ಹಣ Online Desk
ವಾಣಿಜ್ಯ

ದೇಶದ ಬ್ಯಾಂಕ್‌ಗಳಲ್ಲಿ ಧೂಳು ಹಿಡಿಯುತ್ತಿದೆ 86,917 ಕೋಟಿ ರೂಪಾಯಿ! ನಿಮ್ಮ ಹಣವೂ ಇರಬಹುದಾ? ಹೀಗೆ ಚೆಕ್ ಮಾಡಿ

ಬ್ಯಾಂಕಿನಲ್ಲಿ ಹಣ ಇಡೋದು ನಮ್ಮ ಹಣ ಸೇಫ್ ಆಗಿರಲಿ ಎಂದು; ಆದ್ರೆ, ಹೀಗೆ ಇಟ್ಟ ಹಣಕ್ಕೆ ಬಡ್ಡಿ ಏನೋ ಸಿಗುತ್ತೆ. ಆದ್ರೆ, ಅಲ್ಲಿ ಹಣವನ್ನೇ ಇಟ್ಟಿದೀವಿ ಅನ್ನೋದನ್ನೇ ಮರೆತು ಹೋದ್ರೆ ಏನು ಕಥೆ? ಹೀಗೆ ವಿವಿಧ ಬ್ಯಾಂಕುಗಳಲ್ಲಿ ವಾರಸುದಾರರೇ ಇಲ್ಲದೆ ಬರೋಬ್ಬರಿ ₹86,917 ಕೋಟಿ ಧೂಳು ಹಿಡಿಯುತ್ತಿದೆ ಎನ್ನಲಾಗಿದೆ.

ನವದೆಹಲಿ: ಬ್ಯಾಂಕಿನಲ್ಲಿ ಹಣ ಇಡೋದು ನಮ್ಮ ಹಣ ಸೇಫ್ ಆಗಿರಲಿ ಹಾಗೂ ಬಡ್ಡಿ ಸಿಗಲಿ ಎಂದು; ಆದ್ರೆ, ಹೀಗೆ ಇಟ್ಟ ಹಣಕ್ಕೆ ಬಡ್ಡಿ ಏನೋ ಸಿಗುತ್ತೆ. ಆದ್ರೆ, ಅಲ್ಲಿ ಹಣವನ್ನೇ ಇಟ್ಟಿದೀವಿ ಅನ್ನೋದನ್ನೇ ಮರೆತು ಹೋದ್ರೆ ಏನು ಕಥೆ? ಹೌದು, ಹೀಗೆ ವಿವಿಧ ಭಾರತೀಯ ಬ್ಯಾಂಕುಗಳಲ್ಲಿ ವಾರಸುದಾರರೇ ಇಲ್ಲದೆ ಬರೋಬ್ಬರಿ ₹86,917 ಕೋಟಿ ರೂಪಾಯಿ ಹಣ ಧೂಳು ಹಿಡಿಯುತ್ತಿದೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಸಂಸತ್ತಿನಲ್ಲಿ ನೀಡಿದ ಲಿಖಿತ ಮಾಹಿತಿಯ ಪ್ರಕಾರ, ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದೆ ಬರೋಬ್ಬರಿ ₹86,917.08 ಕೋಟಿ ರೂಪಾಯಿ (₹86,917,08,00,000) ಹಣ ಧೂಳು ಹಿಡಿಯುತ್ತಿದ್ದು, ಅದನ್ನು ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾಯಿಸಲಾಗಿದೆ

ಯಾವ ಬ್ಯಾಂಕ್‌ನಲ್ಲಿ ಎಷ್ಟು ಹಣವಿದೆ?

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI): ಮೊದಲ ಸ್ಥಾನದಲ್ಲಿದ್ದು, ಬರೋಬ್ಬರಿ ₹20,040 ಕೋಟಿ ಹಣ ವಾರಸುದಾರರಿಲ್ಲದೆ ಉಳಿದಿದೆ.

  • ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB): ಎರಡನೇ ಸ್ಥಾನದಲ್ಲಿದ್ದು, ₹7,585 ಕೋಟಿ ಹಣವಿದೆ.

  • ಕೆನರಾ ಬ್ಯಾಂಕ್: ಮೂರನೇ ಸ್ಥಾನದಲ್ಲಿದ್ದು, ₹6,830 ಕೋಟಿ ಹಣ ಜಮೆಯಾಗಿದೆ.

  • ಬ್ಯಾಂಕ್ ಆಫ್ ಬರೋಡಾ (BoB): ₹5,848 ಕೋಟಿ

  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ₹5,549 ಕೋಟಿ

  • ಖಾಸಗಿ ಬ್ಯಾಂಕ್‌ಗಳು: ಎಚ್‌ಡಿಎಫ್‌ಸಿ (HDFC) ಬ್ಯಾಂಕ್‌ನಲ್ಲಿ ₹1,912 ಕೋಟಿ ಮತ್ತು ಆಕ್ಸಿಸ್ (Axis) ಬ್ಯಾಂಕ್‌ನಲ್ಲಿ ₹1,734 ಕೋಟಿ ಹಣವಿದೆ.

ವಾರಸುದಾರರಿಲ್ಲದ ಠೇವಣಿ ಎಂದರೆ ಏನು?

