ಫೇಸ್‌ಬುಕ್‌ (ಮೆಟಾ) Online Desk
ವಾಣಿಜ್ಯ

ಯಾಕೋ ಏನೋ ಫೇಸ್‌ಬುಕ್‌ಗೆ ಟೈಮೇ ಸರಿಯಿಲ್ಲ! ಮಹತ್ವದ ಪ್ರಕರಣದಲ್ಲಿ ಮೆಟಾ ಕಂಪನಿಗೆ ಬಿತ್ತು 5,404 ಕೋಟಿ ದಂಡ

ಫೇಸ್‌ಬುಕ್ ಒಡೆತನದ ಮೆಟಾ ಕಂಪನಿಗೆ ಮಕ್ಕಳ ಮಾನಸಿಕ ಆರೋಗ್ಯ ಹಾನಿ ಪ್ರಕರಣದಲ್ಲಿ ₹5,404 ಕೋಟಿ ರೂಪಾಯಿ ಭಾರಿ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ನ್ಯೂ ಮೆಕ್ಸಿಕೋ (ಅಮೆರಿಕ): ಯಾಕೋ ಏನೋ ಫೇಸ್‌ಬುಕ್ ಒಡೆತನದ ಮೆಟಾ ಕಂಪನಿಗೆ ಟೈಮೇ ಸರಿಯಿಲ್ಲ ಅನಿಸುತ್ತೆ! ಯಾಕಂದ್ರೆ, ಭಾರತದಲ್ಲಿ ಪ್ರಧಾನಿ ಮೋದಿಯವರ ಫೇಸ್‌ಬುಕ್ ವಿಡಿಯೋ ಬ್ಲಾಕ್ ಪ್ರಕರಣದಲ್ಲಿ ಸಂಸದೀಯ ಸಮಿತಿ ಕ್ಲಾಸ್ ತೆಗೆದುಕೊಳ್ಳುತ್ತಿದೆ. ಜೊತೆಗೆ ಭಾರತೀಯ ಕಾನೂನುಗಳನ್ನು ಪಾಲಿಸದೆ ಅಮೆರಿಕದ ನಿಯಮಗಳನ್ವಯ ಪ್ಲಾಟ್‌ಫಾರ್ಮ್ ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರ ಹಾಗೂ ಮೆಟಾ ಕಂಪನಿ ನಡುವೆ ಮೊದಲಿನಿಂದಲೂ ಜಟಾಪಟಿ ಇದೆ. ಮತ್ತೊಂದೆಡೆ, ಯುರೋಪಿಯನ್ ಒಕ್ಕೂಟದಲ್ಲಿ ಗೌಪ್ಯತೆ ನಿಯಮಗಳ ಉಲ್ಲಂಘನೆಗಾಗಿ ದಂಡ ಮತ್ತು AI ಕಾರಣದಿಂದ ಉದ್ಯೋಗ ಕಡಿತದ ವಿವಾದಾತ್ಮಕ ಮೊಕದ್ದಮೆಗಳನ್ನು ಎದುರಿಸುತ್ತಿದೆ. ಈ ಎಲ್ಲದರ ನಡುವೆಯೇ, ಕಂಪನಿಗೆ ಅಮೆರಿಕದಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಹಾನಿ ಪ್ರಕರಣದಲ್ಲಿ ₹5,404 ಕೋಟಿ ರೂಪಾಯಿ ಭಾರಿ ದಂಡ ವಿಧಿಸಿ ನ್ಯೂ ಮೆಕ್ಸಿಕೋ ನ್ಯಾಯಾಲಯ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಮೆಟಾ ಕಂಪನಿಯು ತನ್ನ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಆ್ಯಪ್‌ಗಳಲ್ಲಿ ಇನ್‌ಫಿನಿಟ್ ಸ್ಕ್ರಾಲ್ ನಂತಹ ವೈಶಿಷ್ಟ್ಯಗಳನ್ನು ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಿದೆ. ಇದು ಅಪ್ರಾಪ್ತ ವಯಸ್ಕರಲ್ಲಿ ತೀವ್ರ ಸಾಮಾಜಿಕ ಜಾಲತಾಣದ ವ್ಯಸನವನ್ನು ಉಂಟುಮಾಡುತ್ತಿದೆ ಎನ್ನುವ ಕಾರಣದಿಂದ ಅಮೆರಿಕದ ನ್ಯೂ ಮೆಕ್ಸಿಕೋ ನ್ಯಾಯಾಲಯವು ಮೆಟಾ ಕಂಪನಿಗೆ $567 ಮಿಲಿಯನ್ ಅಂದರೆ ಅಂದಾಜು ₹5,404 ಕೋಟಿ ರೂಪಾಯಿ ಭಾರಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಮುಂದುವರೆದು, ಪ್ರಕರಣದ ತನಿಖೆ ವೇಳೆ ಬಳಕೆದಾರರ ಒಪ್ಪಿಗೆಯಿಲ್ಲದೆ ಅವರ ವೈಯಕ್ತಿಕ ಮಾಹಿತಿ ಹಾಗೂ ಡೇಟಾವನ್ನು ಜಾಹೀರಾತು ಉದ್ದೇಶಗಳಿಗಾಗಿ ಇತರ ಮೆಟಾ ಕಂಪನಿಗಳೊಂದಿಗೆ ಹಂಚಿಕೊಳ್ಳುತ್ತಿರುವುದು ಸಾಬೀತಾಗಿದೆ. ಜೊತೆಗೆ ತಪ್ಪು ಮಾಹಿತಿ ಹಾಗೂ ದೀಪ್‌ಫೇಕ್ ವಿಡಿಯೋಗಳನ್ನು ನಿಯಂತ್ರಿಸಲು ಕಂಪನಿಯು ವಿಫಲವಾಗಿದೆ ಎಂದು ಸಹ ಆಕ್ಷೇಪ ವ್ಯಕ್ತವಾಗಿದೆ.

