ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

6,471 ಕೋಟಿ ರೂ ಮೌಲ್ಯದ 2,000 ರೂ ಮುಖಬೆಲೆ ನೋಟುಗಳು ಇನ್ನೂ ಆರ್‌ಬಿಐಗೆ ವಾಪಸ್ ಬಂದಿಲ್ಲ!

ಮೇ 19, 2023 ರಂದು, ಭಾರತೀಯ ರಿಸರ್ವ್ ಬ್ಯಾಂಕ್ 2000 ರೂ.ಗಳ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು.

2000 ರೂಪಾಯಿ ನೋಟು — online desk
Lingaraj Badiger
Updated On : 1 Mar 2025, 3:37 pm

ಮುಂಬೈ: 2000 ರೂ.ಗಳ ನೋಟುಗಳಲ್ಲಿ ಶೇ. 98.18 ರಷ್ಟು ನೋಟುಗಳು ವಾಪಸ್ ಮರಳಿದ್ದು, ಕೇವಲ 6,471 ಕೋಟಿ ರೂಪಾಯಿ ಮೌಲ್ಯದ 2000 ರೂ ಮುಖಬೆಲೆ ನೋಟುಗಳು ಮಾತ್ರ ಸಾರ್ವಜನಿಕರ ಬಳಿ ಇವೆ ಎಂದು ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ ಶನಿವಾರ ತಿಳಿಸಿದೆ.

ಮೇ 19, 2023 ರಂದು, ಭಾರತೀಯ ರಿಸರ್ವ್ ಬ್ಯಾಂಕ್ 2000 ರೂ.ಗಳ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು.

ಮೇ 19, 2023 ರಂದು ವ್ಯವಹಾರದ ಮುಕ್ತಾಯದ ಸಮಯದಲ್ಲಿ 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂ. ನೋಟುಗಳು ಚಲಾವಣೆಯಲ್ಲಿದ್ದವು. ಈಗ 2000 ರೂ.ಗಳ ನೋಟುಗಳ ಒಟ್ಟು ಮೌಲ್ಯವು ಫೆಬ್ರವರಿ 28, 2025 ರ ವರೆಗೆ 6,471 ಕೋಟಿ ರೂಪಾಯಿಗಳಿಗೆ ಇಳಿದಿದೆ ಎಂದು ಆರ್‌ಬಿಐ ತಿಳಿಸಿದೆ.

Advertisement

Advertisement

Also Read

2,000 ರೂ. ನೋಟು ವಿನಿಮಯ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

"ಹೀಗಾಗಿ, ಮೇ 19, 2023 ರಂದು ಚಲಾವಣೆಯಲ್ಲಿರುವ 2000 ರೂ.ಗಳ ನೋಟುಗಳಲ್ಲಿ ಶೇ. 98.18 ರಷ್ಟು ವಾಪಸ್ ಬಂದಿವೆ" ಎಂದು ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

2000 ರೂ. ನೋಟುಗಳನ್ನು ಠೇವಣಿ ಮಾಡುವ ಮತ್ತು/ಅಥವಾ ವಿನಿಮಯ ಮಾಡಿಕೊಳ್ಳುವ ಸೌಲಭ್ಯವು ಅಕ್ಟೋಬರ್ 7, 2023 ರವರೆಗೆ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಲಭ್ಯವಿತ್ತು. ಆದಾಗ್ಯೂ, ಈ ಸೌಲಭ್ಯವು ಇನ್ನೂ ರಿಸರ್ವ್ ಬ್ಯಾಂಕಿನ 19 ವಿತರಣಾ ಕಚೇರಿಗಳಲ್ಲಿ ಲಭ್ಯವಿದೆ.

ಅಕ್ಟೋಬರ್ 9, 2023 ರಿಂದ, ಆರ್‌ಬಿಐ ವಿತರಣಾ ಕಚೇರಿಗಳು, ವ್ಯಕ್ತಿಗಳು ಮತ್ತು ಸಂಸ್ಥೆಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಠೇವಣಿ ಇಡಲು 2000 ರೂ. ನೋಟುಗಳನ್ನು ಸ್ವೀಕರಿಸುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement