ಸಾಂದರ್ಭಿಕ ಚಿತ್ರ  
ವಾಣಿಜ್ಯ

ಹಬ್ಬಗಳ ನಂತರ ಕಾರು, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆ: GST ಕಡಿತ ಕಾರಣ

ಆರಂಭಿಕ ಅಂದಾಜಿನ ಪ್ರಕಾರ, ನವೆಂಬರ್ ತಿಂಗಳಲ್ಲಿ ಒಟ್ಟು ಪ್ರಯಾಣಿಕ ವಾಹನ ಮಾರಾಟವು 420,000-425,000 ಯುನಿಟ್‌ಗಳಾಗಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ 3,50,000 ಯುನಿಟ್‌ಗಳಷ್ಟಿತ್ತು.

ನವೆಂಬರ್‌ನಲ್ಲಿ ಪ್ರಮುಖ ಕಾರು ತಯಾರಕ ಮತ್ತು ದ್ವಿಚಕ್ರ ವಾಹನ ತಯಾರಕ ಕಂಪೆನಿಗಳು ತಮ್ಮ ಮಾರಾಟದಲ್ಲಿ ಪ್ರಗತಿ ಕಂಡಿವೆ. ಇದು ಸೆಪ್ಟೆಂಬರ್ 22 ರಿಂದ ಶೇಕಡಾ 10ರಷ್ಟು ಜಿಎಸ್ ಟಿ ದರ ಕಡಿತದಿಂದಾಗಿ ಹಬ್ಬದ ನಂತರ ಮಾರಾಟದ ವೇಗ ಮುಂದುವರಿದಿದೆ.

ಆರಂಭಿಕ ಅಂದಾಜಿನ ಪ್ರಕಾರ, ನವೆಂಬರ್ ತಿಂಗಳಲ್ಲಿ ಒಟ್ಟು ಪ್ರಯಾಣಿಕ ವಾಹನ ಮಾರಾಟವು 420,000-425,000 ಯುನಿಟ್‌ಗಳಾಗಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ 3,50,000 ಯುನಿಟ್‌ಗಳಷ್ಟಿತ್ತು.

ಭಾರತದ ಅತಿದೊಡ್ಡ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ (MSIL) ನವೆಂಬರ್ ತಿಂಗಳಲ್ಲಿ ಇದುವರೆಗಿನ ಅತ್ಯಧಿಕ ಮಾಸಿಕ ಮಾರಾಟವನ್ನು 229,021 ಯುನಿಟ್‌ ಕಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ, ಡೀಲರ್‌ಗಳಿಗೆ 170,971 ಯುನಿಟ್‌ ವಾಹನ ರವಾನೆಯಾಗಿದ್ದು, ಹಿಂದಿನ ವರ್ಷದ 141,312 ಯುನಿಟ್‌ಗಳಿಗೆ ಹೋಲಿಸಿದರೆ ಇದು 21% ಹೆಚ್ಚಳವಾಗಿದೆ.

ಎಂಎಸ್ ಐಎಲ್ ನ ಮಾರ್ಕೆಟಿಂಗ್ ಮತ್ತು ಮಾರಾಟದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ, ನವೆಂಬರ್‌ನಲ್ಲಿ ಚಿಲ್ಲರೆ ಬೆಳವಣಿಗೆ ಕೂಡ ಸಾಕಷ್ಟು ಪ್ರಗತಿ ಕಂಡುಬಂದಿದೆ. ವರ್ಷದಿಂದ ವರ್ಷಕ್ಕೆ ಶೇ. 31 ರಷ್ಟು ಹೆಚ್ಚಾಗಿದೆ. ನವೆಂಬರ್‌ನಲ್ಲಿ ತನ್ನ ಸಣ್ಣ ಕಾರುಗಳ ಪೋರ್ಟ್‌ಫೋಲಿಯೊ - ಎಸ್ ಪ್ರೆಸ್ಸೊ, ಆಲ್ಟೊ ಕೆ 10, ಸೆಲೆರಿಯೊ, ವ್ಯಾಗನ್‌ಆರ್ - ಚಿಲ್ಲರೆ ಮಾರಾಟವು ಶೇ. 37 ರಷ್ಟು ಹೆಚ್ಚಳ ಕಂಡಿದೆ ಎಂದರು.

