Online Desk
ವಾಣಿಜ್ಯ

5 ವರ್ಷಕ್ಕಿಂತ ಕಡಿಮೆ ಕೆಲಸ ಮಾಡಿದ್ರೆ ಗ್ರಾಚ್ಯುಟಿ ಸಿಗಲ್ವಾ? ಕಾನೂನು ಹೇಳೋದು ಏನು?

Gratuity Rules 2026: ಕೆಲವೊಂದು ಸಂದರ್ಭದಲ್ಲಿ ಕೇವಲ ಒಂದೇ ಒಂದು ದಿನ ಕೆಲಸ ಮಾಡಿದರೂ ಕೂಡ ಕಂಪನಿ ಗ್ರಾಚ್ಯುಟಿ ಹಣ ಕೊಡಲೇ ಬೇಕು! ಹಾಗಾದ್ರೆ, ಆ ಸಂದರ್ಭ ಯಾವುದು? ಯಾವ ಕಾರಣಕ್ಕೆ ಕಂಪನಿಯವರು ಗ್ರಾಚ್ಯುಟಿ ಹಣ ಕೊಡ್ತಾರೆ ಗೊತ್ತಾ?

Gratuity Rules 2026: 4 ವರ್ಷ 11 ತಿಂಗಳು ಕಂಪನಿಯಲ್ಲಿ ದುಡಿದೆ. ಆದರೆ, ರಾಜೀನಾಮೆ ಕೊಟ್ಟಾಗ HR ಹೇಳಿದ್ದು - 'ಸಾರಿ ಸರ್, 5 ವರ್ಷ ಆಗಿಲ್ಲ ಹಾಗಾಗಿ ಗ್ರಾಚ್ಯುಟಿ ಇಲ್ಲ' ಅಂತ! 1 ತಿಂಗಳು ಮುಂಚೆ ರಾಜೀನಾಮೆ ಕೊಟ್ಟಿದ್ದಕ್ಕೆ ₹1 ಲಕ್ಷ ನಷ್ಟ ಆಯ್ತಾ? ಹೌದು, ಭಾರತದಲ್ಲಿ ಗ್ರಾಚ್ಯುಟಿಗೆ 5 ವರ್ಷ ಎಂಬ ಕಠಿಣ ನಿಯಮವಿದೆ. ಆದ್ರೆ ಈ ನಿಯಮಕ್ಕೆ 3 ದೊಡ್ಡ ಲೋಪೋಲ್‌ಗಳಿವೆ. ಹೌದು, ಕೆಲವೊಂದು ಸಂದರ್ಭದಲ್ಲಿ ಕೇವಲ ಒಂದೇ ಒಂದು ದಿನ ಕೆಲಸ ಮಾಡಿದರೂ ಕೂಡ ಕಂಪನಿ ಗ್ರಾಚ್ಯುಟಿ ಹಣ ಕೊಡಲೇ ಬೇಕು! ಹಾಗಾದ್ರೆ, ಆ ಸಂದರ್ಭ ಯಾವುದು? ಯಾವ ಕಾರಣಕ್ಕೆ ಕಂಪನಿಯವರು ಗ್ರಾಚ್ಯುಟಿ ಹಣ ಕೊಡ್ತಾರೆ ಗೊತ್ತಾ?

ಏನಿದು ಗ್ರಾಚ್ಯುಟಿ?

ಗ್ರಾಚ್ಯುಟಿ ಎಂದರೆ ಒಬ್ಬ ಉದ್ಯೋಗಿಯು ಒಂದು ಸಂಸ್ಥೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ನಂತರ, ಭಾರತದ ಗ್ರಾಚ್ಯುಟಿ ಪಾವತಿ ಕಾಯ್ದೆ, 1972 ಅಡಿಯಲ್ಲಿ ಆ ಉದ್ಯೋಗಿಗೆ ಕಂಪನಿ ನೀಡುವ ಒಂದು ಬಾರಿಯ ಆರ್ಥಿಕ ಭತ್ಯೆವಾಗಿದೆ.

