ವಾಷಿಂಗ್ಟನ್ (ಅಮೆರಿಕ): ಒಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ (Donald Trump) ಅಮೆರಿಕ - ಇರಾನ್ ಯುದ್ಧ (US-Iran War) ತಲೆನೋವು ಇದರಿಂದ ಜೀವ ಭಯ ಬೇರೆ. ಇದರ ನಡುವೆಯೇ ಡೊನಾಲ್ಡ್ ಟ್ರಂಪ್‍ಗೆ ಮಗ ಎರಿಕ್ ಫ್ರೆಡೆರಿಕ್ ಟ್ರಂಪ್ ಭಾರಿ ಲಾಸ್ ಮಾಡಿದ್ದಾನೆ. ಹೌದು, ಒಮ್ಮೆ ಬಿಟ್‌ಕಾಯಿನ್ ನಂತಹ ಕ್ರಿಪ್ಟೋಕಾಯಿನ್ ಗಳು ಭಾರಿ ಸದ್ದು ಮಾಡ್ಡಿದವು. ಇದನ್ನೇ ನಂಬಿದ ಎರಿಕ್ ಟ್ರಂಪ್ ಅಮೆರಿಕದಲ್ಲಿ ಅತಿ ದೊಡ್ಡ ಬಿಟ್‌ಕಾಯಿನ್ (Bitcoin) ಮೈನಿಂಗ್ ಕಂಪನಿ ಓಪನ್ ಮಾಡಿದ್ದಾನೆ. ಆದ್ರೆ, ಕಂಪನಿ ಕೇವಲ 10 ತಿಂಗಳಲ್ಲಿ ಶೇ. 95 ಕ್ಕಿಂತಲೂ ಹೆಚ್ಚಿನ ಮೌಲ್ಯ ಕುಸಿದಿದೆ. ಆ ಕುರಿತ ವರದಿ ಇಲ್ಲಿದೆ.
ಏನಿದು ಘಟನೆ?
ಒಂದು ಕಾಲದಲ್ಲಿ ಬಿಟ್‌ಕಾಯಿನ್ ಗಣಿಗಾರಿಕೆಯ ಮೂಲಕ ಮಾತ್ರ ಭಾರಿ ಲಾಭ ಗಳಿಸುವ ಭರವಸೆ ನೀಡಿದ್ದ ಅಮೇರಿಕನ್ ಬಿಟ್‌ಕಾಯಿನ್ ಕಾರ್ಪೊರೇಷನ್ ಈಗ ತೀವ್ರ ನಷ್ಟದಲ್ಲಿದೆ. ಬಿಟ್‌ಕಾಯಿನ್ ಗಣಿಗಾರಿಕೆಯ ಮೂಲಕ ಸಾಧ್ಯವಾದಷ್ಟು ಬಿಟ್‌ಕಾಯಿನ್‌ಗಳನ್ನು ಹೊರತೆಗೆದು, ನಂತರ ಅವುಗಳನ್ನು ಸೇವ್ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಲಾಭ ಮಾಡುವುದು ಎರಿಕ್ ಪ್ಲಾನ್ ಆಗಿತ್ತು. ಆದರೆ, ಯಾವಾಗ ಜಗತ್ತು AI ಹಿಂದೆ ಓಡಲು ಪ್ರಾರಂಭಿಸಿತೋ, ಹೂಡಿಕೆದಾರರು, AI ಡೇಟಾ ಕೇಂದ್ರಗಳನ್ನು ನಿರ್ಮಿಸಲು ತಮ್ಮ ವಿದ್ಯುತ್, ಭೂಮಿ ಮತ್ತು ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ಬಳಸುವ ಕಂಪನಿಗಳತ್ತ ತಮ್ಮ ಒಲವು ತೋರಿ ಬಿಟ್‌ಕಾಯಿನ್ ಮಾರಾಟ ಮಾಡುತ್ತಿದಾರೆ. ಇದರೊಂದಿಗೆ, ಜಾಗತಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಪ್ರಪಂಚದಾದ್ಯಂತದ ಕಠಿಣ ಹಣಕಾಸು ನೀತಿಗಳಿಂದಾಗಿ ಹೂಡಿಕೆದಾರರು ಸುರಕ್ಷಿತ ವಿಧಾನದತ್ತ ತಮ್ಮ ಚಿತ್ತ ನೆಟ್ಟಿದಾರೆ.
