ಕೇವಲ 46 ಪೈಸೆ ಬಿಲ್ ಬಾಕಿಗೆ ₹1200 ದಂಡ! AI Image
ವಾಣಿಜ್ಯ

ಕೇವಲ 46 ಪೈಸೆ ಬಿಲ್ ಬಾಕಿಗೆ ₹1200 ದಂಡ! ಕ್ರೆಡಿಟ್ ಕಾರ್ಡ್ ಗ್ರಾಹಕನಿಗೆ ಶಾಕ್ ನೀಡಿದ ಬ್ಯಾಂಕ್; ಲೇಟ್ ಫೀ ಬಗ್ಗೆ ಆರ್‌ಬಿಐ ನಿಯಮವೇನು?

46 ಪೈಸೆ ಅಲ್ವಾ ವಾಪಸ್ ಕೊಡದೇ ಹೋದರೆ ಏನಾಗುತ್ತೆ? ಅಂತ ಸುಮ್ಮನೆ ಕೂತರೆ ತಲೆ ಮೇಲೆ ಆಕಾಶ ಬೀಳೋದು ಪಕ್ಕಾ! ಹೌದು, ಇಲ್ಲೊಬ್ಬ ಗ್ರಾಹಕ ತಮ್ಮ HDFC Bank credit card ಬಿಲ್ ಪಾವತಿಸುವಾಗ ಕೇವಲ 46 ಪೈಸೆ ಕಡಿಮೆ ಪಾವತಿಸಿದರು. ಇದರ ಪರಿಣಾಮ, Bank ಆ ಗ್ರಾಹಕನಿಗೆ ₹1200 ಪಾವತಿಸುವಂತೆ ನೋಟಿಸ್ ನೀಡಿದೆ.

46 ಪೈಸೆ. ಹೇ, 46 ಪೈಸೆ ಅಲ್ವಾ ವಾಪಸ್ ಕೊಡದೇ ಹೋದರೆ ಏನಾಗುತ್ತೆ? ಅಂತ ಸುಮ್ಮನೆ ಕೂತರೆ ತಲೆ ಮೇಲೆ ಆಕಾಶ ಬೀಳೋದು ಪಕ್ಕಾ! ಹೌದು, ಇಲ್ಲೊಬ್ಬ ಗ್ರಾಹಕ ತಮ್ಮ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವಾಗ ಒಂದು ಸಣ್ಣ ತಪ್ಪು ಮಾಡಿದ್ದರು. ಅದುವೇ, ಆನ್‌ಲೈನ್‌ನಲ್ಲಿ ಪಾವತಿ ಮಾಡುವಾಗ ಕೇವಲ ₹46 ಪೈಸೆ ಕಡಿಮೆ ಪಾವತಿಸಿದರು. ಇದರ ಪರಿಣಾಮ, ಬ್ಯಾಂಕ್ ಆ ಗ್ರಾಹಕನಿಗೆ 1200 ರೂಪಾಯಿ ಪಾವತಿಸುವಂತೆ ನೋಟಿಸ್ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಡಾ. ಸಮೀರ್ ಕಾಗಲ್ಕರ್ ಎಂಬ ಗ್ರಾಹಕರು ತಮ್ಮ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವಾಗ ಒಂದು ಸಣ್ಣ ತಪ್ಪು ಮಾಡಿದ್ದರು. ಅದುವೇ, ಅವರ ಒಟ್ಟು ಬಿಲ್ ₹10,649.46 ಆಗಿತ್ತು. ಆದರೆ ಅವರು ಆನ್‌ಲೈನ್‌ನಲ್ಲಿ ಪಾವತಿ ಮಾಡುವಾಗ ಕೇವಲ ₹10,649 ಮಾತ್ರ ಪಾವತಿಸಿದ್ದರು. ಅಂದರೆ ಕೇವಲ 46 ಪೈಸೆ ಕಡಿಮೆ ಪಾವತಿಸಲಾಗಿತ್ತು. ಈ ಅತ್ಯಲ್ಪ ಮೊತ್ತ ಬಾಕಿ ಉಳಿದಿದ್ದಕ್ಕೆ ಬ್ಯಾಂಕ್ ಅವರಿಗೆ ₹1,200 ಕ್ಕೂ ಹೆಚ್ಚು ತಡಶುಲ್ಕ ಮತ್ತು ಜಿಎಸ್‌ಟಿ ದಂಡ ವಿಧಿಸಿದೆ! ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾಗಲ್ಕರ್, ಬ್ಯಾಂಕಿನ ಕಸ್ಟಮರ್ ಕೇರ್ ಸಿಬ್ಬಂದಿಗೆ ಕರೆ ಮಾಡಿದರೆ, ಬೇಜವಾಬ್ದಾರಿಯಿಂದ ಮತ್ತು ಅಹಂಕಾರದಿಂದ ವರ್ತಿಸಿದರು ಎಂದು ಆರೋಪಿಸಿದ್ದಾರೆ. ಇನ್ನು, ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಂಕ್‌ಗಳ ನಿಯಮಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕೆಲವರು, ಬ್ಯಾಂಕ್‌ಗಳ ಆಟೋಮೇಟೆಡ್ ವ್ಯವಸ್ಥೆಯಲ್ಲಿ ಯಾವುದೇ ಸಾಮಾನ್ಯ ಜ್ಞಾನವಿಲ್ಲ. ಇಷ್ಟು ಸಣ್ಣ ಮೊತ್ತಕ್ಕೆ ಇಷ್ಟೊಂದು ದೊಡ್ಡ ದಂಡ ಹಾಕುವುದು ಅನ್ಯಾಯ ಎಂದು ಕಿಡಿಕಾರಿದ್ದಾರೆ.

