ಎಲ್ ಪಿಜಿ ಸಿಲಿಂಡರ್ ಗಾಗಿ ಜನರು ಸರದಿ ಸಾಲಿನಲ್ಲಿ ನಿಂತಿರುವುದು  
ವಾಣಿಜ್ಯ

ಗಾಯದ ಮೇಲೆ ಬರೆ: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಹೆಚ್ಚಳ; ಹೊಸ ದರ ಇಂದಿನಿಂದಲೇ ಜಾರಿ

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಸರಬರಾಜು ವ್ಯತ್ಯಯ ಹಾಗೂ ಕೊರತೆಯ ಕಾರಣವಾಗಿ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ.

ಆರ್ಥಿಕ ವರ್ಷ ಆರಂಭದ ದಿನವಾದ ಇಂದು ಏಪ್ರಿಲ್ 1ರಿಂದ ಅನ್ವಯವಾಗುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 195.50 ರೂಪಾಯಿ ಹೆಚ್ಚಳವಾಗಿದೆ. ಕೊಲ್ಕತ್ತಾದಲ್ಲಿ ಇದೇ ಸಿಲಿಂಡರ್ ಬೆಲೆ 218 ರೂಪಾಯಿ ಏರಿಕೆಯಾಗಿದೆ. ಗೃಹ ಬಳಕೆಯ ಅಡುಗೆ ಅನಿಲದ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ನಗರವಾರು ನವೀಕರಿಸಿದ ವಾಣಿಜ್ಯ ಎಲ್‌ಪಿಜಿ ದರಗಳು (ಏಪ್ರಿಲ್ 1):

FTL ಸಿಲಿಂಡರ್ ಬೆಲೆ ಏರಿಕೆ
5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ (FTL) ಸಿಲಿಂಡರ್ ಬೆಲೆ ಇಂದಿನಿಂದ 51 ರೂಪಾಯಿ ಹೆಚ್ಚಾಗಿದೆ.

ಎಲ್‌ಪಿಜಿ ಬೆಲೆ ಏರಿಕೆಯ ಕಾರಣ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಸರಬರಾಜು ವ್ಯತ್ಯಯ ಹಾಗೂ ಕೊರತೆಯ ಕಾರಣವಾಗಿ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಈ ಇಂಧನ ಸಂಕಷ್ಟದ ಪರಿಣಾಮ ಇದೀಗ ನಮ್ಮ ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಮತ್ತು ದರಗಳ ಮೇಲೂ ಕಾಣಿಸುತ್ತಿದೆ. ಕಳೆದ ತಿಂಗಳು ಸರ್ಕಾರವು 14.2 ಕೆಜಿ ಗೃಹ ಬಳಕೆಯ ಮತ್ತು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಕ್ರಮವಾಗಿ 60 ರೂಪಾಯಿ ಮತ್ತು 144.5 ರೂಪಾಯಿ ಹೆಚ್ಚಿಸಿತ್ತು.

ಇಂದು ಬುಧವಾರ ಮತ್ತೊಂದು ದರ ಪರಿಷ್ಕರಣೆ, ಇರಾನ್ ಮತ್ತು ಅಮೆರಿಕಾ-ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವುದಕ್ಕೆ ಸಂಬಂಧಿಸಿದೆ. ಫೆಬ್ರವರಿ ಅಂತ್ಯದಲ್ಲಿ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ಬಳಿಕ, ಇಂಧನ ಸರಬರಾಜು ಸರಪಳಿಗಳ ವ್ಯತ್ಯಯದಿಂದ ಜಾಗತಿಕ ತೈಲ ಬೆಲೆಗಳು ಸುಮಾರು 50 ಶೇಕಡಾದಷ್ಟು ಏರಿಕೆ ಕಂಡಿವೆ.

ಪ್ರತಿ ತಿಂಗಳ ಮೊದಲ ದಿನ, ಇಂಡಿಯನ್ ಆಯಿಲ್ ಕಾರ್ಪೊರೇಶನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಅಂತಾರಾಷ್ಟ್ರೀಯ ಮಾನದಂಡಗಳು ಹಾಗೂ ವಿನಿಮಯ ದರದ ಆಧಾರದ ಮೇಲೆ ATF ಮತ್ತು LPG ಸಿಲಿಂಡರ್ ಗಳ ದರಗಳನ್ನು ನವೀಕರಿಸುತ್ತವೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಪ್ರತಿ ಲೀಟರ್‌ಗೆ 2 ರೂಪಾಯಿ ಇಳಿಕೆಯಾದ ನಂತರ, ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸ್ಥಿರವಾಗಿವೆ. ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94.72 ರೂಪಾಯಿ ಆಗಿದ್ದು, ಡೀಸೆಲ್ ದರ 87.62 ರೂಪಾಯಿ ಆಗಿದೆ.

