ಹಣದ ವಿಧಗಳು Online Desk
ವಾಣಿಜ್ಯ

Types of Money: ವೈಟ್ ಮನಿ, ಬ್ಲಾಕ್ ಮನಿ ಗೊತ್ತು! ಆದ್ರೆ ರೆಡ್ ಮನಿ, ಪಿಂಕ್ ಮನಿ ಅಂದ್ರೆ ಏನು ಗೊತ್ತಾ?

Types of Money: ನಾವು ದಿನಾ ವೈಟ್ ಮನಿ ಮತ್ತು ಬ್ಲಾಕ್ ಮನಿ ಬಗ್ಗೆ ಕೇಳುತ್ತೇವೆ. ಆದ್ರೆ ಇತ್ತೀಚೆಗೆ ರೆಡ್ ಮನಿ ಮತ್ತು ಪಿಂಕ್ ಮನಿ ಎಂಬ ಪದಗಳೂ ಸುದ್ದಿಯಲ್ಲಿವೆ. ಹಾಗಾದ್ರೆ, ಈ ಹಣಗಳ ನಡುವಿನ ವ್ಯತ್ಯಾಸ ಏನು ಗೊತ್ತಾ? ಆ ಕುರಿತ ವರದಿ ಇಲ್ಲಿದೆ:

Types of Money: ನಾವು ದಿನಾ ವೈಟ್ ಮನಿ ಮತ್ತು ಬ್ಲಾಕ್ ಮನಿ ಬಗ್ಗೆ ಕೇಳುತ್ತೇವೆ. ತೆರಿಗೆ, ಬ್ಯಾಂಕ್ ಲೋನ್, ಪ್ರಾಪರ್ಟಿ ವಿಚಾರ ಬಂದಾಗ ಈ ಎರಡು ಪದಗಳು ಕಾಮನ್. ಆದ್ರೆ ಇತ್ತೀಚೆಗೆ ರೆಡ್ ಮನಿ ಮತ್ತು ಪಿಂಕ್ ಮನಿ ಎಂಬ ಪದಗಳೂ ಸುದ್ದಿಯಲ್ಲಿವೆ. ಇವು ಸರ್ಕಾರದ ಅಧಿಕೃತ ಪದಗಳಲ್ಲ. ಬದಲಾಗಿ ಷೇರು ಮಾರುಕಟ್ಟೆ, ರಾಜಕೀಯ, ವ್ಯಾಪಾರ ಮತ್ತು ಮಾರ್ಕೆಟಿಂಗ್ ಜಗತ್ತಿನಲ್ಲಿ ಬಳಸುವ ಪದಗಳು. ಹಾಗಾಗಿ, ಈ 4 ಬಗೆಯ ಹಣದ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡರೆ ಹಣಕಾಸಿನ ವ್ಯವಹಾರವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಆ ಕುರಿತ ವರದಿ ಇಲ್ಲಿದೆ:

ಈ ವೈಟ್ ಮನಿ ಅಂದ್ರೇನು?

ಸರ್ಕಾರಕ್ಕೆ ಲೆಕ್ಕ ತೋರಿಸಿ, ತೆರಿಗೆ ಕಟ್ಟಿ ಸಂಪಾದಿಸಿದ ಹಣವೇ ವೈಟ್ ಮನಿ. ಇದಕ್ಕೆ ಪೂರ್ಣ ಕಾನೂನಿನ ಮಾನ್ಯತೆ ಇರುತ್ತದೆ. ಉದಾಹರಣೆಗೆ: ತಿಂಗಳ ಸಂಬಳ - Form 16 ಜೊತೆಗೆ ಬರುವ ಹಣ, ಬ್ಯಾಂಕ್ ಮೂಲಕ ನಡೆಯುವ ವ್ಯಾಪಾರದ ಲಾಭ, FD, ಷೇರು, ಮ್ಯೂಚುವಲ್ ಫಂಡ್‌ನಿಂದ ಬಂದ ಲಾಭ. ಜೊತೆಗೆ ಬಾಡಿಗೆ ಹಾಗೂ ಅದಕ್ಕೆ TDS ಕಟ್ಟಿರುವ ಹಣ