ಭಾರತದಲ್ಲೂ ಬಿತ್ತು ದಂಡ

ಭಾರತದಲ್ಲೂ ಸಹ ಮೆಟಾ ಕಂಪನಿಯು ತನ್ನ ವಾಟ್ಸಾಪ್‌ನ 2021ರ ಪ್ರೈವೆಸಿ ಪಾಲಿಸಿಯ ಮೂಲಕ ಬಳಕೆದಾರರನ್ನು ಬಲವಂತವಾಗಿ ಡೇಟಾ ಹಂಚಿಕೆಗೆ ಒಪ್ಪಿಸುವಂತೆ ಮಾಡಿದ್ದಕ್ಕಾಗಿ, ಭಾರತೀಯ ಸ್ಪರ್ಧಾ ಆಯೋಗವು ₹213 ಕೋಟಿಗೂ ಅಧಿಕ ದಂಡ ವಿಧಿಸಿತ್ತು. ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'Islamic NATO' ಊಹಾಪೋಹಗಳಿಗೆ ಮತ್ತಷ್ಟು ಬಲ: ಹೊಸ ರಕ್ಷಣಾ ಒಪ್ಪಂದದತ್ತ ಟರ್ಕಿ-ಸೌದಿ-ಪಾಕಿಸ್ತಾನ, ಜಾಗತಿಕ ಮಟ್ಟದಲ್ಲಿ ಹೆಚ್ಚಿದ ಕುತೂಹಲ..!

'ಭಾರತದ ಕಾನೂನು ಪಾಲಿಸುತ್ತಿದ್ದೀರಾ?': Metaಗೆ ಖಡಕ್ ಕ್ಲಾಸ್‌ ತೆಗೆದುಕೊಂಡ ಕೇಂದ್ರ ಸರ್ಕಾರ, ತೀವ್ರ ವಿಚಾರಣೆ

18 ಅಡಿ ಬಾವಿಯಲ್ಲಿ ಸಮುದ್ರದ ರೀತಿ ಅಲೆ...! ಗುಜರಾತ್‌ನಲ್ಲಿ ಬೆರಗು ಮೂಡಿಸಿದ ವಿಚಿತ್ರ ವಿದ್ಯಮಾನ; ಭೂಮಿಯೊಳಗೆ ನಡೆಯುತ್ತಿರುವುದೇನು? Video

ಸಂಪುಟ ವಿಸ್ತರಣೆ ಕಿಚ್ಚು; 'ಕೈ' ಪಾಳಯದಲ್ಲಿ ಹೈ ಡ್ರಾಮಾ: ಡ್ಯಾಮೇಜ್ ಕಂಟ್ರೋಲ್‌ಗೆ ಸುರ್ಜೇವಾಲಾ ಎಂಟ್ರಿ..!

'Real estate mafia ಲಾಭಕ್ಕಾಗಿ ಬಿಡದಿ ಯೋಜನೆ'; ಸರ್ಕಾರದ ವಿರುದ್ಧ BJP-JDS ವಾಗ್ದಾಳಿ, ಜಂಟಿ ಪಾದಯಾತ್ರೆಗೆ ಮುಂದು..!