ವಾಣಿಜ್ಯ ಎಲ್‌ಪಿಜಿ ಸರಬರಾಜಿನ ಬಗ್ಗೆ ಕೇಂದ್ರದ ಮಾಹಿತಿ
ಎಲ್‌ಪಿಜಿ ಸರಬರಾಜಿನ ಕುರಿತು ನಿನ್ನೆ ಪ್ರಕಟಣೆ ಹೊರಡಿಸಿದ ಕೇಂದ್ರ ಸರ್ಕಾರ, ವಾಣಿಜ್ಯ ಎಲ್‌ಪಿಜಿ ಸರಬರಾಜನ್ನು ಗ್ರಾಹಕರಿಗೆ 20 ಶೇಕಡಾ ಮಟ್ಟಕ್ಕೆ ಪುನಃಸ್ಥಾಪಿಸಲಾಗಿದೆ ಎಂದು ತಿಳಿಸಿದೆ.

ಇದಲ್ಲದೆ, ಮೊನ್ನೆ ಮಾರ್ಚ್ 18ರಂದು ಹೊರಡಿಸಿದ ಪತ್ರದಲ್ಲಿ, ಪಿಎನ್‌ಜಿ (PNG) ವಿಸ್ತರಣೆಗೆ ಸಂಬಂಧಿಸಿದ ಸುಗಮ ವ್ಯವಹಾರ ಸುಧಾರಣೆಗಳ ಆಧಾರದ ಮೇಲೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ 10 ಶೇಕಡಾ ವಾಣಿಜ್ಯ ಎಲ್‌ಪಿಜಿ ಹಂಚಿಕೆ ಮಾಡಲು ಪ್ರಸ್ತಾಪಿಸಲಾಗಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ತಿಳಿಸಿರುವಂತೆ, ಮಾರ್ಚ್ 23ರಿಂದ ದೇಶದಾದ್ಯಂತ ವಲಸೆ ಕಾರ್ಮಿಕರಿಗೆ 3.2 ಲಕ್ಷಕ್ಕಿಂತ ಹೆಚ್ಚು 5 ಕೆಜಿ FTL ಸಿಲಿಂಡರ್‌ಗಳನ್ನು ಮಾರಾಟ ಮಾಡಲಾಗಿದೆ. ನಿನ್ನೆ ಒಂದೇ ದಿನ 63,000ಕ್ಕೂ ಹೆಚ್ಚು 5 ಕೆಜಿ FTL ಸಿಲಿಂಡರ್‌ಗಳನ್ನು ವಿತರಿಸಲಾಗಿದೆ.

ಇದಲ್ಲದೆ, ಬಹುತೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಗೃಹೇತರ ಎಲ್‌ಪಿಜಿ ಹಂಚಿಕೆಗಾಗಿ ಆದೇಶಗಳನ್ನು ಹೊರಡಿಸಿವೆ. ಮೊನ್ನೆ ಮಾರ್ಚ್ 14ರಿಂದ ವಾಣಿಜ್ಯ ಸಂಸ್ಥೆಗಳ ಮೂಲಕ ಒಟ್ಟು 47,928 ಮೆಟ್ರಿಕ್ ಟನ್ ಎಲ್‌ಪಿಜಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಸರ್ಕಾರವು, ಎಲ್‌ಪಿಜಿ ವಿತರಕರ ಬಳಿ ಯಾವುದೇ ಸರಬರಾಜು ಕೊರತೆ ವರದಿಯಾಗಿಲ್ಲ ಎಂದು ಹೇಳಿದರೂ, ಜಾಗತಿಕ ರಾಜಕೀಯ ಪರಿಸ್ಥಿತಿಯ ಪರಿಣಾಮ ಸರಬರಾಜಿನ ಮೇಲೆ ಪರಿಣಾಮ ಬೀರಿರುವುದು ವಾಸ್ತವ ಸಂಗತಿಯಾಗಿದೆ. ಮಾರ್ಚ್ 30ರಂದು ಉದ್ಯಮ ಮಟ್ಟದಲ್ಲಿ ಆನ್‌ಲೈನ್ ಎಲ್‌ಪಿಜಿ ಬುಕ್ಕಿಂಗ್ ಪ್ರಮಾಣ 92 ಶೇಕಡಾ ಏರಿಕೆಯಾಗಿದೆ.