ಆದರೆ, ಇಷ್ಟೊಂದು ದಂಡ ಹಾಕಲು ಕಾರಣವೇನು?

ಕ್ರೆಡಿಟ್ ಕಾರ್ಡ್ ನಿಯಮಗಳ ಪ್ರಕಾರ, ನೀವು ಬಿಲ್‌ನ ಪೂರ್ಣ ಮೊತ್ತದಲ್ಲಿ ಕೇವಲ 1 ರೂಪಾಯಿ ಅಥವಾ ಕೆಲವು ಪೈಸೆಗಳನ್ನು ಕಡಿಮೆ ಕಟ್ಟಿದರೂ ಬ್ಯಾಂಕುಗಳು, ನಿಮಗೆ ಸಿಗುವ 45 ರಿಂದ 50 ದಿನಗಳ ಬಡ್ಡಿ ರಹಿತ ಅವಧಿ ರದ್ದು ಮಾಡಿ, ನೀವು ಬಾಕಿ ಉಳಿಸಿದ 46 ಪೈಸೆಗಷ್ಟೇ ಅಲ್ಲದೆ, ಆ ತಿಂಗಳು ನೀವು ಕಾರ್ಡ್ ಬಳಸಿ ಮಾಡಿದ ಇಡೀ ಖರ್ಚಿನ ಮೊತ್ತಕ್ಕೆ (ಅಂದರೆ ₹10,649 ಕ್ಕೆ) ಮೊದಲ ದಿನದಿಂದಲೇ ಅನ್ವಯವಾಗುವಂತೆ ಭಾರಿ ಬಡ್ಡಿ ಮತ್ತು ವಿಳಂಬ ಶುಲ್ಕವನ್ನು ಲೆಕ್ಕ ಹಾಕಲಾಗುತ್ತದೆ. ಇದೇ ಕಾರಣಕ್ಕೆ ₹1,200 ಬಿಲ್ ಬಂದಿದೆ.

ಹಾಗಾದರೆ, RBI ನಿಯಮ ಹೇಳೋದು ಏನು?