ಗ್ರಾಚ್ಯುಟಿಯ ಮೂಲ ನಿಯಮ ಏನು?

ಪೇಮೆಂಟ್ ಆಫ್ ಗ್ರಾಚ್ಯುಟಿ ಆಕ್ಟ್ ಪ್ರಕಾರ: ಯಾವುದೇ ಕಂಪನಿಯಲ್ಲಿ ನಿರಂತರವಾಗಿ 4 ವರ್ಷ 240 ದಿನ ಅಂದರೆ 4 ವರ್ಷ 8 ತಿಂಗಳು ಕೆಲಸ ಮಾಡಿರಬೇಕು. ಆಗ ಮಾತ್ರ ನೀವು ರಾಜೀನಾಮೆ ಕೊಟ್ಟಾಗಲೋ, ರಿಟೈರ್ ಆದಾಗಲೋ ಗ್ರಾಚ್ಯುಟಿ ಪಡೆಯಲು ಅರ್ಹರಾಗುತ್ತೀರಿ.

ಇನ್ನು, ಗ್ರಾಚ್ಯುಟಿಯನ್ನ ಹೀಗೆ ಲೆಕ್ಕ ಹಾಕಲಾಗುತ್ತದೆ:

ಗ್ರಾಚ್ಯುಟಿ ಮೊತ್ತ = (ಕೊನೆಯ ತಿಂಗಳ ಮೂಲ ವೇತನ + DA) × (ಕೆಲಸ ಮಾಡಿದ ಒಟ್ಟು ವರ್ಷಗಳು) × 15 ÷ 26

ಹಾಗಾದ್ರೆ, ಯಾವ ಸಂದರ್ಭದಲ್ಲಿ ಗ್ರಾಚ್ಯುಟಿ ಬೇಗ ಸಿಗುತ್ತದೆ?

5 ವರ್ಷಕ್ಕಿಂತ ಕಡಿಮೆ ಇದ್ದರೂ ಗ್ರಾಚ್ಯುಟಿ ಸಿಗುವ 3 ಸಂದರ್ಭಗಳು:

  1. ಕೆಲಸದ ಸಮಯದಲ್ಲಿ ಮರಣವಾದರೆ:

    ಉದ್ಯೋಗಿ ಎಷ್ಟು ದಿನ ಕೆಲಸ ಮಾಡಿದ್ದಾರೆ ಎಂಬ ಲೆಕ್ಕವೇ ಇಲ್ಲ. 6 ತಿಂಗಳು ಕೆಲಸ ಮಾಡಿದ್ದರೂ ಅವರ ಕುಟುಂಬ/ನಾಮಿನಿಗೆ ಪೂರ್ಣ ಗ್ರಾಚ್ಯುಟಿ ಹಣ ಸಿಗುತ್ತದೆ. ಇದು ಕಡ್ಡಾಯವಾಗಿದ್ದು, ಯಾವುದೇ ಕಂಪನಿ ನಿರಾಕರಿಸುವಂತಿಲ್ಲ.

  2. ಕೆಲಸದ ಸಮಯದಲ್ಲಿ ಅಂಗವೈಕಲ್ಯವಾದರೆ:

    ಕೆಲಸದ ವೇಳೆಯಲ್ಲಿ ಅಪಘಾತ ಅಥವಾ ಕಾಯಿಲೆಯಿಂದ ಕೆಲಸ ಮಾಡಲು ಆಗದೇ ಶಾಶ್ವತವಾಗಿ ಅಂಗವೈಕಲ್ಯವಾದರೆ ಆಗಲೂ 5 ವರ್ಷದ ನಿಯಮ ಅನ್ವಯವಾಗುವುದಿಲ್ಲ

    ಉದಾ: ಫ್ಯಾಕ್ಟರಿಯಲ್ಲಿ ಅಪಘಾತವಾಗಿ ಕೈ ಕಳೆದುಕೊಂಡರೆ, ತಕ್ಷಣ ಗ್ರಾಚ್ಯುಟಿ ಸಿಗುತ್ತದೆ.