ಮಾರ್ಚ್ 1ರಿಂದ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಸರಾಸರಿ ದಿನಕ್ಕೆ 50 ಲಕ್ಷಕ್ಕೂ ಹೆಚ್ಚು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸಿವೆ. ವಿತರಕರ ಮಟ್ಟದಲ್ಲಿ ದುರುಪಯೋಗ ತಡೆಯಲು ಡೆಲಿವರಿ ಆಥೆಂಟಿಕೇಶನ್ ಕೋಡ್ (DAC) ಆಧಾರಿತ ವಿತರಣೆಗಳು ಫೆಬ್ರವರಿಯಲ್ಲಿ ಶೇಕಡಾ 53ರಿಂದ ಮಾರ್ಚ್ 30ರಂದು 83 ಶೇಕಡಾಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ನಿನ್ನೆ ಮಾರ್ಚ್ 31ರಂದು ಪ್ರಮುಖ ಭಾರತದ ನಗರಗಳಲ್ಲಿ ಇದ್ದ ಗೃಹ ಬಳಕೆ (14.2 ಕೆಜಿ) ಮತ್ತು ವಾಣಿಜ್ಯ (19 ಕೆಜಿ) ಎಲ್‌ಪಿಜಿ ಸಿಲಿಂಡರ್ ದರಗಳು:

ಮಾರ್ಚ್ 1ರಿಂದ ವಾಣಿಜ್ಯ ಎಲ್‌ಪಿಜಿ 300 ರೂಪಾಯಿಗಿಂತ ಹೆಚ್ಚು ಏರಿಕೆ

ದೆಹಲಿ ನಗರದಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಹೆಚ್ಚಿಸಲಾಗಿದೆ. ಇದು ಈಗ 2,078.50 ಆಗಿದ್ದು, ಮಾರ್ಚ್ 1ರಂದು ಇದ್ದ 1,768.50ರಿಂದ ಏರಿಕೆಯಾಗಿದೆ.

ಇದು ಮಾರ್ಚ್ 1ರಿಂದ ಮೂರನೇ ಬಾರಿ ದರ ಏರಿಕೆಯಾಗಿದ್ದು, ಜನವರಿ 1ರಿಂದ ಐದನೇ ಬಾರಿ ದರ ಹೆಚ್ಚಳವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!

ರಾಹುಲ್ ಗಾಂಧಿ ನಿಲುವಿಗೆ ಉಲ್ಟಾ ಹೊಡೆದರೇ ಡಿಕೆಶಿ? CM ನಿವಾಸಕ್ಕೆ ಅದಾನಿ ಭೇಟಿ; ಕೈ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ..!

KPSC ಹಗರಣ: IAS ಅಧಿಕಾರಿ ಗಂಗ್ವಾರ್ ಮನೆ ಮೇಲೆ ED ದಾಳಿ; ಗೇಟ್ ಲಾಕ್ ಮಾಡಿ ಸೆಕ್ಯೂರಿಟಿ ಹೈಡ್ರಾಮಾ, ಕೀ ಮೇಕರ್ ಕರೆಯಿಸಿ ಬಾಗಿಲು ಮುರಿದ ಅಧಿಕಾರಿಗಳು..!

Operation Sindoorನಲ್ಲಿ ಧ್ವಂಸವಾಗಿದ್ದ ಜೈಶ್ ನೆಲೆ ಮರುನಿರ್ಮಾಣ! ಪಾಕ್‌ ಸರ್ಕಾರದಿಂದ 25 ಕೋಟಿ ನೆರವು!

Onion Price: ದಿಢೀರ್ ಈರುಳ್ಳಿ ಬೆಲೆ ಏರಿಕೆ; ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತಷ್ಟು ದುಬಾರಿ ಸಾಧ್ಯತೆ, ದರ ಏರಿಕೆಗೆ ಕಾರಣವೇನು?