ಸಾಂದರ್ಭಿಕ ಚಿತ್ರ 
ವಾಣಿಜ್ಯ

ಬಂಪರ್ ಕೂಡುಗೆ: ಮಾರುತಿ ಸುಜುಕಿಯ ಈ ಕಾರಿನ ಬೆಲೆಯಲ್ಲಿ 39,000 ರೂ ವರೆಗೆ ಕಡಿತ!

ಎಲ್ಲಾ ಮಾದರಿಯ ವಿಕ್ಟೋರಿಸ್ ಕಾರುಗಳಿಗೂ ಈ ಬೆಲೆ ಪರಿಷ್ಕರಣೆ ಅನ್ವಯಿಸುವುದಿಲ್ಲ. ಮ್ಯಾನುವಲ್ ಮತ್ತು ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆ ಇರುವ ZXi (O) ಮತ್ತು ZXi ಪ್ಲಸ್ (O) ಟ್ರಿಮ್‌ಗಳಿಗೆ ಮಾತ್ರ ಬೆಲೆ ಕಡಿತವನ್ನು ಪರಿಚಯಿಸಲಾಗಿದೆ.

ಮಾರುತಿ ಸುಜುಕಿ ಗ್ರಾಹಕರಿಗೆ ಬಂಪರ್ ಕೊಡುಗೆ ಪ್ರಕಟಿಸಿದೆ. ಭಾರತದಲ್ಲಿ ವಿಕ್ಟೋರಿಸ್ (Victoris)ಕಾರಿನ ಬೆಲೆಗಳನ್ನು ಪರಿಷ್ಕರಿಸಿದೆ. ಆಯ್ದ ಪೆಟ್ರೋಲ್ ಕಾರಿನ ಮೇಲೆ ರೂ .38,900 ವರೆಗೆ ಕಡಿತವನ್ನು ನೀಡುತ್ತಿದೆ. ಮಾರುಕಟ್ಟೆಯಲ್ಲಿ ವಿಕ್ಟೋರಿಸ್ ಗೆ ಉತ್ತಮ ಬೇಡಿಕೆಯಿದ್ದು, ಸಿ-ಸೆಗ್ಮೆಂಟ್ ಮಿಡ್ ಗಾತ್ರದ (C-segment mid-size) ಕಾರುಗಳ ಪೈಕಿ ಎರಡನೇ ಬೆಸ್ಟ್ ಸೆಲ್ಲರ್ ಕಾರು ಆಗಿದೆ.

ಎಲ್ಲಾ ಮಾದರಿಯ ವಿಕ್ಟೋರಿಸ್ ಕಾರುಗಳಿಗೂ ಈ ಬೆಲೆ ಪರಿಷ್ಕರಣೆ ಅನ್ವಯಿಸುವುದಿಲ್ಲ. ಮ್ಯಾನುವಲ್ ಮತ್ತು ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆ ಇರುವ ZXi (O) ಮತ್ತು ZXi ಪ್ಲಸ್ (O) ಟ್ರಿಮ್‌ಗಳಿಗೆ ಮಾತ್ರ ಬೆಲೆ ಕಡಿತವನ್ನು ಪರಿಚಯಿಸಲಾಗಿದೆ. ಈ ನಾಲ್ಕು ಮಾದರಿಯ ಕಾರುಗಳ ಎಕ್ಸ್-ಶೋರೂಂ ಬೆಲೆ ಕಡಿತ 38,900 ರೂ.ಗಳಿಗೆ ಸೀಮಿತವಾಗಿದೆ.