ಮುಂದುವರೆದು, ಇದು ಸಂಪೂರ್ಣ ಕಾನೂನುಬದ್ಧ ಹಣವಾಗಿದ್ದು, ಬ್ಯಾಂಕ್ ಲೋನ್, ಹೋಮ್ ಲೋನ್, ಕಾರ್ ಲೋನ್‌ಗೆ ಬಳಸಬಹುದು. ಇದು IT ರಿಟರ್ನ್ ಫೈಲ್ ಮಾಡಲು ಸುಲಭ ಜೊತೆಗೆ, ಯಾವುದೇ ತನಿಖೆಯ ಭಯ ಇರುವುದಿಲ್ಲ. ಸಿಂಪಲ್ ಆಗಿ ಹೇಳುವುದಾದರೆ, ಇದು ನಿದ್ರೆ ಚೆನ್ನಾಗಿ ಬರುವ ಹಣವೇ ವೈಟ್ ಮನಿ.

ಬ್ಲಾಕ್ ಮನಿ ಅಂದ್ರೇನು?

ಯಾವ ಆದಾಯದ ಮೇಲೆ ಸರ್ಕಾರಕ್ಕೆ ತೆರಿಗೆ ಪಾವತಿಸದೆ, ಕಾನೂನುಬಾಹಿರವಾಗಿ ಬಚ್ಚಿಡಲಾಗುತ್ತದೆಯೋ ಅದನ್ನು ಬ್ಲಾಕ್ ಮನಿ ಅಥವಾ ಕಪ್ಪು ಹಣ ಎನ್ನಲಾಗುತ್ತದೆ. ಇದು ಕೇವಲ ಅಪರಾಧದಿಂದ ಬಂದ ಹಣವಾಗಿರಬೇಕೆಂದಿಲ್ಲ, ಕಾನೂನುಬದ್ಧ ವ್ಯವಹಾರದಿಂದ ಬಂದ ಹಣಕ್ಕೂ ತೆರಿಗೆ ಕಟ್ಟದಿದ್ದರೆ ಅದು ಕಪ್ಪು ಹಣವಾಗಿ ಬದಲಾಗುತ್ತದೆ.

ಮುಂದುವರೆದು, ಲಂಚ, ಭ್ರಷ್ಟಾಚಾರ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಗದು ರೂಪದಲ್ಲಿ ಮಾಡುವ ವಂಚನೆ ಮತ್ತು ತೆರಿಗೆಯಿಂದ ತಪ್ಪಿಸಿಕೊಳ್ಳಲು ಮುಚ್ಚಿಡುವ ಲಾಭಗಳನ್ನು ಬ್ಲಾಕ್ ಮನಿ ಎನ್ನಲಾಗಿದೆ. ಇನ್ನು, ಈ ಹಣವು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿರುತ್ತದೆ. ಅಂದರೆ, ಹೆಚ್ಚಾಗಿ ನಗದು ರೂಪದಲ್ಲಿ, ಚಿನ್ನದ ರೂಪದಲ್ಲಿ ಅಥವಾ ವಿದೇಶಿ ಬ್ಯಾಂಕ್‌ಗಳಲ್ಲಿ (ಹವಾಲಾ ಮೂಲಕ) ಬಚ್ಚಿಡಲಾಗುತ್ತದೆ.

ರೆಡ್ ಮನಿ ಅಂದ್ರೇನು?

ದೇಶದ ಭದ್ರತೆಗೆ ಕಂಟಕವಾದ ರಕ್ತದ ಹಣವನ್ನೇ ರೆಡ್ ಮನಿ ಎನ್ನುವುದು. ಇದು ಬ್ಲಾಕ್ ಮನಿಗಿಂತಲೂ ಅತ್ಯಂತ ಭೀಕರ ಮತ್ತು ಅಪಾಯಕಾರಿ ಪರಿಕಲ್ಪನೆ. ಅಂದರೆ, ಕೇವಲ ತೆರಿಗೆ ವಂಚನೆಗೆ ಸೀಮಿತವಾಗದೆ, ದೇಶದ ಭದ್ರತೆ, ಮಾನವೀಯತೆ ಮತ್ತು ಶಾಂತಿಗೆ ಭಂಗ ತರುವ ಅತ್ಯಂತ ಘೋರ ಅಪರಾಧ ಚಟುವಟಿಕೆಗಳ ಮೂಲಕ ಚಲಾವಣೆಯಾಗುವ ಹಣವನ್ನು ಕೆಂಪು ಹಣ ಎನ್ನಲಾಗುತ್ತದೆ. ಈ ಹಣದ ಹಿಂದೆ ರಕ್ತಪಾತ ಮತ್ತು ಕ್ರೌರ್ಯ ಅಡಗಿರುತ್ತದೆ.

