Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ನಮಿತ್ ಮಲ್ಹೋತ್ರಾ ನಿರ್ಮಿಸಿದ ರಾಮಾಯಣವನ್ನು ನಿತೇಶ್ ತಿವಾರಿ ಅವರು ನಿರ್ದೇಶಿಸಿದ್ದಾರೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರವಿ ದುಬೆ ಲಕ್ಷ್ಮಣನಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಭಿನಯಿಸಿದ್ದಾರೆ.
Ramayana Part One gets a release date
ರಾಮಾಯಣ ಪೋಸ್ಟರ್
Updated on: 

ನಿತೇಶ್ ತಿವಾರಿ ನಿರ್ದೇಶನದ ಈ ವರ್ಷದ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ರಾಮಾಯಣ ಭಾಗ ಒಂದು ನವೆಂಬರ್ 5 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ.

ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಒಂದೇ ದಿನ ರಾಮಾಯಣ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಜಾಗತಿಕ ವಿತರಕರಾದ ಸೋನಿ ಪಿಕ್ಚರ್ಸ್ ಜರ್ಮನಿ, ನವೆಂಬರ್ 5 ರಂದು ಬಿಡುಗಡೆಯಾಗಲಿದೆ ಎಂದು ಹೇಳಿದೆ.

ಇದರೊಂದಿಗೆ 'ರಾಮಾಯಣ' ಸಿನಿಮಾ ನವೆಂಬರ್ 8 ರಂದು ದೀಪಾವಳಿಗೂ ಮೂರು ದಿನಗಳ ಮೊದಲು ಬಿಡುಗಡೆಯಾಗಲಿದೆ.

Ramayana Part One gets a release date
'ರಾಮನಾಗಿ ರಣಬೀರ್ ಕಪೂರ್‌ರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ; ಸೀತೆಯಾಗಿ ಸಾಯಿಪಲ್ಲವಿ, ರಾವಣನಾಗಿ ಯಶ್ ಅದ್ಭುತ'

ಆದಾಗ್ಯೂ, ಸಿನಿಮಾ ನಿರ್ಮಾಪಕರು ಇನ್ನೂ ಅಧಿಕೃತವಾಗಿ 'ರಾಮಾಯಣ' ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ.

ನಮಿತ್ ಮಲ್ಹೋತ್ರಾ ನಿರ್ಮಿಸಿದ ರಾಮಾಯಣವನ್ನು ನಿತೇಶ್ ತಿವಾರಿ ಅವರು ನಿರ್ದೇಶಿಸಿದ್ದಾರೆ. ರಣಬೀರ್ ಕಪೂರ್, ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರವಿ ದುಬೆ ಲಕ್ಷ್ಮಣನಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಭಿನಯಿಸಿದ್ದಾರೆ.

ಚಿತ್ರದ ಎರಡನೇ ಭಾಗವು 2027 ರ ದೀಪಾವಳಿಯಲ್ಲಿ ಬಿಡುಗಡೆಯಾಗಲಿದೆ.

ಚಿತ್ರದ ಪ್ರಮುಖ ಪಾತ್ರಗಳ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ‘ರಾಮಾಯಣ’ ತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಸಿನಿಮಾ ಬಿಡುಗಡೆಯಾಗಲು ಇನ್ನೂ ಸಮಯವಿದ್ದರೂ, ಈಗಿನಿಂದಲೇ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಪ್ರಚಾರ ನಡೆಸಲು ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com