10 ವರ್ಷಗಳ ನಿಷ್ಕ್ರಿಯತೆ: ಯಾವುದೇ ಉಳಿತಾಯ ಖಾತೆ ಅಥವಾ ಕರೆಂಟ್ ಅಕೌಂಟ್‌ನಲ್ಲಿ 10 ವರ್ಷಗಳವರೆಗೆ ಯಾವುದೇ ವ್ಯವಹಾರ ನಡೆಯದೇ ಇದ್ದರೆ ಅದನ್ನು ನಿಷ್ಕ್ರಿಯ ಎನ್ನಲಾಗುತ್ತದೆ. ಜೊತೆಗೆ, ಫಿಕ್ಸೆಡ್ ಡೆಪಾಸಿಟ್ ಅವಧಿ ಮುಗಿದು 10 ವರ್ಷಗಳಾದರೂ ಯಾರೂ ಹಣ ಹಿಂಪಡೆಯದಿದ್ದರೆ ಅದನ್ನು 'ಅನ್‌ಕ್ಲೈಮ್ಡ್ ಡೆಪಾಸಿಟ್' ಎಂದು ಪರಿಗಣಿಸಿ ಆರ್‌ಬಿಐ ನಿಧಿಗೆ ವರ್ಗಾಯಿಸಲಾಗುತ್ತದೆ. ಇದರೊಂದಿಗೆ, ಖಾತೆದಾರರು ಮರಣ ಹೊಂದುವುದು, ನಾಮಿನಿ (Nominee) ಹೆಸರನ್ನು ಸೇರಿಸದೇ ಇರುವುದು, ಅಥವಾ ಕುಟುಂಬದವರಿಗೆ ಬ್ಯಾಂಕ್ ಖಾತೆಯ ಬಗ್ಗೆ ಮಾಹಿತಿ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ.

ನಿಮ್ಮ ಅಥವಾ ನಿಮ್ಮ ಹಿರಿಯರ ಹಣವನ್ನು ಪತ್ತೆ ಮಾಡುವುದು ಹೇಗೆ?

ಈ ಹಣ ಶಾಶ್ವತವಾಗಿ ಸರ್ಕಾರದ ಪಾಲಾಗುವುದಿಲ್ಲ. ಅಸಲಿ ವಾರಸುದಾರರು ಅಥವಾ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳು ಸೂಕ್ತ ದಾಖಲೆ ನೀಡಿ ಇದನ್ನು ಮರಳಿ ಪಡೆಯಬಹುದು. ಅದರಂತೆ,

  • UDGAM ಪೋರ್ಟಲ್ ಬಳಸಿ: ಆರ್‌ಬಿಐ ಇದಕ್ಕಾಗಿ ಉದ್ಗಮ್ (UDGAM) ಎಂಬ ಅಧಿಕೃತ ವೆಬ್‌ಸೈಟ್ ಪೋರ್ಟಲ್ ಲಾಂಚ್ ಮಾಡಿದೆ.

  • ನೋಂದಣಿ ಮಾಡಿ: ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ಉದ್ಗಮ್ ಪೋರ್ಟಲ್‌ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

  • ಮಾಹಿತಿ ಹುಡುಕಿ: ಖಾತೆದಾರರ ಹೆಸರು, ಪ್ಯಾನ್ ಕಾರ್ಡ್ (PAN), ವೋಟರ್ ಐಡಿ ಅಥವಾ ಹುಟ್ಟಿದ ದಿನಾಂಕವನ್ನು ನಮೂದಿಸಿ ವಿವಿಧ ಬ್ಯಾಂಕ್‌ಗಳಲ್ಲಿ ಹಣ ಬಾಕಿ ಇದೆಯೇ ಎಂದು ಪರಿಶೀಲಿಸಬಹುದು.

  • ಬ್ಯಾಂಕ್ ಸಂಪರ್ಕಿಸಿ: ಪೋರ್ಟಲ್‌ನಲ್ಲಿ ಮಾಹಿತಿ ಸಿಕ್ಕರೆ, ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಅಗತ್ಯ ಕೆವೈಸಿ (KYC) ದಾಖಲೆಗಳು ಮತ್ತು ಮರಣ ಪ್ರಮಾಣಪತ್ರ (ಅನ್ವಯಿಸಿದರೆ) ನೀಡಿ ಹಣವನ್ನು ಕ್ಲೈಮ್ ಮಾಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi's I-Day speech: 'ನಮ್ಮ ಕನಸು, ಸಂಕಲ್ಪಗಳು ದೊಡ್ಡದಾಗಿರಬೇಕು; 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಿಯೇ ತೀರುತ್ತೇವೆ: ಪ್ರಧಾನಿ ಮೋದಿ-Video

80th Independence Day|ಯುವಜನತೆ ಸಾಮರ್ಥ್ಯವನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು: ಪ್ರಧಾನಿ ಮೋದಿ-Video

ಯುವ ಉದ್ಯೋಗ ಸೇತು, ವಿದ್ಯಾರ್ಥಿ ಸಹಾಯಹಸ್ತ, ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ CM ಡಿ ಕೆ ಶಿವಕುಮಾರ್ ಪ್ರಮುಖ ಘೋಷಣೆಗಳು-Video

'RSS ನೋಂದಣಿ ಆಗಿಲ್ಲ, ಮುಂದೆಯೂ ಆಗಲ್ಲ': B L ಸಂತೋಷ್

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ- ಸ್ವಾತಂತ್ರ್ಯ ದಿನದ ಹಿನ್ನೆಲೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮುರ್ಮು ಮಾತು