್ ಸ್ವೀಕರಿಸಿದ್ದನ್ನು ಸ್ಮರಿಸಬಹುದು.

ಜಿಎಸ್ ಟಿ ಕೌನ್ಸಿಲ್ ಕ್ಯಾನ್ಸರ್ ಔಷಧಿಗಳಾದ ಟ್ರಾಸ್ಟುಜುಮಾಬ್ ಡೆರಕ್ಸ್ಟೆಕನ್, ಒಸಿಮರ್ಟಿನಿಬ್ ಮತ್ತು ದುರ್ವಾಲುಮಾಬ್ ಮೇಲಿನ ಜಿಎಸ್ ಟಿ ದರಗಳನ್ನು ಶೇಕಡಾ 12ರಿಂದ ಶೇಕಡಾ 5ಕ್ಕೆ ಇಳಿಸಲಾಯಿತು, ಹೆಲಿಕಾಪ್ಟರ್‌ಗಳ ಮೂಲಕ ಪ್ರಯಾಣಿಕರ ಟಿಕೆಟ್ ವೆಚ್ಚ ಶೇಕಡಾ 5 ಮತ್ತು ಹೆಲಿಕಾಪ್ಟರ್‌ಗಳ ಚಾರ್ಟರ್‌ನಲ್ಲಿ ಶೇಕಡಾ 18 ಜಿಎಸ್‌ಟಿ ಇರಬೇಕೆಂದು ಕೌನ್ಸಿಲ್ ನಿರ್ಧರಿಸಿದೆ.

ಕಾರ್ ಸೀಟುಗಳ ಮೇಲಿನ ಜಿಎಸ್ಟಿ ದರವನ್ನು ಶೇಕಡಾ 18ರಿಂದ ಶೇಕಡಾ 28ಕ್ಕೆ ಹೆಚ್ಚಿಸಲಾಗಿದೆ. ಶೇಕಡಾ 28ರ ಏಕರೂಪದ ದರವು ಮೋಟಾರು ಕಾರುಗಳ ಕಾರ್ ಸೀಟ್‌ಗಳಿಗೆ ನಿರೀಕ್ಷಿತವಾಗಿ ಅನ್ವಯಿಸುತ್ತದೆ, ಇದು ಈಗಾಗಲೇ ಶೇಕಡಾ 28ರ ಜಿಎಸ್‌ಟಿ ದರವನ್ನು ಆಕರ್ಷಿಸುವ ಮೋಟಾರ್‌ಸೈಕಲ್‌ಗಳ ಸೀಟುಗಳೊಂದಿಗೆ ಸಮಾನತೆಯನ್ನು ತರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT