ಭಾರತೀಯ ಷೇರು ಮಾರುಕಟ್ಟೆ 
ವಾಣಿಜ್ಯ

Indian Stock Market: ವಾರದ ಮೊದಲ ದಿನವೇ SENSEX ಕುಸಿತ; ಏಷ್ಯನ್ ಮಾರುಕಟ್ಟೆ ನೀರಸ ವಹಿವಾಟು!

ಸೋಮವಾರ ಷೇರುಮಾರುಕಟ್ಟೆ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಭಾರತ ಮಾತ್ರವಲ್ಲದೇ ಇತರೆ ಏಷ್ಯನ್ ಮಾರುಕಟ್ಟೆಗಳೂ ಕೂಡ ನೀರಸ ವಹಿವಾಟು ನಡೆಸಿವೆ.

ಮುಂಬೈ: ಕೇಂದ್ರ ಬಜೆಟ್ ಉತ್ಸಾಹದಲ್ಲಿದ್ದ ಭಾರತೀಯ ಷೇರುಮಾರುಕಟ್ಟೆ ವಾರದ ಮೊದಲ ದಿನವೇ ನೀರಸ ವಹಿವಾಟು ನಡೆಸಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ಅಂತ್ಯಗೊಂಡಿವೆ.

ಹೌದು.. ಸೋಮವಾರ ಷೇರುಮಾರುಕಟ್ಟೆ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಭಾರತ ಮಾತ್ರವಲ್ಲದೇ ಇತರೆ ಏಷ್ಯನ್ ಮಾರುಕಟ್ಟೆಗಳೂ ಕೂಡ ನೀರಸ ವಹಿವಾಟು ನಡೆಸಿವೆ.

ಸೋಮವಾರ ಭಾರತೀಯ ಷೇರುಮಾರುಕಟ್ಟೆ ಕುಸಿತದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.41ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.52ರಷ್ಟು ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಇಂದು 319.22ಅಂಕಗಳ ಇಳಿಕೆಯೊಂದಿಗೆ 77,186.74 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 121.10 ಅಂಕಗಳ ಕುಸಿತದೊಂದಿಗೆ 23,361.05 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಏಷ್ಯನ್ ಮಾರುಕಟ್ಟೆಗಳ ನೀರಸ ವಹಿವಾಟು!

ಭಾರತ ಮಾತ್ರವಲ್ಲದೇ ಸಿಯೋಲ್, ಟೋಕಿಯೊ ಮತ್ತು ಹಾಂಗ್ ಕಾಂಗ್‌ನಲ್ಲಿನ ಏಷ್ಯಾದ ಮಾರುಕಟ್ಟೆಗಳು ಗಮನಾರ್ಹವಾಗಿ ಕುಸಿತದೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದವು. ಯುರೋಪಿಯನ್ ಮಾರುಕಟ್ಟೆಗಳು ಗಣನೀಯ ನಷ್ಟವನ್ನು ಅನುಭವಿಸಿದರೆ, ಅಮೆರಿಕ ಮಾರುಕಟ್ಟೆಗಳು ಕೂಡ ಕುಸಿತದೊಂದಿಗೆ ಮುಕ್ತಾಯಗೊಂಡವು.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಬಜಾಜ್ ಫೈನಾನ್ಸ್ ಸುಮಾರು ಶೇಕಡಾ 5 ರಷ್ಟು ಏರಿಕೆ ಸಾಧಿಸಿದ್ದರೆ, ಉಳಿದಂತೆ ಮಹೀಂದ್ರಾ & ಮಹೀಂದ್ರಾ, ಬಜಾಜ್ ಫಿನ್‌ಸರ್ವ್, ಭಾರ್ತಿ ಏರ್‌ಟೆಲ್ ಮತ್ತು ಮಾರುತಿ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಲಾರ್ಸೆನ್ & ಟೂಬ್ರೊ, ಟಾಟಾ ಮೋಟಾರ್ಸ್, ಹಿಂದೂಸ್ತಾನ್ ಯೂನಿಲಿವರ್, ಏಷ್ಯನ್ ಪೇಂಟ್ಸ್, ಐಟಿಸಿ, ಪವರ್ ಗ್ರಿಡ್, ಎನ್‌ಟಿಪಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಒಂದೇ ಒಂದು ಕಲ್ಲು ಇಡೋಕೂ ಬಿಡಲ್ಲ': ತಮಿಳುನಾಡು ಸಚಿವ ಆನಂದ್ ಕ್ಯಾತೆ

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!

ಸಿಎಂ ವಿಜಯ್ ಯು- ಟರ್ನ್: ಮತ್ತೊಂದು ಮಹತ್ವದ ಆದೇಶ ಹಿಂಪಡೆದ ತಮಿಳುನಾಡು ಸರ್ಕಾರ!

ಫುಟ್‌ಪಾತ್‌ ಮೇಲೆ ಮತ್ತೆ ಅಂಗಡಿ ಹಾಕಿದ್ರೆ ಸಾಮಗ್ರಿಗಳನ್ನ ಜಪ್ತಿ ಮಾಡಿ, ದುಪ್ಪಟ್ಟು ದಂಡ ವಿಧಿಸಿ: ಕೃಷ್ಣ ಬೈರೇಗೌಡ ಖಡಕ್ ಸೂಚನೆ

'Digital arrest' ವಂಚನೆ ತಡೆಗೆ ಸಿಮ್ ಕಾರ್ಡ್ ವಿತರಣೆ ಬಿಗಿಗೊಳಿಸಲಿದೆ ಸರ್ಕಾರ; ಇನ್ಮುಂದೆ ಖರೀದಿಗೆ ನಿರ್ಬಂಧ, ರಿಯಲ್ ಟೈಮ್ ವೆರಿಫಿಕೇಷನ್ ಕಡ್ಡಾಯ!