ಪ್ರಸ್ತುತ, ಎಂಟು ಮಾದರಿಗಳಿಗೆ ಕಾರ್ಖಾನೆಯಲ್ಲಿ ಯಾವುದೇ ಸಂಗ್ರಹವಿಲ್ಲ. ಬಾಕಿ ಇರುವ ಬುಕಿಂಗ್‌ಗಳು ಸುಮಾರು 1.5 ಲಕ್ಷ ಯೂನಿಟ್‌ಗಳಲ್ಲಿವೆ ಎಂದು ಹೇಳಿದರು. ಬೇಡಿಕೆ ಬಲವಾಗಿ ಉಳಿಯುವ ನಿರೀಕ್ಷೆಯೊಂದಿಗೆ, ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಉದ್ಯಮವು ಶೇ. 5-6 ರಷ್ಟು ಬೆಳವಣಿಗೆಯನ್ನು ದಾಖಲೆ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಹುಂಡೈ (HMIL) ನವೆಂಬರ್‌ನಲ್ಲಿ ಒಟ್ಟು 66,840 ಯುನಿಟ್‌ಗಳ ಮಾಸಿಕ ಮಾರಾಟವನ್ನು ಸಾಧಿಸಿದೆ. ಇದು ವರ್ಷದಿಂದ ವರ್ಷಕ್ಕೆ 9.1% ಹೆಚ್ಚಾಗಿದೆ. ಕಂಪನಿಯ ದೇಶೀಯ ಮಾರಾಟವು ಶೇ. 4.35 ರಷ್ಟು ಏರಿಕೆಯಾಗಿ 50,340 ಯುನಿಟ್‌ಗಳಿಗೆ ತಲುಪಿದೆ. ಎಚ್‌ಎಂಐಎಲ್‌ನ ಪೂರ್ಣಾವಧಿ ನಿರ್ದೇಶಕ ಮತ್ತು ಮುಖ್ಯ ಕಾರ್ಯಾಚರಣಾ ಅಧಿಕಾರಿ ತರುಣ್ ಗರ್ಗ್, ಜಿಎಸ್‌ಟಿ 2.0 ಸುಧಾರಣೆಯಾಗಿದೆ. ನವೆಂಬರ್ ತಿಂಗಳಲ್ಲಿ ನಮ್ಮ ಮಾಸಿಕ ದೇಶೀಯ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯೊಂದಿಗೆ ನಾವು ಮಾರಾಟದ ಆವೇಗವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

ನವೆಂಬರ್‌ನಲ್ಲಿ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ನ ದೇಶೀಯ ಮಾರಾಟವು 57,436 ಯುನಿಟ್‌ಗಳಾಗಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ 47,063 ಯುನಿಟ್‌ಗಳಾಗಿದ್ದವು. ಎಸ್‌ಯುವಿ ಪ್ರಮುಖ ಮಹೀಂದ್ರಾ ಮತ್ತು ಮಹೀಂದ್ರಾ ದೇಶೀಯ ಮಾರುಕಟ್ಟೆಯಲ್ಲಿ 56,336 ವಾಹನಗಳನ್ನು ಮಾರಾಟ ಮಾಡಿದ್ದು, 22% ಬೆಳವಣಿಗೆ ಕಂಡಿದೆ. ಕಿಯಾ ಮತ್ತು ಟೊಯೋಟಾ ನವೆಂಬರ್‌ನಲ್ಲಿ ಕ್ರಮವಾಗಿ 24% ಮತ್ತು 28% ಬೆಳವಣಿಗೆ ದಾಖಲಿಸಿವೆ.