ಏತನ್ಮಧ್ಯೆ, ರಾಯಿಟ್ ಪ್ಲಾಟ್‌ಫಾರ್ಮ್‌ಗಳು, MARA ಹೋಲ್ಡಿಂಗ್ಸ್, ಸೈಫರ್ ಡಿಜಿಟಲ್ ಮತ್ತು ಟೆರಾವುಲ್ಫ್‌ನಂತಹ ಹಲವಾರು ಅಮೇರಿಕನ್ ಬಿಟ್‌ಕಾಯಿನ್ ಗಣಿಗಾರಿಕೆಯ (American Bitcoin Corp) ಕಂಪನಿಗಳು ತಮ್ಮ ಕ್ರಿಪ್ಟೋ ಉದ್ಯಮದ ಜೊತೆಗೆ AI ಸೇರಿದಂತೆ ಹಲವು ಕ್ಷೇತ್ರಗಲ್ಲಿ ಹೂಡಿಕೆ ಮಾಡುತಿದ್ದಾರೆ. ಹಾಗಾಗಿ, ಆ ಕಂಪೆನಿಗಳ ಷೇರುಗಳು ಶೇ. 60 ಕ್ಕಿಂತಲೂ ಹೆಚ್ಚು ಏರಿಕೆಯಾಗಿವೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಎರಿಕ್ ಟ್ರಂಪ್ ಅವರ ಅಮೇರಿಕನ್ ಬಿಟ್‌ಕಾಯಿನ್ ಕಂಪನಿ ಮಾತ್ರ ಬಿಟ್‌ಕಾಯಿನ್ ಮೇಲೆಯೇ ನಂಬಿಕೆ ಇಟ್ಟಿತು. ಆದ್ದರಿಂದಲೇ ಕಂಪನಿಯ ಷೇರುಗಳಲ್ಲಿ ಸ್ಥಿರ ಕುಸಿತಗೊಂಡಿದೆ.
ಎಷ್ಟು ಕೋಟಿ ಲಾಸ್?
ಬಿಟ್‌ಕಾಯಿನ್ ಮೌಲ್ಯದಲ್ಲಿ ಭಾರಿ ಕುಸಿತ ಕಂಡ ಪರಿಣಾಮ ಕಂಪನಿಯು ಸುಮಾರು $600 ಮಿಲಿಯನ್ ಅಂದ್ರೆ ಸರಿಸುಮಾರು ರೂ.5722 ಕೋಟಿ ಹಣ ಲಾಸ್ ಆಗಿದೆ. ಅದರಲ್ಲೂ, ಎರಿಕ್ ತನ್ನ ಇತರೆ 15 ಕಂಪನಿಯ ಷೇರುಗಳನ್ನು ವಿಲೀನಗೊಳಿಸಿದ ಹೊರತಾಗಿಯೂ, ಕಂಪನಿಯ ಷೇರುಗಳು ಇದುವರೆಗಿನ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿದವು ಎನ್ನಲಾಗಿದೆ.
ಮತ್ತೆ ಬಿಟ್‌ಕಾಯಿನ್ ದರ ಏರುತ್ತಾ?
ಬಿಟ್‌ಕಾಯಿನ್ ತನ್ನ ಗರಿಷ್ಠ ಮಾರುಕಟ್ಟೆ ದರದಿಂದ, ಕಡಿಮೆ ಆಗಿರಬಹುದು. ಆದರೆ, ಮುಂಬರುವ ತಿಂಗಳುಗಳಲ್ಲಿ ಅದರ ಬೆಲೆ ಮತ್ತೆ ತೀವ್ರವಾಗಿ ಏರಿದರೆ, ಅಮೇರಿಕನ್ ಬಿಟ್‌ಕಾಯಿನ್ ಪ್ರಯೋಜನ ಪಡೆಯಬಹುದು ಎಂದು ಅನೇಕ ಮಾರುಕಟ್ಟೆ ತಜ್ಞರು ನಂಬುತ್ತಾರೆ. ಆದಾಗ್ಯೂ, ಇದೀಗ, ಕಂಪನಿಯ ಸಂಪೂರ್ಣ ಭವಿಷ್ಯವು ಒಂದು ವಿಷಯದ ಮೇಲೆ ಅವಲಂಬಿತವಾಗಿದೆ: ಅದುವೇ, ಬಿಟ್‌ಕಾಯಿನ್‌ನ ಬೆಲೆ ಏರಿದರೆ, ಕಂಪನಿಯು ಚೇತರಿಸಿಕೊಳ್ಳಬಹುದು. ಆದಾಗ್ಯೂ, ಕುಸಿತ ಮುಂದುವರಿದರೆ, ಎರಿಕ್ ಟ್ರಂಪ್ ಇನ್ನೂ ದೊಡ್ಡ ಮಟ್ಟದಲ್ಲಿ ಲಾಸ್ ಮಾಡಿಕೊಳ್ಳಬಹುದು.
ಅದರಂತೆ, ಬಿಟ್‌ಕಾಯಿನ್ ಉದ್ಯಮದಲ್ಲಿ ಸರಿಯಾದ ಮುನ್ನೆಚ್ಚರಿಕೆ ವಹಿಸದಿದ್ದರೆ ಎಂತಹ ದೊಡ್ಡ ಉದ್ಯಮಿಗಳೂ ಭಾರಿ ನಷ್ಟ ಅನುಭವಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.