ಬ್ಯಾಂಕ್ ಆಫ್ ಬರೋಡಾ Online Desk
ವಾಣಿಜ್ಯ

Bank of Baroda ಗ್ರಾಹಕರಿಗೆ ಶಾಕಿಂಗ್ ಸುದ್ದಿ; ಆಧಾರ್ ನಂಬರ್ ಸೇರಿದಂತೆ ಹಲವು ವೈಯಕ್ತಿಕ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆ!

Bank of Baroda Data Leak: ಭಾರತದ ಮೂರನೇ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಅತಿ ದೊಡ್ಡ ಶಾಕಿಂಗ್ ಸುದ್ದಿ; ಯಾಕಂದ್ರೆ, ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯ ಸುಮಾರು 1 TB ಗಾತ್ರದ ಗ್ರಾಹಕರ ಮಾಹಿತಿಗಳು ಸೋರಿಕೆಯಾಗಿದೆ ಎಂದು ವರದಿಯಾಗಿದೆ.

ವಡೋದರಾ (ಗುಜರಾತ್): ಭಾರತದ ಮೂರನೇ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಅತಿ ದೊಡ್ಡ ಶಾಕಿಂಗ್ ಸುದ್ದಿ; ಯಾಕಂದ್ರೆ, ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯ ಸುಮಾರು 1 TB (ಟೆರಾಬೈಟ್) ಗಾತ್ರದ ಗ್ರಾಹಕರ ಮಾಹಿತಿಗಳು ಡೇಟಾ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಟ್ರಿಪಲ್ ಎಕ್ಸ್ ಹೆಸರಿನ ಹ್ಯಾಕಿಂಗ್ ಗುಂಪು ಈ ಸೈಬರ್ ದಾಳಿಯ ಹೊಣೆ ಹೊತ್ತಿದ್ದು, ಬ್ಯಾಂಕ್ ಸದ್ಯ ಫೋರೆನ್ಸಿಕ್ ಆಡಿಟ್ ಮೂಲಕ ತನಿಖೆ ನಡೆಸುತ್ತಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಬ್ಯಾಂಕ್ ಆಫ್ ಬರೋಡಾದ ಸಿಸ್ಟಮ್‌ ಹ್ಯಾಕ್ ಆಗಿ, ಗ್ರಾಹಕರ ಕೋಟ್ಯಂತರ ಸೂಕ್ಷ್ಮ ದಾಖಲೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಗಂಭೀರ ಸೈಬರ್ ಭದ್ರತಾ ವೈಫಲ್ಯದ ಘಟನೆ ವರದಿಯಾಗಿದೆ. ಜುಲೈ 25ರ ಶನಿವಾರದಂದು ಡಾರ್ಕ್ ವೆಬ್ ಅನ್ನು ಟ್ರ್ಯಾಕ್ ಮಾಡುವ Ransomware.live ಎಂಬ ಜಾಲತಾಣದಲ್ಲಿ ಈ ಮಾಹಿತಿ ಮೊದಲು ಪತ್ತೆಯಾಯಿತು.

ಸೈಬರ್ ದಾಳಿಯ ಹಿಂದೆ ಟ್ರಿಪಲ್ ಎಕ್ಸ್?

ಬ್ಯಾಂಕ್ ಆಫ್ ಬರೋಡಾದ ಸಿಸ್ಟಮ್‌ ಮೇಲೆ ಟ್ರಿಪಲ್ ಎಕ್ಸ್ ಹೆಸರಿನ ಹೊಸ ಹ್ಯಾಕಿಂಗ್ ಗುಂಪು ಈ ಸೈಬರ್ ದಾಳಿ ಮಾಡಿರುವುದಾಗಿ ಹೊಣೆ ಹೊತ್ತುಕೊಂಡಿದೆ. ಈ ಗುಂಪು ಇತ್ತೀಚೆಗಷ್ಟೇ ಇಂಡೋನೇಷ್ಯಾದ ಸರ್ಕಾರಿ ಬ್ಯಾಂಕ್ ಒಂದರ ಡೇಟಾವನ್ನು ಕೂಡ ಇದೇ ರೀತಿ ಕದ್ದಿತ್ತು. ಆರಂಭಿಕ ವರದಿಗಳ ಪ್ರಕಾರ, ಬ್ಯಾಂಕಿನ ಇಮೇಲ್ ವ್ಯವಸ್ಥೆಯಲ್ಲಾದ ಲೋಪದಿಂದಾಗಿಯೇ ಹ್ಯಾಕರ್‌ಗಳು ಒಳನುಗ್ಗಿದ್ದಾರೆ ಎನ್ನಲಾಗಿದೆ.

ಎಷ್ಟು ಡೇಟಾ ಸೋರಿಕೆಯಾಗಿದೆ?

