ಸಾಂದರ್ಭಿಕ ಚಿತ್ರ 
ವಾಣಿಜ್ಯ

EPF ಠೇವಣಿ ಮೇಲಿನ ಬಡ್ಡಿದರ ಶೇ. 8.25 ನಿಗದಿಗೆ ಕೇಂದ್ರ ಅನುಮೋದನೆ

"2024-25ನೇ ಹಣಕಾಸು ವರ್ಷಕ್ಕೆ ಇಪಿಎಫ್‌ಒ ಮೇಲಿನ ಶೇ. 8.25 ರ ಬಡ್ಡಿದರ ಮುಂದುವರಿಸಲು ಕೇಂದ್ರ ಹಣಕಾಸು ಸಚಿವಾಲಯವು ಒಪ್ಪಿಗೆ ನೀಡಿದೆ.

ನವದೆಹಲಿ: 2025ನೇ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿ(EPF)ಯ ಮೇಲಿನ ಬಡ್ಡಿದರವನ್ನು ಶೇ. 8.25 ಮುಂದುವರೆಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದಾಗಿ ಇಪಿಎಫ್‌ಒನ 7 ಕೋಟಿಗೂ ಹೆಚ್ಚು ಚಂದಾದಾರರಿಗೆ ಅನುಕೂಲವಾಗಲಿದೆ.

ಫೆಬ್ರವರಿ 28 ರಂದು ಇಪಿಎಫ್‌ಒ, 2024-25ನೇ ಹಣಕಾಸು ವರ್ಷಕ್ಕೆ ನೌಕರರ ಭವಿಷ್ಯ ನಿಧಿ(ಇಪಿಎಫ್) ಠೇವಣಿಗಳ ಮೇಲಿನ ಶೇ. 8.25 ರ ಬಡ್ಡಿದರವನ್ನು ಹಿಂದಿನ ಹಣಕಾಸು ವರ್ಷದಲ್ಲಿ ಒದಗಿಸಲಾದ ದರಕ್ಕೆ ಸಮನಾಗಿ ಉಳಿಸಿಕೊಳ್ಳಲು ನಿರ್ಧರಿಸಿತ್ತು ಮತ್ತು 2024-25ರ ಅನುಮೋದಿತ ಬಡ್ಡಿದರವನ್ನು ಹಣಕಾಸು ಸಚಿವಾಲಯದ ಒಪ್ಪಿಗೆಗಾಗಿ ಕಳುಹಿಸಲಾಗಿತ್ತು.

"2024-25ನೇ ಹಣಕಾಸು ವರ್ಷಕ್ಕೆ ಇಪಿಎಫ್‌ಒ ಮೇಲಿನ ಶೇ. 8.25 ರ ಬಡ್ಡಿದರ ಮುಂದುವರಿಸಲು ಕೇಂದ್ರ ಹಣಕಾಸು ಸಚಿವಾಲಯವು ಒಪ್ಪಿಗೆ ನೀಡಿದೆ ಮತ್ತು ಕಾರ್ಮಿಕ ಸಚಿವಾಲಯವು ಗುರುವಾರ ಇಪಿಎಫ್‌ಒಗೆ ಈ ಕುರಿತು ಮಾಹಿತಿ ನೀಡಿದೆ" ಎಂದು ಕಾರ್ಮಿಕ ಸಚಿವಾಲಯದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಈಗ 2025ನೇ ಹಣಕಾಸು ವರ್ಷಕ್ಕೆ ಅನುಮೋದಿಸಲಾದ ಬಡ್ಡಿ ದರದ ಪ್ರಕಾರ ಬಡ್ಡಿ ಮೊತ್ತವನ್ನು EPFO​​ನ ಏಳು ಕೋಟಿಗೂ ಹೆಚ್ಚು ಚಂದಾದಾರರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 28 ರಂದು ದೆಹಲಿಯಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ EPFO​​ನ ಕೇಂದ್ರೀಯ ಟ್ರಸ್ಟಿಗಳ ಮಂಡಳಿ(ಸಿಬಿಟಿ)ಯ 237ನೇ ಸಭೆಯಲ್ಲಿ ಈ ಬಡ್ಡಿದರ ನಿಗದಿಪಡಿಸಲಾಗಿತ್ತು.

ಅನೇಕ ಸ್ಥಿರ-ಆದಾಯದ ಸಾಧನಗಳಿಗೆ ಹೋಲಿಸಿದರೆ, EPF ತುಲನಾತ್ಮಕವಾಗಿ ಹೆಚ್ಚಿನ ಮತ್ತು ಸ್ಥಿರವಾದ ಆದಾಯವನ್ನು ನೀಡುತ್ತದೆ, ನಿವೃತ್ತಿಯ ನಂತರದ ಉಳಿತಾಯದ ಮೇಲೆ ಸ್ಥಿರವಾದ ಬೆಳವಣಿಗೆಯನ್ನು ಖಚಿತಪಡಿಸುತ್ತದೆ.

2022-23 ರಲ್ಲಿ ಶೇ. 8.15 ರಿಂದ ಬಡ್ಡಿದರ ನಿಗದಿಪಡಿಸಿದ್ದ EPFO, 2023-24ನೇ ಸಾಲಿನಲ್ಲಿ ಶೇ. 8.25 ಕ್ಕೆ ಹೆಚ್ಚಿಸಿತ್ತು. ಸದ್ಯ ಇದನ್ನು ಪ್ರಸಕ್ತ ಹಣಕಾಸು ವರ್ಷಕ್ಕೂ ಮುಂದುವರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶಕ್ಕೆ ಸ್ವಾತಂತ್ರ್ಯ ಬಂದ 79 ವರ್ಷಗಳ ನಂತರ 'ವಂದೇ ಮಾತರಂ' ಚರ್ಚೆಯ ಅಗತ್ಯವೇನಿತ್ತು?: ಪ್ರಿಯಾಂಕಾ ಗಾಂಧಿ; Video

ಮಳೆ, ಚಳಿಯಿಂದಾಗಿ ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ಶೇ. 19.55ರಷ್ಟು ಕುಸಿತ: ಸಚಿವ ತಿಮ್ಮಾಪುರ

ದಂಪತಿಗಳಿಗೆ ಈಗ ಖಚಿತತೆ ಇಲ್ಲ: ಈಗಿನದ್ದೆಲ್ಲಾ situationship ಅಷ್ಟೇ: ಚೇತನ್ ಭಗತ್

ಪೂಮಾದಿಂದ 300 ಕೋಟಿ ಆಫರ್ ಕೈಬಿಟ್ಟ ಕೊಹ್ಲಿ: ತನ್ನದೇ ಬ್ರ್ಯಾಂಡ್ ಗಾಗಿ ಹೊಸ ಡೀಲ್, 40 ಕೋಟಿ ರೂ. ಹೂಡಿಕೆ!

ಅಪ್ಪಿತಪ್ಪಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಅವರ ಸಂಪುಟಕ್ಕೆ ಸೇರಲ್ಲ: Congress ಶಾಸಕ ಕೆ.ಎನ್ ರಾಜಣ್ಣ

SCROLL FOR NEXT