ಬ್ಯಾಂಕ್ ರಜೆ Online Desk
ವಾಣಿಜ್ಯ

ಆಗಸ್ಟ್‌ನಲ್ಲಿ ಅರ್ಧ ತಿಂಗಳು ಬ್ಯಾಂಕ್ ಕ್ಲೋಸ್! ಇಲ್ಲಿದೆ ನೋಡಿ ಯಾವ ಯಾವ ದಿನ ರಜೆ ಅನ್ನೋ ಲಿಸ್ಟ್

Bank Holiday: ಮುಂದಿನ ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕುಗಳು ಬರೋಬ್ಬರಿ 14 ದಿನ ಕ್ಲೋಸ್ ಆಗಲಿದೆ! ಅದರಂತೆ, ಆಗಸ್ಟ್ 2026 ರ ಸಂಪೂರ್ಣ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ:

Bank Holiday: ಅದೆಷ್ಟೋ ಸಲ ಬ್ಯಾಂಕ್ ಕೆಲಸ ಮುಗಿಸಬೇಕೆಂದು ನಮ್ಮ ಕೆಲಸಕ್ಕೆ ರಜೆ ತಗೆದುಕೊಂಡು ಬ್ಯಾಂಕುಗಳಿಗೆ ಹೋಗುತ್ತೇವೆ. ಅದರೆ, ಹೀಗೆ ಹೋದ ಅದೆಷ್ಟೋ ಸಂದರ್ಭಗಳಲ್ಲಿ, ಎರಡನೇ ಶನಿವಾರ ಅಥವಾ ನಾಲ್ಕನೇ ಶನಿವಾರ ಎಂದು ತಿಳಿದೇ ರಜೆ ಹಾಕುತ್ತೇವೆ. ಇದು ಗೊತ್ತಾದ ನಂತರ ಬೇಸರವಾಗುತ್ತದೆ. ಇನ್ನೂ ಕೆಲವು ಸಂದರ್ಭದಲ್ಲಿ ಬ್ಯಾಂಕ್ ಪ್ರತಿಭಟನೆಯೋ ಇಲ್ಲಾ ಹಬ್ಬದ ಕಾರಣ ಬ್ಯಾಂಕ್ ತಗೆಯುವುದಿಲ್ಲ; ಹಾಗಾಗಿ, ಇಲ್ಲಿದೆ ನೋಡಿ ಮುಂದಿನ ಆಗಸ್ಟ್ ತಿಂಗಳ ಬ್ಯಾಂಕ್ ರಜೆ ಪಟ್ಟಿ:

ಅರ್ಧ ತಿಂಗಳು ಬ್ಯಾಂಕ್ ಕ್ಲೋಸ್!

ಹೌದು, ಮುಂದಿನ ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕುಗಳು ಬರೋಬ್ಬರಿ 14 ದಿನ ಕ್ಲೋಸ್ ಆಗಲಿದೆ! ಅದರಂತೆ,

ಆಗಸ್ಟ್ 2026 ರ ಸಂಪೂರ್ಣ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ:

  • ವಾರದ ಸಾಮಾನ್ಯ ರಜೆಗಳು (ದೇಶಾದ್ಯಂತ ಅನ್ವಯ)

    • ಆಗಸ್ಟ್ 2 (ಭಾನುವಾರ): ವಾರದ ರಜೆ

    • ಆಗಸ್ಟ್ 8 (ಶನಿವಾರ): ತಿಂಗಳ ಎರಡನೇ ಶನಿವಾರ

    • ಆಗಸ್ಟ್ 9 (ಭಾನುವಾರ): ವಾರದ ರಜೆ

    • ಆಗಸ್ಟ್ 16 (ಭಾನುವಾರ): ವಾರದ ರಜೆ

    • ಆಗಸ್ಟ್ 22 (ಶನಿವಾರ): ತಿಂಗಳ ನಾಲ್ಕನೇ ಶನಿವಾರ

    • ಆಗಸ್ಟ್ 23 (ಭಾನುವಾರ): ವಾರದ ರಜೆ

    • ಆಗಸ್ಟ್ 30 (ಭಾನುವಾರ): ವಾರದ ರಜೆ

ಬ್ಯಾಂಕ್ ರಜೆ
  • ಇದರೊಂದಿಗೆ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಹಬ್ಬಗಳ ರಜೆಗಳು:

    • ಆಗಸ್ಟ್ 4 (ಮಂಗಳವಾರ): ಕೆರ್ ಪೂಜೆ (ಅಗರ್ತಲಾ/ತ್ರಿಪುರಾದಲ್ಲಿ ಮಾತ್ರ ಬ್ಯಾಂಕ್ ರಜೆ).