ಮುಂದುವರೆದು, ಅಂತರರಾಷ್ಟ್ರೀಯ ಡ್ರಗ್ಸ್ ಮಾಫಿಯಾ, ಅಕ್ರಮ ಶಸ್ತ್ರಾಸ್ತ್ರಗಳ ಮಾರಾಟ, ಮಾನವ ಕಳ್ಳಸಾಗಣೆ ಮತ್ತು ಹವಾಲಾ ಜಾಲಗಳಿಂದ ಇದನ್ನ ಗಳಿಸಲಾಗುತ್ತದೆ. ಇನ್ನು, ಈ ಹಣದ ಮುಖ್ಯ ಉದ್ದೇಶ ಜಾಗತಿಕವಾಗಿ ಭಯೋತ್ಪಾದನೆಗೆ ಧನಸಹಾಯ ಮಾಡುವುದು ಮತ್ತು ದೇಶಗಳ ಆಂತರಿಕ ಶಾಂತಿಯನ್ನು ಕದಡುವುದಾಗಿರುತ್ತದೆ.

ಪಿಂಕ್ ಮನಿ ಅಂದ್ರೇನು?

ಪಿಂಕ್ ಮನಿ ಎಂದರೆ ಮಹಿಳೆಯರು ತಮ್ಮ ದೇಹ ಅಥವಾ ಲೈಂಗಿಕತೆ ಚಟುವಟಿಕೆಗಳಿಂದ ಗಳಿಸುವ ಹಣ. ವೇಶ್ಯಾವಾಟಿಕೆ, ಅಶ್ಲೀಲ ಚಿತ್ರಗಳು, ಆನ್‌ಲೈನ್ ಡೇಟಿಂಗ್ ಅಥವಾ ಇತರ ಚಟುವಟಿಕೆಗಳಿಂದ ಬರುವ ಆದಾಯವನ್ನು ಪಿಂಕ್ ಮನಿ ಎಂದು ಕರೆಯುತ್ತಾರೆ. ಅದರಂತೆ, ಈ ಪದವು ಲಿಂಗಭೇದಭಾವ ಮತ್ತು ಸಾಮಾಜಿಕ ತಾರತಮ್ಯದೊಂದಿಗೆ ಸಂಬಂಧ ಹೊಂದಿದ್ದು, ಹೆಚ್ಚಾಗಿ ಮಹಿಳೆಯರ ಮೇಲಿನ ಶೋಷಣೆಯನ್ನು ಸೂಚಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಪ್ರಧಾನ್ ರಾಜೀನಾಮೆಯಿಂದ ಭಾರತ ಅಸ್ಥಿರಗೊಳಿಸುವ ವಿದೇಶಿ ಶಕ್ತಿಗಳ ಸಂಚು ವಿಫಲ': ಕೈಲಾಶ್ ವಿಜಯವರ್ಗೀಯ

ಸ್ಕ್ವಾಷ್‌ನಲ್ಲಿ ಇತಿಹಾಸ ಸೃಷ್ಟಿ: ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್ ಗರಿ ಮುಡಿಗೇರಿಸಿಕೊಂಡ ಅನಹತ್ ಸಿಂಗ್, PM ಮೋದಿ ಅಭಿನಂದನೆ!

ಪ್ರಶ್ನೆ ಪತ್ರಿಕೆ ಸೋರಿಕೆ: ಪಂಜಾಬ್ ಶಿಕ್ಷಣ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯ; ಏನೂ ಆಗೇ ಇಲ್ಲ- ಸಿಎಂ ಭಗವಂತ್ ಮಾನ್

ಬೆಂಗಳೂರಿನಲ್ಲಿ ಮತ್ತೊಂದು Road Rage: ಕಾರಿನ ಬಾನೆಟ್ ಮೇಲೆ 1 ಕಿ.ಮೀ ವ್ಯಕ್ತಿ ಎಳೆದೊಯ್ದ ಕ್ಯಾಬ್ ಚಾಲಕ, Video ವೈರಲ್

ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ: ಪ್ರಧಾನ್ ಗೆ ಪರ್ಯಾಯ? ಅನುಭವ, ಇತಿಹಾಸ! ಇಲ್ಲಿದೆ ಮಾಹಿತಿ