ಪರಿಷ್ಕೃತ ಬೆಲೆಯಲ್ಲಿ ZXi ಪ್ಲಸ್ (O) ಮತ್ತು ಪೆಟ್ರೋಲ್ ರಹಿತ ಸ್ವಯಂಚಾಲಿತ ಕಾರುಗಳ ಬೆಲೆಯಲ್ಲಿ ಶೇ. 2.46 ರಷ್ಟು ಕಡಿತವಾಗಿದೆ. The ZXi Plus (O) ಸ್ವಯಂ ಚಾಲಿತ ವಲ್ಲದ ಮ್ಯಾನುವೆಲ್ ಪೆಟ್ರೋಲ್ ಕಾರುಗಳ ಬೆಲೆಯಲ್ಲಿ ಶೇ. 2.46 ರಷ್ಟು ಮತ್ತು ZXi (O) ಸ್ವಯಂ ಚಾಲಿತ ವಲ್ಲದ ಪೆಟ್ರೋಲ್ ಕಾರುಗಳ ಬೆಲೆಯಲ್ಲಿ ಶೇ. 2.49 ಮತ್ತು ZXi (O)ಶ್ರೇಣಿಯ ಕಾರುಗಳ ಬೆಲೆಯಲ್ಲಿ ಅತಿ ಹೆಚ್ಚು ಶೇ. 2.76 ರಷ್ಟು ಕಡಿತವಾಗಿದೆ.

CNG ವಿಕ್ಟೋರಿಯಸ್ ಕಾರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೆಲವು ಆಯ್ದ ಪೆಟ್ರೋಲ್ ಮ್ಯಾನುವಲ್ ಮತ್ತು ಸ್ವಯಂಚಾಲಿತ ಕಾರುಗಳಿಗೆ ಮಾತ್ರ ಇದು ಸಿಮೀತವಾಗಿದೆ. ವಿಕ್ಟೋರಿಸ್ ಅತ್ಯಂತ ಜನಪ್ರಿಯ ಮತ್ತು ಮಾರುಕಟ್ಟೆಯಲ್ಲಿ ಇತರ ಕಂಪನಿಗಳ ಕಾರುಗಳಿಗೆ ಪೈಪೋಟಿ ನೀಡಬಲ್ಲಾ ಮಾರುತಿ ಸುಜುಕಿಯ ಕಾರು ಆಗಿದೆ.

ಇದು ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟಾಟಾ ಸಿಯೆರಾ, ಹುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ಹೋಂಡಾ ಎಲಿವೇಟ್ ಮತ್ತು ಇತರ ಮಾದರಿಗಳೊಂದಿಗೆ ಪೈಪೋಟಿ ನಡೆಸುತ್ತಿದೆ. ಶೀಘ್ರದಲ್ಲೇ, ನಿಸ್ಸಾನ್ ಟೆಕ್ಟಾನ್ ಸ್ಪರ್ಧೆಗೆ ಸೇರಲು ಸಜ್ಜಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!

ರಾಹುಲ್ ಗಾಂಧಿ ನಿಲುವಿಗೆ ಉಲ್ಟಾ ಹೊಡೆದರೇ ಡಿಕೆಶಿ? CM ನಿವಾಸಕ್ಕೆ ಅದಾನಿ ಭೇಟಿ; ಕೈ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ..!

KPSC ಹಗರಣ: IAS ಅಧಿಕಾರಿ ಗಂಗ್ವಾರ್ ಮನೆ ಮೇಲೆ ED ದಾಳಿ; ಗೇಟ್ ಲಾಕ್ ಮಾಡಿ ಸೆಕ್ಯೂರಿಟಿ ಹೈಡ್ರಾಮಾ, ಕೀ ಮೇಕರ್ ಕರೆಯಿಸಿ ಬಾಗಿಲು ಮುರಿದ ಅಧಿಕಾರಿಗಳು..!

Operation Sindoorನಲ್ಲಿ ಧ್ವಂಸವಾಗಿದ್ದ ಜೈಶ್ ನೆಲೆ ಮರುನಿರ್ಮಾಣ! ಪಾಕ್‌ ಸರ್ಕಾರದಿಂದ 25 ಕೋಟಿ ನೆರವು!

Onion Price: ದಿಢೀರ್ ಈರುಳ್ಳಿ ಬೆಲೆ ಏರಿಕೆ; ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತಷ್ಟು ದುಬಾರಿ ಸಾಧ್ಯತೆ, ದರ ಏರಿಕೆಗೆ ಕಾರಣವೇನು?