ಆದಾಯ ತೆರಿಗೆ ರಿಟರ್ನ್ಸ್ (ITR) Online Desk
ವಾಣಿಜ್ಯ

ITR ಸಲ್ಲಿಕೆ ಮಾಡದಿದ್ದರೆ ಏನಾಗುತ್ತೆ? ಲೇಟ್ ಆದ್ರೆ ಫೈನ್ ಎಷ್ಟು?

ಅಂದಾಜು 10 ಕೋಟಿ ಭಾರತೀಯರು ಪ್ರತಿ ವರ್ಷ ITR ಸಲ್ಲಿಸುತ್ತಾರೆ. ಅದರಂತೆ, ಈ ವರ್ಷವೂ ಕೋಟ್ಯಂತರ ಭಾರತೀಯರು ITR ಸಲ್ಲಿಸಲಿದ್ದು, ಅದಕ್ಕೆ ಜುಲೈ 31 ಕಡೆಯ ದಿನವಾಗಿದೆ. ಆದರೆ, ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡದಿದ್ದರೆ ಏನಾಗುತ್ತೆ ಗೊತ್ತಾ? ಎಷ್ಟು ಫೈನ್ ಕಟ್ಟಬೇಕು?

ಅಂದಾಜು 10 ಕೋಟಿ ಭಾರತೀಯರು ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುತ್ತಾರೆ. ಅದರಂತೆ, ಈ ವರ್ಷವೂ ಕೋಟ್ಯಂತರ ಭಾರತೀಯರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಿದ್ದು, ಅದಕ್ಕೆ ಜುಲೈ 31 ಕಡೆಯ ದಿನವಾಗಿದೆ. ಆದರೆ, ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡದಿದ್ದರೆ ಏನಾಗುತ್ತೆ ಗೊತ್ತಾ? ಎಷ್ಟು ಫೈನ್ ಕಟ್ಟಬೇಕು?

ಫೈನ್ ಎಷ್ಟು?

ಆದಾಯ ತೆರಿಗೆ ಇಲಾಖೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಅನ್ನು ಕೊನೆಯ ದಿನವಾಗಿ ಗಡುವು ನಿಗದಿ ಪಡಿಸಿದೆ. ಅಕಸ್ಮಾತ್, ಜುಲೈ 31ರೊಳಗೆ ITR ಸಲ್ಲಿಕೆ ಮಾಡದಿದ್ದರೆ, ಭಾರೀ ದಂಡ ಮತ್ತು ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಅದರಂತೆ..

ತಡವಾಗಿ ITR ಸಲ್ಲಿಕೆ ಮಾಡಿದರೆ:

ಜುಲೈ 31ರ ನಂತರ ಸಲ್ಲಿಸುವ ರಿಟರ್ನ್ಸ್‌ ಅನ್ನು Belated ITR ಎಂದು ಕರೆಯಲಾಗುತ್ತದೆ. ಈ Belated ITR ಅನ್ನು ದಂಡದೊಂದಿಗೆ ಸಲ್ಲಿಕೆ ಮಾಡಲು ಕೊನೆಯ ದಿನ 31 ಡಿಸೆಂಬರ್ 2026. ಅದರಂತೆ ಇದಕ್ಕೆ ನಿಮ್ಮ ವಾರ್ಷಿಕ ಒಟ್ಟು ಆದಾಯವು 5 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ 5,000 ರೂಪಾಯಿ ದಂಡ ಹಾಗೂ ಅದಕ್ಕಿಂತ ಕಮ್ಮಿ ಇದ್ದರೆ, 1,000 ರೂಪಾಯಿ ದಂಡ ಇರಲಿದೆ. ಅದರಲ್ಲೂ, ನಿಮ್ಮ ಹಳೆಯ ತೆರಿಗೆ ಪದ್ಧತಿಯಲ್ಲಿ ₹2.5 ಲಕ್ಷ, ಹೊಸ ಪದ್ಧತಿಯಲ್ಲಿ ₹3 ಲಕ್ಷಕ್ಕಿಂತಲೂ ಕೆಡಿಮೆ ಇದ್ದರೆ ಯಾವುದೇ ದಂಡವಿಲ್ಲ.

ಏತನ್ಮಧ್ಯೆ, ಜುಲೈ 31ರ ನಂತರವೂ ನೀವು ಸರ್ಕಾರಕ್ಕೆ ತೆರಿಗೆ ಪಾವತಿಸುವುದು ಇನ್ನು ಬಾಕಿ ಇದ್ದರೆ, ಆ ನಂತರದ ಪ್ರತಿ ತಿಂಗಳಿಗೆ ಶೇ. 1 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಅದರಲ್ಲೂ, ತಿಂಗಳಿನ ಒಂದು ದಿನ ಲೇಟ್ ಆದರೂ ಇಡೀ ತಿಂಗಳ ಬಡ್ಡಿಯನ್ನ ಕಟ್ಟ ಬೇಕು.