    • ಆಗಸ್ಟ್ 13 (ಗುರುವಾರ): ಪೇಟ್ರಿಯಾಟ್ಸ್ ಡೇ (ಇಂಫಾಲ/ಮಣಿಪುರದಲ್ಲಿ ಬ್ಯಾಂಕ್ ಮುಚ್ಚಿರುತ್ತದೆ).

    • ಆಗಸ್ಟ್ 15 (ಶನಿವಾರ): ಸ್ವಾತಂತ್ರ್ಯ ದಿನಾಚರಣೆ (ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೆ ಕಡ್ಡಾಯ ರಜೆ).

    • ಆಗಸ್ಟ್ 19 (ಬುಧವಾರ): ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದ್ದೂರ್ ಜಯಂತಿ (ಅಗರ್ತಲಾದಲ್ಲಿ ಮಾತ್ರ ರಜೆ).

    • ಆಗಸ್ಟ್ 25 (ಮಂಗಳವಾರ): ಮೊದಲ ಓಣಂ / ಮಿಲಾದ್-ಎ-ಶರೀಫ್ (ಕೊಚ್ಚಿ, ತಿರುವನಂತಪುರಂ ಮತ್ತು ವಿಜಯವಾಡದಲ್ಲಿ ಬ್ಯಾಂಕ್ ರಜೆ).

    • ಆಗಸ್ಟ್ 26 (ಬುಧವಾರ): ಈದ್-ಎ-ಮಿಲಾದ್ (ಮೊಹಮ್ಮದ್ ಪೈಗಂಬರ್ ಜನ್ಮದಿನ) / ತಿರುವೋಣಂ (ಬೆಂಗಳೂರು, ಮುಂಬೈ, ನವದೆಹಲಿ, ಚೆನ್ನೈ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ರಜೆ).

    • ಆಗಸ್ಟ್ 28 (ಶುಕ್ರವಾರ): ರಕ್ಷಾಬಂಧನ / ಶ್ರೀ ನಾರಾಯಣ ಗುರು ಜಯಂತಿ (ಅಹಮದಾಬಾದ್, ಭೋಪಾಲ್, ಜೈಪುರ, ಲಕ್ನೋ, ಕೊಚ್ಚಿ ಮತ್ತು ತಿರುವನಂತಪುರಂ ಮುಂತಾದ ನಿರ್ದಿಷ್ಟ ರಾಜ್ಯಗಳಲ್ಲಿ ರಜೆ).

ಗಮನಿಸಿ:

ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ, ಎಟಿಎಂ (ATM) ಸೇವೆಗಳು, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಆಪ್ಸ್ ಮತ್ತು ಯುಪಿಐ (UPI) ನಂತಹ ಡಿಜಿಟಲ್ ಸೇವೆಗಳು ಯಾವುದೇ ಅಡಚಣೆಯಿಲ್ಲದೆ 24/7 ಕಾರ್ಯನಿರ್ವಹಿಸುತ್ತವೆ.

ಹಾಗಾಗಿ, ಬ್ಯಾಂಕ್ ಕೆಲಸ ಎಂದು ಮುಂದಾಗುವುದರ ಮೊದಲು ನಿರ್ದಿಷ್ಟ ರಜಾದಿನಗಳನ್ನು ನೋಡಿ ಪ್ಲಾನ್ ಮಾಡುವುದು ಒಳ್ಳೆಯದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಬಂಗಾಳ ಉಪಚುನಾವಣೆ: ನಂದಿಗ್ರಾಮದಲ್ಲಿ ಹತ್ಯೆಗೀಡಾದ ಸಿಎಂ ಆಪ್ತ ಸಹಾಯಕನ ತಾಯಿ ಕಣಕ್ಕೆ!

ಶೇ. 20ರಷ್ಟು ಅಲ್ಪ ಸಂಖ್ಯಾತರು ಸಸ್ಯಾಹಾರಿಗಳು: ಬ್ರಿಕ್ಸ್ ಸಸ್ಯಾಹಾರಿ ಮೆನು ಸಂಬಂದ ಓವೈಸಿ ಪ್ರತಿಕ್ರಿಯೆ

ಮಹಿಳಾ ಬೈಕರ್‌ಗೆ ಡಿಕ್ಕಿ ಪ್ರಕರಣ: ಘಟನೆ ನಡೆದ ಎರಡು ದಿನಗಳ ನಂತರ ಕೊನೆಗೂ ಆರೋಪಿ ಕಾರು ಚಾಲಕ ಅಂದರ್!

‘ವಂದೇ ಮಾತರಂ’ ಮೊದಲ ಎರಡು ಚರಣಗಳಿಗೆ ಸೀಮಿತ: ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ PIL

ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿಗೆ ಸೆಡ್ಡು: ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಮಹಾಗಣಪತಿ ಪ್ರತಿಷ್ಠಾಪನೆ! ಶೋಭಾಯಾತ್ರೆಗೆ ಸಜ್ಜು