ದ್ವಿಚಕ್ರ ವಾಹನ ಕ್ಷೇತ್ರದಲ್ಲಿ, ಟಿವಿಎಸ್ ಮೋಟಾರ್ , ನವೆಂಬರ್‌ನಲ್ಲಿ ಒಟ್ಟು ದ್ವಿಚಕ್ರ ವಾಹನ ಮಾರಾಟವು ವರ್ಷಕ್ಕೆ ಹೋಲಿಸಿದರೆ 27% ರಷ್ಟು ಬೆಳವಣಿಗೆ ಕಂಡು 497,841 ಯುನಿಟ್‌ಗಳಿಗೆ ತಲುಪಿದೆ. ನವೆಂಬರ್‌ನಲ್ಲಿ ದೇಶೀಯ ದ್ವಿಚಕ್ರ ವಾಹನ ಮಾರಾಟವು 365,608 ಯುನಿಟ್‌ಗಳಿಗೆ ತಲುಪಿದೆ.

ಹೀರೋ ಮೋಟೋಕಾರ್ಪ್ ನವೆಂಬರ್‌ನಲ್ಲಿ 6,04,490 ಯುನಿಟ್‌ಗಳನ್ನು ರವಾನಿಸಿದ್ದು, ವರ್ಷಕ್ಕೆ ಹೋಲಿಸಿದರೆ 31% ಬೆಳವಣಿಗೆ ದಾಖಲಿಸಿದೆ. ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ (HMSI) ಒಟ್ಟು ಮಾರಾಟವು 25% ರಷ್ಟು ವೃದ್ಧಿಯಾಗಿ 591,136 ಯುನಿಟ್‌ಗಳಿಗೆ ತಲುಪಿದೆ.

ಬಜಾಜ್ ಆಟೋ ನವೆಂಬರ್‌ನಲ್ಲಿ ದೇಶೀಯ ದ್ವಿಚಕ್ರ ವಾಹನ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಶೇ. 1 ರಷ್ಟು ಕುಸಿತ ಕಂಡು 202,510 ಯುನಿಟ್‌ಗಳಿಗೆ ತಲುಪಿದೆ ಎಂದು ವರದಿ ಮಾಡಿದೆ. ಆದರೆ, ಕಂಪನಿಯು ನವೆಂಬರ್‌ನಲ್ಲಿ ರಫ್ತು ಸೇರಿದಂತೆ ಒಟ್ಟು ವಾಹನ ಸಗಟು ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಶೇ. 8 ರಷ್ಟು ಬೆಳವಣಿಗೆ ದಾಖಲಿಸಿ 453,273 ಯುನಿಟ್‌ಗಳಿಗೆ ತಲುಪಿದೆ ಎಂದು ವರದಿ ಮಾಡಿದೆ.

ರಾಯಲ್ ಎನ್‌ಫೀಲ್ಡ್ ನವೆಂಬರ್‌ನಲ್ಲಿ 100,670 ಮೋಟಾರ್‌ಸೈಕಲ್‌ಗಳ ಮಾಸಿಕ ಮಾರಾಟವನ್ನು ದಾಖಲಿಸಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ. 22 ರಷ್ಟು ಹೆಚ್ಚಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಣ ಬಡಿದಾಟ: ಮಂಗಳೂರಿನಲ್ಲಿ ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಬೆಂಬಲಿಗರಿಂದ ಜೈಕಾರ ಘೋಷಣೆ- Video

Vladimir Putin ಭೇಟಿ ಮುನ್ನ ಭಾರತ-ರಷ್ಯಾ ಒಪ್ಪಂದಕ್ಕೆ ಸಹಿ: ಡಿ. 4ರಂದು ದೆಹಲಿಯಲ್ಲಿ 23ನೇ ಶೃಂಗಸಭೆ

ಮದುವೆಯಾದ ಸಂತಸದಲ್ಲಿದ್ದ ಮದುಮಗ ಹೃದಯಾಘಾತದಿಂದ ಸಾವು!

ಮಧ್ಯಾಹ್ನದ ಬಿಸಿಯೂಟ: ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು, ಹಾಲು ವಿತರಿಸಲು ಆದೇಶ

50 ದಿನಗಳ ನಿರಂತರ ಶುಕ್ಲ ಯಜುರ್ವೇದದ ದಂಡಕ್ರಮ ಪಾರಾಯಣ: ಕಾಶಿಯ ಯುವ ವೇದ ವಿದ್ವಾಂಸನ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

SCROLL FOR NEXT