ಮುಂದುವರೆದು, ಶೇರು ಮಾರುಕಟ್ಟೆ, ವ್ಯಾಪಾರ ಅಥವಾ ಆಸ್ತಿ ಮಾರಾಟದಿಂದ ಉಂಟಾದ ನಷ್ಟಗಳನ್ನು ಮುಂದಿನ ವರ್ಷದ ಲಾಭದಲ್ಲಿ ಸರಿಹೊಂದಿಸಲು ಆದಾಯ ತೆರಿಗೆ ಕಾಯ್ದೆ ಅವಕಾಶ ನೀಡುತ್ತದೆ. ಆದರೆ, ಜುಲೈ 31 ರೊಳಗೆ ITR ಸಲ್ಲಿಸದಿದ್ದರೆ, ಈ ನಷ್ಟಗಳನ್ನು ಮುಂದಿನ ವರ್ಷಕ್ಕೆ ಕ್ಯಾರಿ ಫಾರ್ವರ್ಡ್ ಮಾಡಲು ಸಾಧ್ಯವಿಲ್ಲ. ಆದರೆ, ಆಸ್ತಿ ಮಾರಾಟದಿಂದ ಆದ ನಷ್ಟಕ್ಕೆ ಮಾತ್ರವೇ ಮಾತ್ರ ವಿನಾಯಿತಿ ಇದೆ.

ಲೇಟ್ ITR ಲೇಟ್ ಹಣ

ನೀವು ITR ಸಲ್ಲಿಸುವುದು ಲೇಟ್ ಆದಷ್ಟೂ ರಿಫಂಡ್ ಬರುವುದೂ ಕೂಡ ಲೇಟ್ ಆಗುತೆ ಮತ್ತು ಆ ಹಣದ ಮೇಲಿನ ಬಡ್ಡಿಯನ್ನೂ ಕೂಡ ನೀವು ಕಳೆದುಕೊಳ್ಳಬಹುದು. ಏತನ್ಮಧ್ಯೆ, ಉದ್ದೇಶಪೂರ್ವಕವಾಗಿ ತೆರಿಗೆ ವಂಚಿಸಲು ITR ಸಲ್ಲಿಸದೆ ಇದ್ದರೆ ಮತ್ತು ಬಾಕಿ ಇರುವ ತೆರಿಗೆ ಮೊತ್ತ ₹10,000 ಕ್ಕಿಂತ ಹೆಚ್ಚಿದ್ದರೆ ಐಟಿ ಇಲಾಖೆ ಕಾನೂನು ಕ್ರಮ ಜರುಗಿಸಬಹುದು. ಇಂತಹ ಸಂದರ್ಭಗಳಲ್ಲಿ 3 ತಿಂಗಳಿಂದ ಹಿಡಿದು 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ 'ಮುಡಾ' ಸಂಕಷ್ಟ: 'ಬಿ' ರಿಪೋರ್ಟ್‌ ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ ED

ಆಗಸ್ಟ್‌ನಲ್ಲಿ ಜಿಎಸ್‌ಟಿ ಸಂಗ್ರಹ 2 ಲಕ್ಷ ಕೋಟಿ ರೂ; ಶೇ.15 ರಷ್ಟು ಹೆಚ್ಚಳ!

ವೃದ್ಧೆಗೆ ದುಬಾರಿ 'ಡಿಯೋರ್' ಬ್ರಾಂಡ್ ನ ಕನ್ನಡಕವನ್ನು ಗಿಫ್ಟ್ ಆಗಿ ನೀಡಿದ ಸಿಎಂ ವಿಜಯ್! Video

ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಸಹಪಾಠಿ ಮೇಲೆ ಹಲ್ಲೆ ಆರೋಪ: ನಟ ದುನಿಯಾ ವಿಜಯ್ ಪುತ್ರನ ವಿರುದ್ಧ ಕೇಸ್

ಅಫ್ಘಾನ್ ವಿರುದ್ಧದ T20 ಸರಣಿಗೆ ಭಾರತ ತಂಡ ಪ್ರಕಟ; ವೈಭವ್ ಸೂರ್ಯವಂಶಿಗೆ ಸ್ಥಾನ; ಬುಮ್ರಾ, ರಾಣಾ ಕಮ್​ಬ್ಯಾಕ್!