ಆರ್‌ಬಿಐ ನಿಯಮಗಳ ಪ್ರಕಾರ, ಯಾವುದೇ ಹಣಕಾಸು ವಹಿವಾಟು ಅಥವಾ ಬಿಲ್‌ಗಳಲ್ಲಿ 50 ಪೈಸೆಗಿಂತ ಕಡಿಮೆ ಇದ್ದರೆ (ಉದಾಹರಣೆಗೆ 46 ಪೈಸೆ) ಅದನ್ನು ನಿರ್ಲಕ್ಷಿಸಬೇಕು. 50 ಪೈಸೆ ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ಮಾತ್ರ ಮುಂದಿನ ರೂಪಾಯಿಗೆ ಸೇರಿಸಬೇಕು. ಜೊತೆಗೆ, ಕ್ರೆಡಿಟ್ ಕಾರ್ಡ್ ಕಂಪನಿಗಳು ಅಥವಾ ಬ್ಯಾಂಕ್‌ಗಳು ವಿಳಂಬ ಶುಲ್ಕವನ್ನು ಒಟ್ಟು ಬಿಲ್ ಮೊತ್ತದ ಮೇಲೆ ವಿಧಿಸುವಂತಿಲ್ಲ. ಅದರಲ್ಲೂ, ಗ್ರಾಹಕರು ಬಿಲ್‌ನ ಒಂದು ಭಾಗವನ್ನು ಪಾವತಿಸಿದ್ದರೆ, ಕೇವಲ ಪಾವತಿಯಾಗದೆ ಉಳಿದಿರುವ ಬಾಕಿ ಮೊತ್ತದ ಮೇಲೆ ಮಾತ್ರ ದಂಡದ ಲೆಕ್ಕಾಚಾರ ಮಾಡಬೇಕು. ಆದರೆ, ಇಲ್ಲಿ, ಗ್ರಾಹಕರು ಈಗಾಗಲೇ ₹10,649 ಪಾವತಿಸಿದ್ದರಿಂದ, ಬ್ಯಾಂಕ್ ಕೇವಲ ಬಾಕಿ ಇದ್ದ 46 ಪೈಸೆಯ ಆಧಾರದ ಮೇಲೆ ದಂಡ ವಿಧಿಸಬೇಕಿತ್ತೇ ಹೊರತು ಇಡೀ ₹10,649 ಮೊತ್ತದ ಸ್ಲ್ಯಾಬ್ ಮೇಲೆ ಅಲ್ಲ. ಹಾಗಾಗಿ, ಈ ಪ್ರಕರಣದಲ್ಲಿ HDFC ಬ್ಯಾಂಕ್, ಎರಡು ಆರ್‌ಬಿಐ ನಿಯಮಗಳನ್ನು ಗಾಳಿಗೆ ತೂರಿದೆ ಎನ್ನಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!

ಸಿಎಂ ವಿಜಯ್ ಯು- ಟರ್ನ್: ಮತ್ತೊಂದು ಮಹತ್ವದ ಆದೇಶ ಹಿಂಪಡೆದ ತಮಿಳುನಾಡು ಸರ್ಕಾರ!

'ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಒಂದೇ ಒಂದು ಕಲ್ಲು ಇಡೋಕೂ ಬಿಡಲ್ಲ': ತಮಿಳುನಾಡು ಸಚಿವ ಆನಂದ್ ಕ್ಯಾತೆ

ಫುಟ್‌ಪಾತ್‌ ಮೇಲೆ ಮತ್ತೆ ಅಂಗಡಿ ಹಾಕಿದ್ರೆ ಸಾಮಗ್ರಿಗಳನ್ನ ಜಪ್ತಿ ಮಾಡಿ, ದುಪ್ಪಟ್ಟು ದಂಡ ವಿಧಿಸಿ: ಕೃಷ್ಣ ಬೈರೇಗೌಡ ಖಡಕ್ ಸೂಚನೆ