ಚೆನ್ನೈ: ಅಮೆರಿಕ ಇತ್ತೀಚೆಗೆ ವಿಧಿಸಲಾದ ಸುಂಕಗಳಿಂದ ಚಿನ್ನದ ಗಟ್ಟಿ (GOLD BAR)ಆಮದುಗಳಿಗೆ ವಿನಾಯಿತಿ ನೀಡುವ ನಿರೀಕ್ಷೆಯಿದೆ. ಬುಲಿಯನ್ ಮಾರುಕಟ್ಟೆಯಲ್ಲಿನ ಏರಿಳಿತ ಇದಕ್ಕೆ ಕಾರಣ ಎನ್ನಲಾಗಿದೆ.
ಜುಲೈ 31, 2025 ರಂದು ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಹೊರಡಿಸಿದ ಆದೇಶವೊಂದರಲ್ಲಿ ಒಂದು ಕಿಲೋ ಮತ್ತು 00-ಔನ್ಸ್ ಚಿನ್ನದ ಬಾರ್ ಗಳನ್ನು ಸುಂಕದ ವರ್ಗದ ಅಡಿಯಲ್ಲಿ ಮರುವರ್ಗೀಕರಿಸಲಾಗಿದೆ ಮತ್ತು ಅವುಗಳನ್ನು ಶೇ. 39 ರಷ್ಟು ಪರಸ್ಪರ ಸುಂಕಕ್ಕೆ ಒಳಪಡಿಸಲಾಗಿದೆ.
ಇದು ಅಂತಹ ಚಿನ್ನಕ್ಕೆ ವಿನಾಯಿತಿ ಸಿಗಲಿದೆ ಎಂಬ ಧೀರ್ಘಾ ಕಾಲದ ಊಹೆಯನ್ನು ಸುಳ್ಳು ಮಾಡಿದೆ. CBP ನಿರ್ಧಾರ ಜಾಗತಿಕ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಸಾಗಾಟಕ್ಕೆ ಅಡ್ಡಿಯನ್ನುಂಟು ಮಾಡಿದೆ. ಈ ಬಾರ್ ಗಳ ಪ್ರಮುಖ ಪೂರೈಕೆದಾರರಾದ ಸ್ವಿಸ್ ರಿಫೈನರ್ ಗಳು ಅಮೆರಿಕಕ್ಕೆ ಚಿನ್ನ ಸಾಗಾಣಿಕೆಯನ್ನು ರದ್ದುಗೊಳಿಸಿದ್ದಾರೆ.
ಇದರಿಂದಾಗಿ ಪ್ರತಿ ಔನ್ಸ್ ಚಿನ್ನದ ಬೆಲೆಯು ಸುಮಾರು 3.534 ಡಾಲರ್ ಗೆ ತಲುಪಿದೆ ಎಂದು ವರದಿಗಳು ಹೇಳಿವೆ.
ಮುಂಬರುವ ಆದೇಶದಲ್ಲಿ CBP ಆದೇಶ "ತಪ್ಪು ಮಾಹಿತಿ" ಎಂದು ಹೊರಡಿಸಲಿದ್ದು, ಚಿನ್ನದ ಬಾರ್ ಆಮದು ಸುಂಕದಿಂದ ವಿನಾಯಿತಿ ಪಡೆಯುವುದು ಖಚಿತ ಎಂದು ಶ್ವೇತ ಭವನದ ಅಧಿಕಾರಿಗಳು ಹೇಳಿದ್ದಾರೆ. ಈ ಕ್ರಮವು ಮಾರುಕಟ್ಟೆಯಲ್ಲಿ ವಿಶ್ವಾಸವನ್ನು ಮರುಸ್ಥಾಪಿಸುವ ನಿರೀಕ್ಷೆಯಿದೆ.
ದಿಢೀರ್ ಸುಂಕಗಳ ಏರಿಕೆ ನ್ಯೂಯಾರ್ಕ್ ಮತ್ತು ಲಂಡನ್‌ನಲ್ಲಿನ ಬುಲಿಯನ್ ವ್ಯಾಪಾರ ಕೇಂದ್ರಗಳ ಮೇಲೆ ತೀವ್ರ ಅಡ್ಡಿಯನ್ನುಂಟು ಮಾಡಬಹುದು. ಅಮೆರಿಕದ ಭವಿಷ್ಯದ ಮಾರುಕಟ್ಟೆಯ ರಚನೆಯನ್ನು ದುರ್ಬಲಗೊಳಿಸಬಹುದು ಎಂದು ಉದ್ಯಮದ ಪ್ರಮುಖರು ಎಚ್ಚರಿಸಿದ್ದಾರೆ. ಈ ಸಂಬಂಧ ಕಾರ್ಯಕಾರಿ ಆದೇಶ ಶೀಘ್ರದಲ್ಲಿಯೇ ಹೊರಬೀಳುವ ಸಾಧ್ಯತೆಯಿದೆ.