ಕೆಎಲ್ ರಾಹುಲ್, ಸುನೀಲ್ ಶೆಟ್ಟಿ 
ವಾಣಿಜ್ಯ

ಮುಂಬೈ ಬಳಿ 7 ಎಕರೆ ಭೂಮಿ ಖರೀದಿಸಿದ ಅಳಿಯ, ಮಾವ! ಜಮೀನಿನ ಬೆಲೆ ಎಷ್ಟು ಗೊತ್ತಾ?

ಸಂಬಂಧದಲ್ಲಿ ಅಳಿಯ ಹಾಗೂ ಮಾವನಾಗಿರುವ ಕೆಎಲ್ ರಾಹುಲ್ ಹಾಗೂ ಸುನೀಲ್ ಶೆಟ್ಟಿ ರೂ. 9.85 ಕೋಟಿಗೆ ಜಮೀನು ಖರೀದಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಸಂಸ್ಥೆ ಸ್ಕ್ವೇರ್ ಯಾರ್ಡ್ಸ್ ತಿಳಿಸಿದೆ.

ಮುಂಬೈ: ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಜಂಟಿಯಾಗಿ ವಾಣಿಜ್ಯ ನಗರಿ ಮುಂಬೈ ಬಳಿ 7 ಎಕರೆ ಜಮೀನು ಖರೀದಿಸಿದ್ದಾರೆ.

ಸಂಬಂಧದಲ್ಲಿ ಅಳಿಯ ಹಾಗೂ ಮಾವನಾಗಿರುವ ಕೆಎಲ್ ರಾಹುಲ್ ಹಾಗೂ ಸುನೀಲ್ ಶೆಟ್ಟಿ ರೂ. 9.85 ಕೋಟಿಗೆ ಜಮೀನು ಖರೀದಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಸ್ಕ್ವೇರ್ ಯಾರ್ಡ್ಸ್ ತಿಳಿಸಿದೆ.

ಥಾಣೆ ಪಶ್ಚಿಮದ ಓವಾಲೆಯಲ್ಲಿರುವ ಒಟ್ಟು 30 ಎಕರೆ 17 ಗುಂಟೆ ಜಮೀನಿನಲ್ಲಿ 7 ಎಕರೆ ಅವಿಭಜಿತ ಭೂಮಿಯನ್ನು ರೂ. 9.85 ಕೋಟಿಗೆ ಖರೀದಿಸಿದ್ದಾರೆ.

ಆಸ್ತಿ ನೋಂದಣಿ ದಾಖಲೆಗಳನ್ನು ಪರಿಶೀಲಿಸಿರುವುದಾಗಿ ಸ್ಕ್ವೇರ್ ಯಾರ್ಡ್ಸ್ ಹೇಳಿದೆ. ವಹಿವಾಟನ್ನು ಮಾರ್ಚ್ 2025 ರಲ್ಲಿ ನೋಂದಾಯಿಸಲಾಗಿದ್ದು, ಏಳು ಎಕರೆ (28,327.95 ಚದರ ಮೀಟರ್) ವ್ಯವಹಾರ ಒಳಗೊಂಡಿದೆ.

ರೂ. 68.96 ಲಕ್ಷ ಮುದ್ರಾಂಕ ಶುಲ್ಕ ಮತ್ತು 30,000 ರೂ. ನೋಂದಾಣಿ ಶುಲ್ಕ ಪಾವತಿ ಮೂಲಕ ವಹಿವಾಟು ನಡೆದಿದೆ ಎಂದು ಸ್ಕ್ವೇರ್ ಯಾರ್ಡ್ಸ್ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್