  3. ಗುತ್ತಿಗೆ ಆಧಾರಿತ ನೌಕರರು:

    ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಕಾನೂನಿನ ಪ್ರಕಾರ, ಫಿಕ್ಸ್ಡ್-ಟರ್ಮ್ ಅಥವಾ ಒಪ್ಪಂದದ ಆಧಾರದ ಮೇಲೆ ನೇಮಕಗೊಳ್ಳುವ ಉದ್ಯೋಗಿಗಳಿಗೆ 5 ವರ್ಷಗಳ ಕಡ್ಡಾಯ ನಿಯಮ ಅನ್ವಯಿಸುವುದಿಲ್ಲ. ಇಂತಹ ನೌಕರರು ಸಂಸ್ಥೆಯಲ್ಲಿ ಕೇವಲ 1 ವರ್ಷದ ಸೇವೆ ಪೂರ್ಣಗೊಳಿಸಿದ್ದರೆ, ಅವರು ಕೆಲಸ ಮಾಡಿದ ಅವಧಿಗೆ ಅನುಗುಣವಾಗಿ ಗ್ರಾಚ್ಯುಟಿ ಪಡೆಯಲು ಅರ್ಹರಾಗಿರುತ್ತಾರೆ.

ನೆನಪಿರಲಿ...

ನಿಮ್ಮ ಕಂಪನಿಯಲ್ಲಿ ಕನಿಷ್ಠ 10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳು ಇದ್ದರೆ ಮಾತ್ರ ಆ ಸಂಸ್ಥೆಗೆ ಗ್ರಾಚ್ಯುಟಿ ಕಾಯ್ದೆ ಅನ್ವಯ. ಏತನ್ಮಧ್ಯೆ, ಕಂಪನಿಯು ನಷ್ಟದಲ್ಲಿದೆ ಅಥವಾ ಆರ್ಥಿಕ ಬಿಕ್ಕಟ್ಟಿನಲ್ಲಿದೆ ಎಂಬ ಕಾರಣ ನೀಡಿ ಗ್ರಾಚ್ಯುಟಿ ಹಣವನ್ನ ನಿರಾಕರಿಸುವಂತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್.ಕೆ. ಅಡ್ವಾಣಿ, ಮನೀಶ್ ಸಿಸೋಡಿಯಾ ಸೇರಿದಂತೆ ದೆಹಲಿಯ 33.13 ಲಕ್ಷ ಮತದಾರರಿಗೆ SIR ನೋಟಿಸ್‌!

ವಾರಣಾಸಿ ಎನ್‌ಕೌಂಟರ್‌ನಲ್ಲಿ 30 ಲಕ್ಷ ಬಹುಮಾನ ಹೊಂದಿದ್ದ ನಕ್ಸಲ್ ಕಮಾಂಡರ್ ಹತ್ಯೆ!

ರಷ್ಯಾ ಸಂಸತ್ ಚುನಾವಣೆ ಮಧ್ಯೆ ಮಾಸ್ಕೋ ಮೇಲೆ ಉಕ್ರೇನ್‌ನಿಂದ ಭೀಕರ ದಾಳಿ: 1,000ಕ್ಕೂ ಹೆಚ್ಚು ಡ್ರೋನ್‌ಗಳಿಂದ ದಾಳಿ!

ಸಲ್ಮಾನ್ ಖಾನ್ ದ್ವಂದ ನಿಲುವುಳ್ಳ ಮೂರ್ಖ: 'ಬಿಗ್ ಬಾಸ್ ಮಾಜಿ ಸ್ಪರ್ಧಿ' ಸೋಫಿಯಾ ಹಯಾತ್ ಕಿಡಿ!

ರಣಜಿ ಟ್ರೋಫಿ 2026-27: ಹೈದರಾಬಾದ್ ತಂಡದ ನಾಯಕರಾಗಿ ಮೊಹಮ್ಮದ್ ಸಿರಾಜ್ ನೇಮಕ!