Indian Stock Market: ವರ್ಷದ ಮೊದಲ ದಿನವೇ ಶುಭಾರಂಭ; ಗ್ರೀನ್ ನಲ್ಲಿ ಮಾರುಕಟ್ಟೆ ಅಂತ್ಯ; SENSEX, NIFTY ಏರಿಕೆ!
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.47ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ.0.41ರಷ್ಟು ಏರಿಕೆ ದಾಖಲಿಸಿದೆ.
ಮುಂಬೈ: ನಿನ್ನೆ ಕುಸಿತದೊಂದಿಗೆ ವರ್ಷಾಂತ್ಯ ಮಾಡಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಏರಿಕೆಯೊಂದಿಗೆ ಹೊಸ ವರ್ಷದ ಮೊದಲ ದಿನ ಶುಭಾರಂಭ ಮಾಡಿದೆ.
ಅಲ್ಪ ಪ್ರಮಾಣದ ಏರಿಕೆಯ ಮೂಲಕ ಭಾರತೀಯ ಷೇರುಮಾರುಕಟ್ಟೆ ಹೊಸ ವರ್ಷದ ಮೊದಲ ದಿನದ ವಹಿವಾಟು ಅಂತ್ಯಗೊಳಿಸಿದ್ದು, ಭಾರತೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.47ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ.0.41ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು 368.40 ಅಂಕಗಳ ಏರಿಕೆಯೊಂದಿಗೆ 78,507.41 ಅಂಕಗಳಿಗೆ ಏರಿದ್ದರೆ, ನಿಫ್ಟಿ 98.10 ಅಂಕಗಳ ಏರಿಕೆಯೊಂದಿಗೆ 23,742.90 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಎಚ್‌ಡಿಎಫ್‌ಸಿ ಬ್ಯಾಂಕ್, ಎಲ್ & ಟಿ, ರಿಲಯನ್ಸ್ ಇಂಡಸ್ಟ್ರೀಸ್, ಮತ್ತು ಮಹೀಂದ್ರಾ & ಮಹೀಂದ್ರಾ, ಮಾರುತಿ ಸುಜುಕಿ, ಪವರ್ ಮೆಕ್, ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಬಜಾಜ್ ಆಟೋ, ಪೇಟಿಎಂ, ಈಸಿ ಟ್ರಿಪ್, ಸಂಸ್ಥೆಯ ಷೇರುಗಳು ನಷ್ಟ ಅನುಭವಿಸಿವೆ.