ಹ್ಯಾಕರ್‌ಗಳು ಸುಮಾರು 1 TB (1,000 GB) ಗಾತ್ರದ ಬೃಹತ್ ಡೇಟಾವನ್ನು ಇಂಟರ್ನೆಟ್‌ನಲ್ಲಿ ಉಚಿತವಾಗಿ ಹಾಗೂ ಹರಾಜಿನ ಮೂಲಕ ಲೀಕ್ ಮಾಡಿದ್ದಾರೆ. ಇದರಲ್ಲಿ ಬ್ಯಾಂಕ್ ಖಾತೆ ತೆರೆಯುವಾಗ ಗ್ರಾಹಕರು ಸಲ್ಲಿಸಿದ 1 ಲಕ್ಷದಿಂದ 3 ಲಕ್ಷದಷ್ಟು ಕಸ್ಟಮರ್ ಅಪ್ಲಿಕೇಶನ್ ಫಾರ್ಮ್‌ಗಳು, ಅವರ ಫೋಟೋಗಳು ಮತ್ತು ಗುರುತಿನ ಚೀಟಿಗಳಿವೆ ಎಂದು ಅಂದಾಜಿಸಲಾಗಿದೆ.

ಸೋರಿಕೆಯಾಗಿರುವ ಮುಖ್ಯ ದಾಖಲೆಗಳು ಯಾವುವು?

  • ಗ್ರಾಹಕರ ವೈಯಕ್ತಿಕ ಮಾಹಿತಿ: ಗ್ರಾಹಕರ ಹೆಸರು, ಮೊಬೈಲ್ ಸಂಖ್ಯೆಗಳು ಮತ್ತು ಆಧಾರ್ ಕಾರ್ಡ್ ವಿವರಗಳು.

  • ಬ್ಯಾಂಕಿಂಗ್ ವ್ಯವಹಾರಗಳು: ಸೇವಿಂಗ್ಸ್ ಮತ್ತು ಕರೆಂಟ್ ಖಾತೆಗಳ ಬ್ಯಾಲೆನ್ಸ್ ವಿವರಗಳು, ನೆಟ್ ಬ್ಯಾಂಕಿಂಗ್ ಬಳಕೆದಾರರ ಐಡಿಗಳು.

  • ಸಾಲದ ಪೇಪರ್‌ಗಳು: ಗ್ರಾಹಕರು ಲೋನ್ ಪಡೆಯಲು ಸಲ್ಲಿಸಿದ ಆಸ್ತಿ ಪತ್ರಗಳು ಮತ್ತು ಸಾಲ ಮೌಲ್ಯಮಾಪನ ದಾಖಲೆಗಳು.

  • ಬ್ಯಾಂಕಿನ ರಹಸ್ಯ ವರದಿಗಳು: ಬ್ಯಾಂಕ್ ಶಾಖೆಗಳ ಆಡಿಟ್ ವರದಿಗಳು, ಆಂತರಿಕ ಇಮೇಲ್ ಸಂವಹನಗಳು, ವಿಜಿಲೆನ್ಸ್ ತನಿಖಾ ವರದಿಗಳು ಮತ್ತು 'bob World' ಮೊಬೈಲ್ ಆಪ್‌ನ ಆಡಿಟ್ ರಿಪೋರ್ಟ್‌ಗಳು

ಸೈಬರ್ ತಜ್ಞರು ಹೇಳಿದ್ದೇನು?

ಭಾರತದ ಪ್ರಮುಖ ಸೈಬರ್ ಸುರಕ್ಷತಾ ಸಂಶೋಧಕ ಶ್ರೀಕಾಂತ್ ಲಕ್ಷ್ಮಣನ್ ಅವರು ಹ್ಯಾಕರ್‌ಗಳು ಹಂಚಿಕೊಂಡಿದ್ದ ಸ್ಯಾಂಪಲ್ ಫೈಲ್‌ಗಳನ್ನು ಪರಿಶೀಲಿಸಿ, ಇದು ನಿಜವಾದ ಡೇಟಾ ಹ್ಯಾಕ್ ಎಂದು ದೃಢಪಡಿಸಿದರು ಮತ್ತು ಇದನ್ನು ಸೈಬರ್ ದುರಂತ ಎಂದು ಕರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಪಕ್ಷಗಳ ಪ್ರತಿಭಟನೆಯ ನಡುವೆ, ಲೋಕಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ನಿಗ್ರಹ ತಿದ್ದುಪಡಿ ಮಸೂದೆ ಮಂಡನೆ; Video

ಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರ ಇಲ್ಲ; ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ಸಿದ್ಧರಾಗಿ: ಸಿಟಿ ರವಿಗೆ ಪ್ರಿಯಾಂಕ್‌ ಖರ್ಗೆ ಖಡಕ್ ಎಚ್ಚರಿಕೆ

E20 ಡೀಪ್‌ಫೇಕ್: Meta, Google ವಿರುದ್ಧ ಮೊಕದ್ದಮೆ ಹೂಡಲು ಬಾಂಬೆ ಹೈಕೋರ್ಟ್ ಅನುಮತಿ!

ಚುನಾವಣಾ ರಾಜಕೀಯದಿಂದ ಸಿದ್ದರಾಮಯ್ಯ ನಿವೃತ್ತಿ: ಸಚಿವ ಯತೀಂದ್ರ ಹೇಳಿದ್ದೇನು ಗೊತ್ತಾ? Video

40 ನಿಮಿಷ ಪೊಲೀಸ್ ವ್ಯಾನ್ ತಡೆದಿದ್ದ 'ಗಟ್ಟಿಗಿತ್ತಿ'ಗೇ ಕಿರುಕುಳ: ದೂರು ದಾಖಲಿಸಿದ ವೈರಲ್ ಯುವತಿ!